ಪೆಸಿಟ್ ಕಾಲೇಜ್‌ನಲ್ಲಿ ಅಮಾತೆ-೨೦೨೪; ವಿಶಿಷ್ಠ ಕಾರ್ಯಕ್ರಮ…
ಶಿವಮೊಗ್ಗ: ಸಂಶೋಧನಾ ಕ್ಷೇತ್ರದಲ್ಲಿ ಪ್ರಪಂಚದ ವಿವಿಧ ದೇಶಗಳು ನಡೆಸುತ್ತಿರುವ ಅದ್ವಿತೀಯ ಸಂಶೋಧನಾ ವಿಷಯ ಗಳ ಬಗ್ಗೆ ಈ ರೀತಿಯ ಸಮ್ಮೇಳನ ಗಳು ಒಡಮೂಡಿಸುವ ವಿಚಾರಗಳ ಬಗ್ಗೆ ಒಂದು ಉತ್ತಮ ವೇದಿಕೆಗಳು ನಿರ್ಮಾಣಗೊಳ್ಳುವಲ್ಲಿ ಸಹಕಾರಿ ಯಾಗಲಿವೆ ಎಂದು ದಕ್ಷಿಣ ಕೊರಿಯಾ ದೇಶದ ಗುಂನ್ಸನ್ ಪ್ರದೇಶದ ಕುನ್ಸನ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಇನ್ ಹೋ ರಾ ಹೇಳಿzರೆ.
ನಗರದ ಹೊರವಲಯದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಐಇಇಇ ಸಹಭಾಗಿತ್ವ ದಲ್ಲಿ ಜರುಗಿದ ಅಮಾತೆ – ೨೦೨೪ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಈ ಬಗೆಯ ಅಂತರರಾಷ್ಟ್ರೀಯ ಸಮ್ಮೇಳನಗಳು ತಮ್ಮ ತಮ್ಮ ದೇಶಗಳಲ್ಲಿ ಕಂಪ್ಯೂಟರ್ ತಂತ್ರeನ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಸೇಜ್ ಲರ್ನಿಂಗ್ ಹಾಗೂ ತತ್ಸಂಬಂಧ ಕ್ಷೇತ್ರಗಳಲ್ಲಿ ಜರುಗುತ್ತಿರುವ ಸಂಶೋಧನೆಗಳ ಬಗ್ಗೆ ಆಮೂಲಾಗ್ರ ಮಾಹಿತಿಯನ್ನು ನೀಡುವಲ್ಲಿ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿಕೊಡಲಿದೆ ಎಂದರು.
ತಮ್ಮ ಜೀವಮಾನದಲ್ಲಿ ನಡೆಸಿದ ಹಲವಾರು ಸಂಶೋಧನೆ ಗಳ ಬಗ್ಗೆ ಅನೇಕ ಪ್ರಯುಕ್ತ ಮಾಹಿತಿಗಳನ್ನು ನೀಡುವ ಮೂಲಕ ಸಾಮಾಜಿಕ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಪ್ರಯತ್ನಿಸ ಬೇಕೆಂದು ಉಪಸ್ಥಿತರಿದ್ದ ಸಭಿಕರ ಮನ ಮುಟ್ಟುವಂತೆ ಹಲವು ಪ್ರಾಯೋಗಿಕ ಉದಾಹರಣೆಗಳ ಸಮೇತ ಸೂಚ್ಯವಾಗಿ ತಿಳಿಸಿದರು.
ಸಂಶೋಧನೆ ಎಂಬುದು ಒಂದು ದೇಶದ ಸಾಂಸ್ಕೃತಿಕ, ಪಾರಿವಾರಿಕ, ವೈeನಿಕ ಹಾಗೂ ತಂತ್ರeನ ಕ್ಷೇತ್ರಗಳ ಪ್ರತಿನಿಧಿಯಾಗಿ ಹೊರಹೊಮ್ಮುವಲ್ಲಿ ಸಹಕಾರಿಯಾಗಲಿದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದು ನುಡಿದರು.
ಪಿಇಎಸ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಮಾತೆ -೨೦೨೪ರ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದ ಸುಭಾಷ್ ಬಿ.ಆರ್. ಮಾತನಾಡಿ, ಪ್ರಸ್ತುತ ಕಾಲಘಟ್ಟ ದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಇಂಜಿನಿಯರಿಂಗ್ ಕ್ಷೇತ್ರವು ನೀಡುತ್ತಿರುವ ಸಂಶೋಧನಾತ್ಮಕ ಕೊಡುಗೆಗಳ ಬಗ್ಗೆ ಪಕ್ಷಿ ನೋಟ ವಿವರಣೆಯನ್ನು ಉಪಸ್ಥಿತರಿದ್ದ ಸಭಿಕರ ಮುಂದೆ ಹಲವಾರು ಪ್ರಾಯೋಗಿಕ ಉದಾಹರಣೆಗಳ ಸಮೇತ ಮಂಡಿಸುವಲ್ಲಿ ಯಶಸ್ಸನ್ನು ಪಡೆದ ಇಂಜಿನಿಯರ್‌ಗಳ ಬಗ್ಗೆ ಕೃತಜ್ಞತೆಯನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಿಇಎಸ್ ಟ್ರಸ್ಟ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ನಾಗರಾಜ್ ಆರ್. ಮಾತನಾಡಿ, ಮಲೆನಾಡು ಭಾಗದ ವಿದ್ಯಾರ್ಥಿ ಸಮೂಹಕ್ಕೆ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಅನುವು ಮಾಡಿ ಕೊಡುವಂತೆ ತಾಂತ್ರಿಕ, ಕೈಗಾರಿಕಾ ಹಾಗೂ ಇಂಜಿನಿಯರಿಂಗ್ ಕ್ಷೇತ್ರ ದಲ್ಲಿ ಜರುಗುತ್ತಿರುವ ಸಂಶೋಧನೆ ಗಳು ಮಾನವ ಸಮಾಜದ ಆಮೂಲಾಗ್ರ ಅಭಿವೃದ್ಧಿಗೆ ಸಹಕಾರಿ ಯಾಗಲಿವೆ ಎಂದು ನುಡಿದರು.
ಡಾ. ಪ್ರಸನ್ನ ಕುಮಾರ್ ಹೆಚ್. ಆರ್. ಮೊದಲಾದವರಿದ್ದರು.