ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸಿಇಟಿ – ನೀಟ್ ದಾಖಲೆ ಪರಿಶೀಲನೆಗೆ ಅವಕಾಶ ನೀಡಿ: ಎನ್‌ಎಸ್‌ಯುಐ ಮನವಿ

Share Below Link

ಶಿವಮೆಗ್ಗ : ಸಿಇಟಿ ಮತ್ತು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿ ಗಳಿಗೆ ದಾಖಲೆಗಳ ಪರಿಶೀಲನೆಗೆ ಹಾಗೂ ಇನ್ನಿತರ ದಾಖಲಾತಿಗಳ ಅಪ್‌ಲೋಡ್‌ಗೆ ಮತ್ತೊಮ್ಮೆ ಅವಕಾಶ ನೀಡಲು ಒತ್ತಾಯಿಸಿ ಜಿ ಯುವ ಕಾಂಗ್ರೆಸ್‌ನಿಂದ ಇಂದು ಜಿಡಳಿತದ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಮನವಿ ಸಲ್ಲಿಸಲಾಯಿತು.
ಪ್ರಸಕ್ತ ಶೈಕ್ಷಣಿಕ ವಷದ ಸಿಇಟಿ ಮತ್ತು ನೀಟ್ ಪರೀಕ್ಷೆಗಳಲ್ಲಿ ನಡೆದ ಎಡವಟ್ಟುಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವಂತಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೈಬಿಡಲಾಗಿದ್ದ ಪಠ್ಯ ಕ್ರಮದಿಂದ ಸಿಇಟಿಯಲ್ಲಿ ೫೦ ಪ್ರಶ್ನೆಗಳನ್ನು ಕೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿ ಸ್ನೇಹಿ ಯಾಗಬೇಕಿದ್ದ ಪ್ರಾಧಿಕಾರದ ಕೆಲವು ಏಕಪಕ್ಷೀಯ ನಿರ್ಧಾರಗಳ ಬಗ್ಗೆ ವಿದ್ಯಾರ್ಥಿಗಳಿಂದ ಆಕ್ಷೇಪ ವ್ಯಕ್ತ ವಾಗುತ್ತಿದೆ ಎಂದು ಹೇಳಲಾಗಿದೆ.


ಇದೀಗ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ್ದರೂ ರ್‍ಯಾಂಕಿಂಗ್‌ನಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದು, ವಿದ್ಯಾರ್ಥಿ ಗಳಲ್ಲಿ ಸಾಕಷ್ಟು ಆತಂಕಕ್ಕೆ ಕಾರಣ ವಾಗಿದೆ. ಹೆಚ್ಚಿನ ಶುಲ್ಕ ಪಾವತಿಸಿ ಯಾದರೂ ವೈದ್ಯಕೀಯ ಸೀಟು ಪಡೆಯಲು ವಿದ್ಯಾರ್ಥಿಗಳು ಪೋಷಕರು ಪರದಾಡುತ್ತಿದ್ದು, ವೈದ್ಯಕೀಯ ಸೀಟ್ ಸಿಗದವರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯಲು ಮುಂದಾಗು ತ್ತಿದ್ದು, ಕೆಲವು ಖಾಸಗಿ ಇಂಜಿನಿಯ ರಿಂಗ್ ಕಾಲೇಜುಗಳು ದುಬಾರಿ ಶುಲ್ಕವನ್ನು ಕೇಳುತ್ತಿರು ವುದು ಕಷಕರದ ಸಂಗತಿಯಾಗಿದೆ. ನೀಟ್ ನಲ್ಲಿ ಅತ್ಯುತ್ತಮ ಅಂಕ ಪಡೆದರೂ ಸರ್ಕಾರಿ ಕಾಲೇಜಿನಲ್ಲಿ ಸೀಟು ಸಿಗುವುದು ಅಸಾಧ್ಯ ಎಂಬಂತ ಸ್ಥಿತಿ ಉದ್ಭವವಾಗಿದೆ. ಇದೀಗ ವಿದ್ಯಾರ್ಥಿಗಳು ಆಡಳಿತ ಮಂಡಳಿ ಮೂಲಕ ಸೀಟು ಪಡೆಯಲು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೊಸ ಪ್ರಯೋಗ ದಿಂದ ಇಷ್ಟು ವರ್ಷಗಳ ಕಾಲ ವಿದ್ಯಾರ್ಥಿಗಳು ಸಲ್ಲಿಸಿದ್ದ ದಾಖಲೆ ಗಳ ಭೌತಿಕ ಪರಿಶೀಲನೆ ನಡೆಸು ತ್ತಿತ್ತು. ಆದರೆ ಪ್ರಸಕ್ತ ವರ್ಷ ಆನ್ ಲೈನ್ ಪರಿಶೀಲನೆ ನಡೆಸಲು ಮುಂದಾಗಿದೆ. ಈ ಬಗ್ಗೆಯಂತೂ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿಯೇ ಇಲ್ಲ. ಅನೇಕ ವಿದ್ಯಾರ್ಥಿಗಳು ಕೈಬಿಟ್ಟು ಹೋಗಿ ರುವ ದಾಖಲೆಗಳನ್ನು ಭೌತಿಕ ಪರಿಶೀಲನೆ ಅಥವಾ ಕೌನ್ಸೆಲಿಂಗ್‌ಗೂ ಮುನ್ನ ಸಲ್ಲಿಸುವ ಅವಕಾಶವಿದೆ ಎಂಬ ಕಲ್ಪನೆಯಲ್ಲಿzರೆ ಎಂದರು.
ಆದರೆ ಸಿ.ಇ.ಟಿಗೆ ನೋಂದಣಿ ಮಾಡಿಕೊಂಡು ದಾಖಲೆಗಳನ್ನು ಅಪ್ ಲೋಡ್ ಮಾಡಿದವರು ಮಾತ್ರ ಕರ್ನಾಟಕ ನೀಟ್ ಕೌನ್ಸೆ ಲಿಂಗ್‌ನಲ್ಲಿ ಭಾಗವಹಿಸ ಬಹುದು ಎಂಬುದು ವಿದ್ಯಾರ್ಥಿಗಳ ಗಮನಕ್ಕೆ ಬಂದಿಲ್ಲ. ಕೆ.ಇ.ಎ ಕಳೆದ ತಿಂಗಳು ದಾಖಲೆಗಳ ಆಪ್ ಡೇಟ್‌ಗೆ ಅಂತಿಮ ಅವಕಾಶ ಎಂಬ ಅಧಿಸೂಚನೆ ಹೊರಡಿಸಿ ಮೇ ೯ರಿಂದ ೧೫ರವರೆಗೆ ತಿದ್ದುಪಡಿಗೆ ಅವಕಾಶ ವನ್ನೇನೋ ನೀಡಿತ್ತು. ಆದರೆ ವಿದ್ಯಾ ರ್ಥಿಗಳಿಗೆ ಆ ಮಾಹಿತಿ ಸಮರ್ಪಕ ವಾಗಿ ತಲುಪಿಲ್ಲ ಎಂದು ತಿಳಿಸಲಾ ಗಿದೆ. ರಾಜ್ಯದಲ್ಲಿ ಶಿವಮೊಗ್ಗ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ೧೪ ಕ್ಷೇತ್ರಗಳಿಗೆ ೨ನೇ ಹಂತದ ಲೋಕಸಭಾ ಚುನಾವಣೆ ಮೇ ೭ರಂದು ನq ದಿತ್ತು. ಕಂದಾಯ ಇಲಾಖೆ ಸೇರಿ ದಂತೆ ವಿವಿಧ ಸರ್ಕಾರಿ ಇಲಾಖೆ ಸಿಬ್ಬಂದಿ ಚುನಾವಣಾ ಪ್ರಕ್ರಿಯೆ ಯಲ್ಲಿ ತೊಡಗಿದ್ದರು. ಇನ್ನು ಮೇ ೧೦ ಬಸವ ಜಯಂತಿ, ಮೇ ೧೧ರಂದು ೨ನೇ ಶನಿವಾರ, ಮೇ ೧೨ ಭಾನುವಾರ ಮೂರು ದಿನಗಳ ಕಾಲ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದ ಕಾರಣ ಅಗತ್ಯ ದಾಖಲೆಗಳು, ಶಾಲಾ ಕಾಲೇಜು ಹೆಸರು, ಜತಿ ಮತ್ತು ಆದಾಯ ಮೀಸಲಾತಿ ಪ್ರಮಾಣ ಪತ್ರಗಳನ್ನು ಸರ್ಕಾರಿ ಕಚೇರಿಗಳಿಂದ ಪಡೆಯಲು ವಿದ್ಯಾರ್ಥಿಗಳು ಸಮಯವೇ ಇಲ್ಲದಂತಾಗಿ ಕೆ.ಇ.ಎ ಹೇಳಿದಂತೆ ಆನೈನಲ್ಲಿ ಅಪ್ಲೋಡ್ ಮಾಡಲು ಹಾಗೂ ತಿದ್ದುಪಡಿಗಳೇನಿದ್ದರೂ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಆನ್‌ಲೈನ್ ಪರಿಶೀಲನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ ಪಡುತ್ತಿದ್ದು, ಕಾರಣವೇನೆಂದರೆ ಕೆಲವು ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆಗಳಿದ್ದು, ಈ ಹಿಂದೆ ದಾಖಲೆಗಳ ಭೌತಿಕ ಪರಿಶೀಲನೆ ವೇಳೆ ಅಕಸ್ಮಾತ್ ಯಾವುದೋ ತಿದ್ದುಪಡಿ, ಇತರೆ ಸಮಸ್ಯೆ ಗಳೇನಿದ್ದರೂ ಕೆ.ಇ.ಎ ಬೆಂಗಳೂರು ಕಚೇರಿಗೂ ಹೋಗಿ ವಿದ್ಯಾರ್ಥಿಗಳು ಸಿ.ಇ.ಟಿ. ನೀಟ್ ಕೌನ್ಸೆಲಿಂಗ್‌ಗೂ ಮುನ್ನ ಅಪಡೇಟ್ ಮಾಡಿಸುವ ಅವಕಾಶ ಹಿಂದಿನ ವಷಗಳಲ್ಲಿ ಇತ್ತು. ಆದರೆ ಈ ವಷ ಈ ಅವಕಾಶದ ಬಗ್ಗೆ ಕೆ.ಇ.ಎ ಅಧಿಕೃತ ವಾಗಿ ಏನನ್ನೂ ಹೇಳಿಲ್ಲ. ಆನ್‌ಲೈನ್ ಪರಿಶೀಲನೆ ಸಾಧಕ ಬಾಧಕಗಳ ಅಧ್ಯಯನ ನಡೆಸದೆಯೇ ಕೆ.ಇ.ಎ ಈ ನಿರ್ಧಾರ ಕೈಗೊಂಡಿರುವ ಬಗ್ಗೆಯೂ ವಿದ್ಯಾರ್ಥಿ ವಲಯ ದಿಂದ ಆಕ್ಷೇಪಗಳು ವ್ಯಕ್ತವಾಗುತ್ತಿವೆ ಎಂದು ತಿಳಿಸಿದರು.
ಕೂಡಲೇ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ವನ್ನು ನೀಡಿ ವಿದ್ಯಾರ್ಥಿಗಳಿಗೆ ಉಂಟಾಗಿರುವ ಗೊಂದಲ ಮತ್ತು ವಿದ್ಯಾರ್ಥಿಗಳು ಪರದಾಡುತ್ತಿರುವ ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವುದರೊಂದಿಗೆ, ಸಿ.ಇ.ಟಿ ಮತ್ತು ನೀಟ್ ವಿದ್ಯಾರ್ಥಿಗಳಿಗೆ ದಾಖಲಾತಿ ಪರಿಶೀಲನೆ, ಪ್ರಮಾಣ ಪತ್ರಗಳ ಅಪ್ಲೋಡ್‌ಗೆ ಹಾಗೂ ತಿದ್ದುಪಡಿಗೆ ಕಾಲಾವಕಾಶವನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ಜಿಧ್ಯಕ್ಷ ಹೆಚ್. ಪಿ. ಗಿರೀಶ್, ಯುವ ಕಾಂಗ್ರೆಸ್ ಪ್ರಮುಖರಾದ ಸುಹಾಸ್ ಗೌಡ, ಆರ್. ಎಂ. ಓಂ, ನಾಗರಾಜ್ ನಾಯ್ಕ್, ಸಾಹಿಲ್, ಪ್ರಜ್ವಲ್, ಜಯಂತ್ ಇದ್ದರು.