ಜಿಲ್ಲಾ ಸುದ್ದಿತಾಜಾ ಸುದ್ದಿ

ಸಂಪನ್ನಗೊಂಡ ಶ್ರೀ ಕಾಳಿಕಾಂಬ ದೇವಿಯ ವೈಭವದ ಅಂಬಾರಿ ಉತ್ಸವ

Share Below Link

ನ್ಯಾಮತಿ : ನ್ಯಾಮತಿ ಪಟ್ಟಣದ ಶ್ರೀ ಕಾಳಿಕಾಂಬ ದೇವಿಯ ದಸರಾ ಮಹೋತ್ಸವ , ಸನಾತನ ಧಮೋ ತ್ಸವ , ಶ್ರೀ ಕಾಳಿಕಾಂಬ ದೇವಿಯ ಅಂಬಾರಿ ಉತ್ಸವ ವೈಭವದ ಅಂಬಾರಿ ಉತ್ಸವ ಬುಧವಾರ ನಡೆಯಿತು.
ಪಟ್ಟಣದ ಶ್ರೀ ಕಾಳಿಕಾಂಬಾ ಬೀದಿಯ ಶ್ರೀ ಕಾಳಿಕಾಂಬಾ ದೇಗುಲದ ಶ್ರೀ ಕಾಳಿಕಾಂಬಾ ದೇವಿಯ ಉತ್ಸವ ಮೂರ್ತಿಯನ್ನು ಅಂಬಾರಿ ಹೊತ್ತ ಗಜರಾಜ ಹಾಗೂ ಜಗದ್ಗುರು ರೇಣುಕಾಚಾರ್ಯ , ಭಕ್ತಿ ಭಂಡಾರಿ ಬಸವಣ್ಣ , ವಿಶ್ವಕರ್ಮರ , ವಾಲ್ಮಿಕಿ , ತಿಂಥಣಿ ಮನೇಶ್ವರ , ಅಧಿಶಂಕರಚಾರ್‍ಯರ , ಭಕ್ತಕನಕದಾಸರು , ಮಾದರ ಹರಳಯ್ಯ ,ಮಡಿವಾಳ ಮಾಚಯ್ಯ ಸೇರಿದಂತೆ ವಿವಿಧ ದಾರ್ಶನಿಕರ ಭಾವಚಿತ್ರಗಳನ್ನು ತೆರೆದ ಅಲಕೃತ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.
ಮಧ್ಯಾಹ್ನದ ೧೧ ಗಂಟೆ ಹೊತ್ತಿಗೆ ಶ್ರೀ ಕಾಳಿಕಾಂಬಾ ದೇವಿ ಯ ವೈಭವದ ಶ್ರೀ ಕಾಳಿಕಾಂಬ ದೇವಿಯ ದಸರಾ ಮಹೋತ್ಸವ , ಸನಾತನ ಧಮೋತ್ಸವ , ಶ್ರೀ ಕಾಳಿಕಾಂಬ ದೇವಿಯ ಅಂಬಾರಿ ಉತ್ಸವ ಅಂಬಾರಿ ಉತ್ಸವಗೆ ಪುರೋಹಿತರ ಮತ್ತು ಅರ್ಚಕರ ವೃಂದ ಪೂಜ ಸಲ್ಲಿಸಿದ ಬಳಿಕ ನ್ಯಾಮತಿ ತಹಶೀಲ್ದಾರ್ ಎಚ್.ಬಿ. ಗೋವಿಂದಪ್ಪ ಚಾಲನೆ ನೀಡಿದರು.
ಅಲಂಕೃತಗೊಂಡ ಗಜ ರಾಜ ಗಾಂಭೀರ್ಯದಿಂದ ಶ್ರೀ ಕಾಳಿ ಕಾಂಬಾ ದೇವಿಯ ಮೂರ್ತಿ ಹೊತ್ತು ಹೆಜ್ಜೆ ಹಾಕುತ್ತಿದ್ದರೆ; ಸುತ್ತಲೂ ಇದ್ದ ಭಕ್ತರು ಜೈಕಾರ ಹಾಕುತ್ತಿದ್ದರು. ಮೆರವಣಿಗೆ ಯುದ್ದಕ್ಕೂ ಜನರು ಹೂವಿನ ಮಳೆಗೆರೆದರು.ಸುಂದರವಾಗಿ ಅಲಂಕೃತಗೊಳಿಸಲಾಗಿದ್ದ ಆನೆಯ ಮೇಲೆ ದೇವಿಯ ಸುಂದರ ಅಲಂಕಾರ ನೋಡುಗರನ್ನು ಭಕ್ತಿ ಪರವಶರನ್ನಾಗಿ ಮಾಡಿತು.
ದೇಗುಲದಲ್ಲಿ ಶ್ರೀ ವಿಘ್ನೇಶ್ವರ , ಶ್ರೀ ಕಾಳಿಕಾಂಬಾ ದೇವಿಯ ಮೂರ್ತಿ , ಶ್ರೀಮನೇಶ್ವರ ಸ್ವಾಮಿ , ನವಗ್ರಹಗಳ ಶಿಲಾ ಮೂರ್ತಿಗೆ ಶ್ರೀ ಕಾಳಿಕಾಂಬಾ ದೇವಿಯ ದಸರಾ ಮಹೋತ್ಸವದ ಅಂಗವಾಗಿ ಕಳೆದ ೧೧ ದಿನಗಳಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಿತ್ಯ ಸಾವಿರಾರು ಜನ ದೇವಿಯ ದರ್ಶನ ಪಡೆದರು. ಅಂಬಾರಿ ಮೆರವಣಿಗೆಯ ವೈಭವ ವನ್ನು ಕಣ್ತುಂಬಿಕೊಳ್ಳಲು ಸುತ್ತ ಮುತ್ತಲಿನ ಜನ ಬಂದಿದ್ದರು. ದೇಗುಲದ ಬಳಿ ಪೂಜೆ ಸಲ್ಲಿಸಿ ಆರಂಭವಾದ ಮೆರವಣಿಗೆ , ಶ್ರೀವೀರಭದ್ರೇಶ್ವರ ರಸ್ತೆ , ಅರಳೀ ಕಟ್ಟೇ ವೃತ್ತ , ಕೋಡಿಕೊಪ್ಪರಸ್ತೆ , ಕಿತ್ತೂರು ರಾಣಿ ಚೆನ್ನಮ್ಮ ವೃತ್ತ , ಮಹಂತೇಶ್ವರ ರಸ್ತೆ , ಬನಶಂಕರಿ ರಸ್ತೆ , ಆಯ್ಯಪ್ಪ ದೇಗುಲದ ರಸ್ತೆ ಸೇರಿದಂತೆ ಮುಖ್ಯ ರಾಜಬೀದಿ ಗಳಲ್ಲಿ ಸಾಗಿದ ದಾರಿಯುದ್ದಕ್ಕೂ ಪೂಜೆ, ಮಂತ್ರ, ಹೂವಿನ ಮಳೆಗೆರೆಯಲಾಯಿತು.
ವಿದ್ಯುತ್ ದೀಪಗಳು ಹೊಳಪು, ತಳಿರು ತೋರಣ, ರಂಗೋಲಿ, ಬಾಳೆ ದಿಂಡು, ಪೂಜೆ ಹೀಗೆ ಅದ್ದೂರಿಯಾಗಿ ಅಲಂಕಾರ ಮಾಡಲಾಗಿತ್ತು. ಅಲ್ಲಲ್ಲಿ ಧ್ವಜ ಸ್ಥಂಬ ವಿಜೃಂಭಿಸಿದವು. ಜನ ಈ ಸುಂದರ ದೃಶ್ಯಗಳನ್ನು ತಮ್ಮ ಮೊಬೈಲ್ ಫೋನ್‌ಗಳನ್ನು ಸೆರೆ ಹಿಡಿಯುವುದು ಸಾಮಾನ್ಯವಾ ಗಿತ್ತು. ದೇವಿಯ ಆಶೀರ್ವಾದ ಪಡೆದರು.ಹಲವು ವರ್ಷಗಳಿಂದ ದಸರಾ ನಡೆಸಿಕೊಂಡು ಬಂದಿರುವ ಶ್ರೀ ಕಾಳಿಕಾಂಬಾ ದೇವಿಯ ದಸರಾ ಮಹೋತ್ಸವದಲ್ಲಿ ದಸಾರ ೩ನೇ ದಿನ ಏಕಾದಶಿಯದಂದು ಅಂಬಾರಿ ಉತ್ಸವ ನಡೆಸಲಾಗಿದ್ದು ದೇಗುಲದ ಪದಾದಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.