ಇತರೆಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನೃತ್ಯ ತರಬೇತಿಯ ಜತೆಗೆ ಉನ್ನತ ಸಂಸ್ಕಾರ ಸಿಗುತ್ತಿದೆ…

Share Below Link

ಸಾಗರ: ನಾಟ್ಯತರಂಗ ಸಂಸ್ಥೆ ಯಲ್ಲಿ ಕಲಿಕಾರ್ಥಿಗಳಿಗೆ ಉತ್ತಮ ನೃತ್ಯ ತರಬೇತಿ ಜತೆಗೆ ಉತ್ತಮ ಸಂಸ್ಕಾರ ಸಿಗುತ್ತಿದೆ ಎಂದು ವಿದುಷಿ ಎಂ.ಆರ್.ಚಂದನಾ ಹೇಳಿದರು.
ಪಟ್ಟಣದ ಶ್ರೀನಗರದ ನೃತ್ಯಭಾಸ್ಕರ ಸಭಾಂಗಣದಲ್ಲಿ ನಾಟ್ಯ ತರಂಗ ಸಂಸ್ಥೆಯಿಂದ ಏರ್ಪಡಿಸಿದ್ದ ಋತು ನೃತ್ಯ ವೈವಿಧ್ಯ ಸರಣಿ ನೃತ್ಯ ಮಾಲಿಕೆಯ ಗ್ರೀಷ್ಮ ನೃತ್ಯ ಸಂತೋಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯಲ್ಲಿ ಕಲಿತ ಹಲವಾರು ನೃತ್ಯಪಟುಗಳು ಸ್ವತಃ ನೃತ್ಯ ಗುರುಗಳಾಗಿ ಹೆಸರು ಸಂಪಾದಿಸಿzರೆ. ಈ ಮೂಲಕ ನಾಟ್ಯತರಂಗ ಸಂಸ್ಥೆಗೆ ಕೀರ್ತಿ ತಂದುಕೊಟ್ಟಿzರೆ. ನೃತ್ಯಗುರು ವಿದ್ವಾನ್ ಜನಾರ್ದನ್ ಅವರು ನೃತ್ಯ ಕಲಿಕೆಗೆ ಉತ್ತಮ ಮಾರ್ಗದರ್ಶನ ನೀಡುತ್ತಿzರೆ ಎಂದರು.
ಕಲಾ ಪೋಷಕರಾದ ವೃಂದಾ ರಾಮಕೃಷ್ಣ ಮಾತನಾಡಿ, ನೃತ್ಯ ಮನಸ್ಸಿಗೆ ಅತ್ಯಂತ ಆತ್ಮಾನುಭವ ನೀಡುತ್ತದೆ. ನೃತ್ಯ ಕಲಿಕೆಗೆ ಹೆಚ್ಚು ಪರಿಶ್ರಮ ಮತ್ತು ಅಭ್ಯಾಸ ಬೇಕು. ಒಂದೆರಡು ವರ್ಷದಲ್ಲಿ ನೃತ್ಯವನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಅಧ್ಯಯನ, ಆಸಕ್ತಿ, ಶ್ರದ್ಧೆಯಿಂದ ಯಾವುದೇ ಕಲೆಯನ್ನು ತಮ್ಮದಾಗಿಸಿ ಕೊಳ್ಳಬಹುದು ಎಂದರು.
ಸಂಸ್ಥೆ ಸಂಚಾಲಕ ವಿದ್ವಾನ್ ಜಿ.ಬಿ.ಜನಾರ್ದನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ ೨೫ ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿದೆ. ಗ್ರಾಮೀಣ ಭಾಗದ ನೃತ್ಯಾಸಕ್ತರಿಗೆ ಆದ್ಯತೆ ನೀಡಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿ ಸ್ವತಃ ನೃತ್ಯ ತರಬೇತಿ ನೀಡುತ್ತಿzರೆ. ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಹಲವಾರು ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಗಿದೆ. ಕಲಾ ಪೋಷಕರ ಪ್ರೋತ್ಸಾಹ ಸಂಸ್ಥೆ ನಿರಂತರ ಬೆಳೆಯಲು ಸಹಕಾರಿಯಾಗಿದೆ ಎಂದರು.
ಅನುಷಾ ಸ್ವಾಗತಿಸಿದರು. ಮಣಿಕಂಠ ವಂದಿಸಿದರು. ಜನ್ಹವಿ ನಿರೂಪಿಸಿದರು.
ನಂತರ ಚಂದನಾ ಅವರ ಭರತ ನೃತ್ಯದಲ್ಲಿ ದೇವೀ ಸ್ತುತಿ, ಶಿವ ಸ್ತುತಿ ಪದಂ ಹಾಗೂ ತಿನಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಾಟ್ಯತರಂಗದ ಕಲಾವಿದರು ಪ್ರದರ್ಶಿಸಿದ ದಶಾವತಾರ ನೃತ್ಯ ಪ್ರಸ್ತುತಿ ಆಕರ್ಷಕವಾಗಿ ಮೂಡಿಬಂದಿತು.