ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ದಲಿತರ ಜಮೀನು ಕಬಳಿಕೆ ಆರೋಪ : ಬೃಹತ್ ಪ್ರತಿಭಟನೆ

Share Below Link

ಭದ್ರಾವತಿ: ತಾಲೂಕಿನ ಅರಹತೊಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೪ ಎಕರೆ ೦೫ ಗುಂಟೆ ಜಮೀನು ಪರಿಶಿಷ್ಟ ಪಂಗಡ (ಎಸ್.ಟಿ) ದಲಿತ ಸಮುದಾಯಕ್ಕೆ ಸೇರಿದ ನಾಗಪ್ಪ ಬಿನ್ ಮರಿಯಣ್ಣನವರ ಹೆಸರಿಗೆ ಪ್ರಸ್ತುತ ಖಾತೆ ಪಹಣಿ ದಾಖಲಾತಿ ಗಳಿದ್ದು, ಅವರ ಮರಣ ನಂತರ ಕುಟುಂಬಸ್ಥರಿಗೆ ಪೌತಿ ಖಾತೆ ಮಾಡಲು ಕಾನೂನು ಬದ್ದವಾಗಿ ಅರ್ಜಿ ಸಲ್ಲಿಸಿದ್ದರೂ ಸಹ ತಹಸೀಲ್ದಾರ್‌ರವರು ದಲಿತ ವಿರೋಧಿ ನೀತಿ ಅನುಸರಿಸಿ ನ್ಯಾಯಲಯದ ಮೂಲಕ ಮೇಲ್ವರ್ಗದ ಜಾತಿಯವರಾದ ಪಾಲಾಕ್ಷಪ್ಪ ಗೌಡ ಜಿ.ಎಸ್ ಬಿನ್ ಸಂಗಪ್ಪಗೌಡರಿಗೆ ೨ ಎಕರೆ ೦.೩೯ ಗುಂಟೆ ಜಮೀನನ್ನು ಕಾನೂನು ಬಾಹಿರವಾಗಿ ಖಾತೆ ಪಹಣಿ ಮಾಡಲು ಆದೇಶ ಮಾಡಿರುವು ದನ್ನು ರದ್ದು ಪಡಿಸಬೇಕೆಂದು. ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಕಂದಾಯ ಸಚಿವ ಕೃಷ್ಣ ಭೈರೇ ಗೌಡರಿಗೆ ಮನವಿ ಸಲ್ಲಿಸಲಾಯತು.


ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ದಲಿತ ಮುಖಂ ಡರು, ಅರಹತೊಳಲು ಗ್ರಾಮದ ಸರ್ವೆ ನಂ.೦೭ರಲ್ಲಿ ಇರುವ ೪ ಎಕರೆ ೦೫ ಗುಂಟೆ ಜಮೀನಿನ ಮಾಲೀಕರಿಂದ ನಾಗಪ್ಪ ಬಿನ್ ಮರಿಯಣ್ಣನವರ ಮರಣ ಹೊಂದಿರುವ ವಿಚಾರ ತಿಳಿದು ಸಂಬಂಧಪಟ್ಟ ಜಮೀನಿನ ವಾರಸುದಾರರಾದ ಹನುಮಂತಪ್ಪ ಬಿನ್ ಲೇಟ್ ಮರಿಯಣ್ಣನವರಿಗೆ ನೋಟಿಸ್ ನೀಡಿರುತ್ತಾರೆ. ಅದರಂತೆ ಹನುಮಂತಪ್ಪನವರು ಪೌತಿ ಖಾತೆಗೆ ಸಂಬಂಧಪಟ್ಟ ದಾಖಲೆ ಗಳು ಹಾಗು ವಂಶವೃಕ್ಷದ ಮೂಲಕ ದಿನಾಂಕ: ೨೭-೧೦-೨೦೨೫ರಂದು ಜಂಟಿ ಖಾತೆ ಮಾಡಲು ಹೊಳೆಹೊನ್ನೂರು ನಾಡ ಕಛೇರಿಯ ಮೂಲಕ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸುತ್ತಾರೆ. ಆದರೆ ದಿನಾಂಕ: ೬-೧೧-೨೦೨೫ರಂದು ಅರಹತೋಳಲು ಗ್ರಾಮದ ಸರ್ವೆ ನಂ: ೭ ರಲ್ಲಿ ೪ ಎಕರೆ ೦೫ ಗುಂಟೆ ಜಮೀನಿನ ಪೈಕಿ ೨ ಎಕರೆ ೩೯ ಗುಂಟೆ ಜಮೀನು ಪಾಲಾಕ್ಷಪ್ಪ ಗೌಡ ಜಿ.ಎಸ್ ಬಿನ್ ಸಂಗಪ್ಪಗೌಡನಿಗೆ ಆದ ನನಗೆ ಪಿತ್ರಾರ್ಜಿತವಾಗಿ ಬಂದಿರುತ್ತದೆ ಎಂದು ತಕಾರಾರು ಅರ್ಜಿ ಸಲ್ಲಿಸಿರುತ್ತಾರೆ. ಪೌತಿಖಾತೆಗೆ ಅರ್ಜಿ ಸಲ್ಲಿಸಿರುವ ಹನುಮಂತಪ್ಪನಿಗೂ ಮತ್ತು ಪಾಲಾಕ್ಷಪ್ಪ ಗೌಡ ಜಿ.ಎಸ್ ರವರಿಗೆ ಯಾವುದೇ ಸಂಬಂಧವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೂಲ ಖಾತೆದಾರರಾದ ನಾಗಪ್ಪನವರು ಪರಶಿಷ್ಟ ಪಂಗಡ (ಎಸ್.ಟಿ) ನಾಯಕ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಪಾಲಾಕ್ಷಪ್ಪ ಗೌಡ ಜಿ.ಎಸ್‌ರವರು ಲಿಂಗಾಯತ ಗೌಡ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಜಮೀನು ಕಬಳಿಸುವ ದುರುzಶದಿಂದ ತಕಾರಾರು ಅರ್ಜಿದಾರರಾದ ಪಾಲಾಕ್ಷಪ್ಪ ಗೌಡ ಜಿ.ಎಸ್‌ರವರು ತಮ್ಮ ಕುಟುಂಬದ ಆಸ್ತಿಯನ್ನು ವಿಭಾಗ ಪತ್ರ ಮಾಡಿಕೊಳ್ಳುವ ಸಂದರ್ಭದಲ್ಲಿ ಅರಹತೋಳಲು ಗ್ರಾಮದ ಸರ್ವೆ ನಂ. ೭ರಲ್ಲಿ ೨ ಎಕರೆ ೩೯ ಗುಂಟೆ ಜಮೀನು ನಮಗೆ ಪಿತ್ರಾರ್ಜಿತವಾಗಿ ಬಂದಿರುತ್ತದೆ. ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡು ತಹಸೀಲ್ದಾರ್ ನ್ಯಾಯಲಯಕ್ಕೆ ಸಲ್ಲಿಸಿರುತ್ತಾರೆಂದು ದೂರಿದರು.
ಪ್ರಮುಖರಾದ ಸತ್ಯ, ಚಿನ್ನಯ್ಯ, ಕಾಣಿಕ್‌ರಾಜ್, ಕೆ. ರಂಗನಾಥ್, ಸಂದೀಪ್ ಆರ್., ಎನ್. ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *