ಜಿಲ್ಲಾ ಸುದ್ದಿತಾಜಾ ಸುದ್ದಿ

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಸಿದ್ಧ: ಟಿ.ಜಿ.ರಮೇಶ್ ಗೌಡ

Share Below Link

ಹೊನ್ನಾಳಿ: ಗ್ರಾಮಗಳ ವ್ಯಾಪ್ತಿ ಹೊಂದಿರುವ ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿಯಿಂದ ಸುಮಾರು ೨ ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಲಾ ಗಿದ್ದು, ೧೫ನೇ ಹಣಕಾಸು ಯೋಜನೆ ಯಡಿ ೧.೫೦ ಲಕ್ಷ ವೆಚ್ಚದಲ್ಲಿ ಗ್ರಾಮಪಂಚಾಯಿತಿ ಅವರಣದಲ್ಲಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಲಾಂಛನದ ರಾಷ್ಟ್ರ ಧ್ವಜ ಸ್ತಂಭವನ್ನು ಗ್ರಾಮಪಂಚಾಯಿತಿ ಅಧ್ಯಕ್ಷ ಟಿ.ಜಿ .ರಮೇಶ್ ಗೌಡ ಅವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ೭ ಗ್ರಾಮಗಳ ವ್ಯಾಪ್ತಿ ಹೊಂದಿರುವ ತಾಲೂಕಿನ ತಿಮ್ಲಾಪುರ ಗ್ರಾಪಂ ಅಧ್ಯಕ್ಷನಾದ ನಂತರದಲ್ಲಿ ಸುಮಾರು ೨ ಕೋಟಿ ಅನುದಾನವನ್ನು ಗ್ರಾಪಂ ವತಿಯಿಂದ ಜಿಪಂ ಯೋಜನೆ ಅಮತ ಸರೋವರ ಯೋಜನೆ ಯಡಿ. ಬೂದಗಟ್ಟೆ ಕೆರೆ ನೀರು ಇಂಗಿಸುವ ಕಾಮಗಾರಿಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ್ದ ರಿಂದ ಸರ್ಕಾರ ತಮ್ಮ ಗ್ರಾಮ ಪಂಚಾಯಿತಿಗೆ ಎರಡನೇ ಬಹುಮಾನ ನೀಡಿ ಪುರಸ್ಕರಿಸಿದೆ, ಪ್ರಮಾಣ ಪತ್ರ ಹಾಗೂ ಮಹಾತ್ಮಾ ಗಾಂಧೀ ಭಾವಚಿತ್ರವಿರುವ ಪಾರಿತೋಷತಕವನ್ನು ಬಹುಮಾನ ವಾಗಿ ನೀಡಿದೆ ಎಂದು ತಿಳಿಸಿದರು,
ತಾನು ಪ್ರಸ್ತುತ ಹೊನ್ನಾಳಿ ಪಿ.ಎಲ್.ಡಿ. ಬ್ಯಾಂಕ್‌ನ ಅಧ್ಯಕ್ಷ ನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲಿ ಕೂಡ ಸುಂದರವಾದ ರಾಷ್ಟ್ರೀಯ ಲಾಂಛನದೊಂದಿಗೆ ರಾಷ್ಟ್ರಧ್ವಜ ಕಟ್ಟೆಯನ್ನು ನಿರ್ಮಿಸ ಲಾಗಿದೆ ಎಂದು ಹೇಳಿದರು.
ತಿಮ್ಲಾಪುರ ಗ್ರಾಪ ವ್ಯಾಪ್ತಿಯಲ್ಲಿ ೫ ಲಕ್ಷ ಅನುದಾನದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ, ಹಳ್ಳ ಮತ್ತು ಕೆರೆಗಳ ಹೊಳೆತ್ತುವುದು, ಬಾಕ್ಸ್ ಚರಂಡಿಗಳು, ೫ ಲಕ್ಷ ವೆಚ್ಚ ದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ತಲಾ ೫ ಲಕ್ಷದಂತೆ ಒಟ್ಟು ೧೦ ಲಕ್ಷ ಅನುದಾನದಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ೧೫ ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್, ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ರಸ್ತೆಗಳ ನಿರ್ಮಾಣ ಹೀಗೆ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ರಸ್ತೆಗಳ ಅಕ್ಕ-ಪಕ್ಕದಲ್ಲಿ ಹಾಗೂ ಶಾಲಾ ಅವರಣಗಳಲ್ಲಿ ಪರಿಸರ ಸಂಕ್ಷಣೆಗಾಗಿ ಗಿಡಗಳನ್ನು ನೆಡೆಸ ಲಾಗಿದೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಗಳಂತಹ ಕಾರ್ಯಕ್ರಮಗಳನ್ನು ಕೂಡ ಗ್ರಾಮಪಂಚಾಯಿತಿಯಿಂದ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಆರ್.ಶಾಂತಮ್ಮ, ಸದಸ್ಯರುಗಳಾದ ಮಂಜು, ಜಿ. ಅಶ್ವಿನಿ ಎಸ್. ಲಲಿತಾಬಾಯಿ, ಕಿರಣ, ಪಿ. ಚಂದ್ರಮ್ಮ, ಟಿ. ಶೇಖರಪ್ಪ, ಗೌರಮ್ಮಮಂಜಪ್ಪ, ಅನುಪಮ, ಬಿ.ಎಚ್. ಜಯಪ್ಪ, ಮೂಸಿನಾ ಭೀ, ಮೆಹಮ್ಮದ್ ಆಲಿ, ಹನುಮಂತಪ್ಪ, ಪ್ರೇಮಾ, ಎನ್.ಜಿ. ಮಹೇಶ್, ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.