ಜಿಲ್ಲಾ ಸುದ್ದಿತಾಜಾ ಸುದ್ದಿ

ರೆವಿನ್ಯೂ ನಿವೇಶನ-ಕಟ್ಟಡಗಳ ಬಿ ಖಾತೆಗೆ ಅವಕಾಶ…

Share Below Link

ಭದ್ರಾವತಿ : ರಾಜ್ಯ ಸರಕಾರವು ನೂತನವಾಗಿ ನಗರ ವ್ಯಾಪ್ತಿಯ ರೆವಿನ್ಯೂ ನಿವೇಶನ ಮತ್ತು ಕಟ್ಟಡಗಳ ಬಿ ಖಾತೆ ದಾಖ ಲಿಸಿಕೊಳ್ಳಲು ಯೋಜನೆ ಜರಿಗೆ ತಂದಿದೆ. ನಿಗದಿತ ಅವಧಿಯೊಳಗೆ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಕಟ್ಟಡ ವಾಸಿಗಳು ಮತ್ತು ನಿವೇಶನ ಮಾಲೀಕರು ಇದರ ಅವಕಾಶ ಸದುಪಯೋಗ ಪಡಿಸಿಕೊಳ್ಳುವಂತೆ ನಗರಸಭೆಯ ನೂಈತನ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್ ಜನತೆಗೆ ಕರೆ ನೀಡಿದರು.


ಅವರು ನಗರಸಭೆಯ ಅಧ್ಯಕ್ಷರ ಕೊಠಡಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿ ಸರಕಾರ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಬಿ ಖಾತೆ ದಾಖಲಾತಿ ಆಂದೋಳನಕ್ಕೆ ಮುಂದಾಗಿರುವುದು ಸಂತಸ ತಂದಿದೆ. ಅದೆಷ್ಟೋ ಬಡ ಜನರು ರೆವಿನ್ಯೂ ಭೂಮಿಯಲ್ಲಿ ಮನೆಗ ಳನ್ನು ಕಟ್ಟಿಕೊಂಡು ಜೀವನ ಸಾಗಿಸು ತ್ತಿzರೆ. ಆಧರೆ ಅವರಿಗೆ ಅವರ ಸ್ವತ್ತಿನ ಅಧಿಕತ ದಾಖಲೆಗಳು ಇಲ್ಲ. ಬಹಳಷ್ಟು ಮಂದಿ ಮಕ್ಕಳಿಗೆ ಮದುವೆ ಮುಂಜಿ ಮಾಡಲು ನಿವೇಶನ ಅಥವಾ ಕಟ್ಟಡಗಳನ್ನು ಮಾರಾಟ ಮಾಡಲು ಅದರ ಮೇಲೆ ಸಾಲ ಪಡೆಯಲು ಆಗದೆ ಪರಿತಪಿ ಸುತ್ತಿzರೆ. ಅಂತವರಿಗೆ ಬಿ ಖಾತೆ ಮಾಡಿಸುವುದರಿಂದ ಅನುಕೂಲ ವಾಗಲಿದೆ ಎಂದರು.
ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್ ಸರಕಾರದ ಅಧಿಕತ ಸುತ್ತೋಲೆ ಮಾಹಿತಿ ವಿವರಿಸಿ ನಗರ ವ್ಯಾಪ್ತಿಯಲ್ಲಿ ಒಟ್ಟು ೩೫ ಸಾವಿರ ಎ ಖಾತೆ ಹೊಂದಿರುವ ಮನೆ ನಿವೇಶನಗಳ ದಾಖಲೆ ಹೊಂದಿವೆ. ಇ-ಆಸ್ತಿ ತತ್ರಾಂಶದಲ್ಲಿ ಸಜನೆ ಮಾಡಲಾದ ೨೦ ಸಾವಿರ ಇ ಆಸ್ತಿ-ಖಾತೆಗಳಿವೆ. ಇನ್ನು ೧೫ ಸಾವಿರ ಆಸ್ತಿ ಕಟ್ಟಡ ಮತ್ತು ನಿವೇಶ ನಗಳು ಖಾತೆ ದಾಖಲಾತಿ ಆಗಿರು ವುದಿಲ್ಲ. ಅಂತಹವರಿಗೆ ಸರಕಾರ ಕಾಯ್ದೆ ತಿದ್ದುಪಡಿ ಮಾಡಿ ತಮ್ಮ ಸ್ವತ್ತಿನ ದಾಖಲೆಗಳನ್ನು ಕಾನೂನಿನ ಅನ್ವಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ೧೦.೯.೨೦೨೪ ರ ಹಿಂದೆ ವಹಿವಾಟು ಮಾಡಿಕೊಂಡು ನೋಂದಣಿ ಪತ್ರ ಹೊಂದಿದವರು, ಭೂಪರಿವರ್ತನೆ ಮಾಡಿಕೊಳ್ಳದೇ ಇರುವವರು, ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಹಕ್ಕು ಪತ್ರಗಳು ಪೀತ್ರಾರ್ಜಿತ ಆಸ್ತಿ, ಹಾಗೂ ಖುಲಾಸೆ ಪತ್ರಗಳು ಹೊಂದಿರುವವರು ಪ್ರಸ್ತುತ ಸಾಲಿನವರೆಗೆ ಋಣಭಾರ (ಇಸಿ) ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ ಹಾಗೂ ಮಾಲೀಕರ ಗುರುತಿನ ದಾಖಲೆ ಪ್ರತಿ ಇವುಗಳೊಂದಿಗೆ ಕಡೇ ದಿನ ದಿ: ೧೦.೫ .೨೦೨೫ ರೊಳಗೆ ಸಲ್ಲಿಸಿ ಇ ಆಸ್ತಿ ಬಿ ಖಾತಾ ಪಡೆಯ ಬಹುದೆಂದು ತಿಳಿಸಿದರು.
ಬಿ ಖಾತಾಗಾಗಿ ತಿಳಿಸಿರುವಂತೆ ಬೇಕಾದ ದಾಖಲಾತಿಗಳೊಂದಿಗೆ ಅರ್ಜಿ ಸ್ವೀಕಾರ ಮಾಡಲು ಸಾರ್ವ ಜನಿಕರಿಗೆ ಅನುಕೂಲ ಆಗಲು ನಗರಸಭೆಯ ಆವರಣದಲ್ಲಿ ೪ ಕೌಂಟರ್‌ಗಳನ್ನು ಮತ್ತು ಜನ್ನಾ ಪುರದ ಎನ್‌ಟಿಬಿ ಕಾರ್ಯಾಲಯ ದಲ್ಲಿ ೨ ಕೌಂಟರ್‌ಗಳನ್ನು ತೆರೆಯ ಲಾಗಿದೆ. ಇದರಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಿರುವು ದಿಲ್ಲ. ಸ್ವತ್ತುದಾರರು ನೇರವಾಗಿ ನಗರಸಭೆಯ ಅಧಿಕಾರಿಗಳನ್ನು ಸಂಪರ್ಕಿಸಿ ಇದರ ಪ್ರಯೋಜನವ ನ್ನು ಪಡೆಯಬಹುದು. ಈ ಅಭಿಯಾನವನ್ನು ಯಶಸ್ವಿಗೊಳ ಸಲು ನಗರಸಭೆಯ ಎ ಸದಸ್ಯರು ಸಂಘ ಸಂಸ್ಥೆಗಳು ಮುಖಂಡರು ಸಹಕರಿಸಿ ಅನಧಿಕತ ಕಟ್ಟಡಗಳವರಿಗೆ ಮಾಹಿತಿ ತಿಳಿಸಬೇಕೆಂದು ಪೌರಾ ಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್ ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯಾ ಧಿಕಾರಿ ರಮೇಶ್ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯರುಗಳಾದ ವಿ.ಕದಿರೇಶ್, ಮಂಜುಳಾ ಸುಬ್ಬಣ್ಣ, ಸರ್ವ ಮಂಗಳ, ಅನುಸುಧಾ ಮೋಹನ್ ಇನ್ನಿತರರಿದ್ದರು.