ಜಿಲ್ಲಾ ಸುದ್ದಿತಾಜಾ ಸುದ್ದಿ

ವಿದ್ಯಾಭ್ಯಾಸದ ಜೊತೆಗೆ ಮಕ್ಕಳಿಗೆ ಸಾಮಾನ್ಯ ವಿಷಯಗಳ ಅರಿವು ಮುಖ್ಯ: ಶೇಷಾಚಲ

Share Below Link

ಶಿವಮೊಗ್ಗ: ಮಕ್ಕಳಿಗೆ ವಿದ್ಯಾಭ್ಯಾಸದ ಜತೆಯಲ್ಲಿ ಸಾಮಾನ್ಯ eನದ ಅವಶ್ಯಕತೆ ಅತ್ಯಂತ ಮುಖ್ಯ ಆಗಿದ್ದು, ಸಾಧನೆಯ ಹಾದಿಯಲ್ಲಿ ಮುನ್ನಡೆ ಯಲು ನೆರವಾಗುತ್ತದೆ ಎಂದು ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಶೇಷಾಚಲ ಹೇಳಿದರು.
ನಗರದ ವಾಸವಿ ವಿದ್ಯಾಲಯ ದಲ್ಲಿ ಜೆಸಿಯ ಸಹ್ಯಾದ್ರಿ ಸಂಸ್ಥೆ ಹಾಗೂ ಇಂಡಿಯಾ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕಾ ಸಾಮಾರ್ಥ್ಯ ವೃದ್ಧಿಸುವ ದೃಷ್ಠಿಯಲ್ಲಿ ಇಂತಹ ಪರೀಕ್ಷೆಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.
ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್ ಕುಮಾರ್ ಮಾತನಾಡಿ, ಮಕ್ಕಳ ಶಿಕ್ಷಣದ ಜತೆಯಲ್ಲಿ ರಾಷ್ಟ್ರಮಟ್ಟದ ಪರೀಕ್ಷೆಗಳು ಹೊಸ ವಿಚಾರಗಳ ಕಲಿಕೆಗೆ ನೆರವು ಆಗಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಯಾಗಲಿದೆ. ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿ ಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಅಧ್ಯಕ್ಷೆ ಹಾಗೂ ತರಬೇತುದಾರರಾದ ಡಾ. ಸುಷ್ಮಾ ಹಿರೇಮಠ್ ಮಾತನಾಡಿ, ರಾಷ್ಟ್ರಮಟ್ಟದ ಪ್ರತಿಭಾನ್ವೇಷಣೆ ಕಾರ್ಯಕ್ರಮ ಇದಾಗಿದ್ದು, ಪರೀಕ್ಷೆ ಯಲ್ಲಿ ವಿಜೇತರಾದವರಿಗೆ ೫೦ ಸಾವಿರ ರೂ. ನಗದು ಬಹುಮಾನ ಪ್ರಥಮ ಸ್ಥಾನ, ೪೦ ಸಾವಿರ ರೂ. ನಗದು ಬಹುಮಾನ ದ್ವಿತೀಯ, ೩೦ ಸಾವಿರ ರೂ. ನಗದು ಬಹುಮಾನ ತೃತೀಯ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದರು.
ದೆಹಲಿಯಿಂದ ಪ್ರಶ್ನೆ ಪತ್ರಿಕೆಗಳು ಬಂದಿದ್ದು, ರಾಷ್ಟ್ರಮಟ್ಟದಲ್ಲಿ ೫೦೦ ಕ್ಕೂ ಹೆಚ್ಚು ಕೇಂದ್ರಗಳಲ್ಲಿ ೧,೩೩, ೬೪೨ ವಿದ್ಯಾರ್ಥಿಗಳು ಭಾಗವಹಿಸು ತ್ತಿzರೆ. ವಿದ್ಯಾರ್ಥಿಗಳ eನಾರ್ಜ ನೆಗೆ ಇಂತಹ ಸ್ಪರ್ಧೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ನಗರದ ವಾಸವಿ ಶಾಲೆ, ರೋಟರಿ ಶಾಲೆ, ಸಹ್ಯಾದ್ರಿ ಪ್ರೌಢಶಾಲೆ, ಗಂಗೋತ್ರಿ ಪಿಯು ಕಾಲೇಜುಗಳಲ್ಲಿ ರಾಷ್ಟ್ರೀಯ ಮಟ್ಟದ ಪ್ರತಿಭಾ ಪರೀಕ್ಷೆ ನಡೆಸಲಾಯಿತು. ಜೆಸಿಐನ ಸುಷ್ಮಾ ಅರವಿಂದ್, ಸ್ವಪ್ನ ಬದರೀನಾಥ್, ವಿದ್ಯಾ, ಶ್ರೀಯಾ ಪರೀಕ್ಷಿತ್, ಸ್ಫೂರ್ತಿ, ಹರ್ಷ, ಜೆಸಿಐ ವಲಯ ಉಪಾಧ್ಯಕ್ಷ ಸತೀಶ ಚಂದ್ರ ಉಪಸ್ಥಿತರಿದ್ದರು.