ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಓದಿನ ಜೊತೆ ಹೊರ ಸಮಾಜದ ಒಡನಾಟ ಮುಖ್ಯ: ಡಾ| ಸರ್ಜಿ

Share Below Link

ಶಿವಮೊಗ್ಗ : ಗೋಪಾಳ ಬಡಾವಣೆಯಲ್ಲಿರುವ ಗುಡ್ ಶಫರ್ಡ್ ಚರ್ಚ್‌ನಲ್ಲಿ ಎಸ್ ಎಸ್ ಎಲ್ ಸಿ , ಪಿ ಯು ಸಿ ಮತ್ತು ಪದವಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಶಾಸಕ ಡಾ| ಧನಂಜಯ ಸರ್ಜಿ ಅವರು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭ ಕೋರಿ ಮಾತನಾಡಿದರು.
ಓದು ವಕ್ಕಾಲು, ಬುದ್ದಿ ಮುಕ್ಕಾಲು ಎಂಬಂತೆ ಓದು ಕೆಲಸ ಮಾಡಿದರೆ ಬುದ್ದಿ ದೇಶ ಆಳುತ್ತದೆ. ವಿದ್ಯಾಭ್ಯಾಸದ ಜೊತೆ ಜೊತೆಗೆ ಹೊರ ಸಮಾಜದ ಒಡನಾಟವು ಕೂಡ ವಿದ್ಯಾರ್ಥಿಗಳಿಗೆ ತುಂಬಾ ಮುಖ್ಯವಾದುದು ಎಂದರಲ್ಲದೇ, ಗುರುಗಳಾಗಿ, ಪೋಷಕರಾಗಿ ನಾವು ಪಾಠ ಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ , ಒಳ್ಳೆಯ ಶಿಸ್ತು , ಒಳ್ಳೆಯ ಗುಣಗಳನ್ನು ಕಲಿಸಿ ಭವ್ಯ ಭಾರತದ ಮುಂದಿನ ನಾಗರಿಕ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಗುಡ್ ಶಫರ್ಡ್ ಚರ್ಚ್‌ನ ಧರ್ಮಗುರು ಫಾದರ್ ವೀರೇಶ್ ವಿ. ಮೋರಾಸ್ ಅವರು ವಿಧಾನ ಪರಿಷತ್ತಿನ ನೂತನ ಶಾಸಕ ಡಾ| ಧನಂಜಯ ಸರ್ಜಿ ಅವರಿಗೆ ಸನ್ಮಾನಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ತೀರ್ಥಹಳ್ಳಿ ಧರ್ಮಕೇಂದ್ರಕ್ಕೆ ವರ್ಗಾವಣೆ ಗೊಂಡ ಫಾದರ್ ವೀರೇಶ್ ಮೋರಾಸ್ ಅವರನ್ನು ಧರ್ಮಕೇಂದ್ರ ಭಕ್ತರು ಗೌರವಿಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಮತಿ ದಿವ್ಯ ನವೀನ್ , ಶ್ರೀಮತಿ ಜೆನಿತ ಆಲ್ವಿನ್, ವಿಲಿಯಂ ಕ್ಯಾಸ್ತೆಲಿನೊ, ಶ್ರೀಮತಿ ಫ್ಲಾರೆನ್ಸ್ ಮೇರಿ, ಶ್ರೀಮತಿ ಅನಿತಾ ಸಂತೋಷ್ ಹಾಗೂ ಚರ್ಚ್‌ನ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *