ಲಿಂಗ ಧರಿಸಿದವರೆಲ್ಲರೂ ಲಿಂಗಾಯಿತರೇ; ಬೇಧ ಬಾವ ಸಲ್ಲದು…
ನ್ಯಾಮತಿ : ದೇಹದ ಮೇಲೆ ಲಿಂಗವನ್ನು ಧರಿಸಿದವರೆಲ್ಲರು ಲಿಂಗಾಯತರು. ಈ ಲಿಂಗಯತರಲ್ಲಿ ಬೇಧ ಬಾವ ಮಾಡಬೇಡಿ ಎಂದು ಶೀಶೈಲ ಪೀಠ ಡಾ. ಚನ್ನಸಿದ್ದರಾಮ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ಶ್ರೀ ಬಸವೇಶ್ವರ ದೇಗುಲದಲ್ಲಿ ಬಸವ ಜಯಂತಿಯ ಅಂಗವಾಗಿ ಶನಿವಾರ ಬೆಳಿಗ್ಗೆ ಆಯೋಜಿಸಲಾಗಿದ್ದ ಶ್ರೀ ಬಸವೇಶ್ವರ ಸ್ವಾಮಿಯ ಶಿಲಾಮೂರ್ತಿಗೆ ರುದ್ರಾಬೀಷೇಕ , ಮತ್ತು ಸ್ವಾಮೀಜಿಯವರ ಇಷ್ಟಲಿಂಗ ಪೂಜೆ , ಬಿಲ್ವಾರ್ಚನೆ ಮಹಾ ಮಂಗಳಾರತಿ ನಡೆದು ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮಾಜ ದೊಡ್ಡ ಸಮಾಜ. ಕಲಿಯುಗದಲ್ಲಿ ಶಕ್ತಿ ಸಂಘಟನೆ ಯಲ್ಲಿದೆ. ವೃತ್ತಿಯ ಅನುಗುಣವಾಗಿ ಜತಿ ಇದೆ. ಸಂಘಟನೆಯಲ್ಲಿ ಜತಿಯ ಒಗ್ಗಟ್ಟು ಇರಬೇಕು. ಸಮಾಜದ ವಿಘಟನೆಗೆ ಜತಿ ಕಾರಣವಾಗಬಾರದು. ವೃತ್ತಿ ಆಧಾರಿತ ಸಂಘಟನೆ ಇರಬೇಕೇ ಹೊರತು ಜತಿ ಆಧಾರಿತವಾದ ಆಗಬಾರದು. ಎಲ್ಲರೂ ಲಿಂಗ ಪೂಜೆಯನ್ನು ಮಾಡಬೇಕು. ಆಚಾರ ವಿಚಾರಗಳನ್ನು ಶುದ್ದವಾಗಿಟ್ಟುಕೊಂಡು ಎಲ್ಲರೂ ನಮ್ಮವರೆ ಎಂದು ಪರಿಗಣಿಸಿ ಸಮಾಜದಲ್ಲಿ ಬಾಳಬೇಕು. ಅನಾದಿ ಕಾಲದಿಂದಲೂ ವೀರಶೈವ ಲಿಂಗಾಯತರಿಗೆ ಗೌರವ ಸ್ಥಾನವಿದೆ. ಮಠ , ದೇಗುಲಗಳಿಗೆ ಭಕ್ತರು ಔದಾರ್ಯತೆಯಿಂದ ದಾನ ಮಾಡಬೇಕು. ಅನುಕೂಲಸ್ಥರು ಸ್ವಲ್ಪ ಜಸ್ತಿ ಮತ್ತು ಅನಾನುಕೂಲವಿದ್ದ ವರು ಸ್ವಲ್ಪ ಕಡಿಮೆ ದಾನ ನೀಡಬೇಕು ಎಂದು ಹೇಳಿದರು.
ಹೊನ್ನಾಳಿ ಶ್ರೀ ಚನ್ನಪಸ್ವಾಮೀಜಿ ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಹಾಲ ಸ್ವಾಮೀಜಿ ಮಠದ ಶಿವಕುಮಾರ ಸ್ವಾಮೀಜಿ ಗೋವಿನಕೋವಿ ಹಾಲಸ್ವಾಮೀಜಿ ಮಠದ ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಶಿವಾಚಾರ್ಯ ಹಾಲಸ್ವಾಮೀಜಿ ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ಬಸವೇಶ್ವರ ಸ್ವಾಮಿ ದೇಗುಲ ಸೇವಾ ಸಮಿತಿಯ ಪದಾಧಿಕಾರಿಗಳಾದ ಕೋರಿ ಯತೀಶ್‌ಚಂದ್ರ , ಜವಳಿ ಪ್ರದೀಪ್, ಜವಳಿ ಚಂದ್ರಶೇಖರಪ್ಪ, ಡಿಶ್ ಬಸವರಾಜು , ಗೀರೀಶ್ ಎಚ್.ಬಿ. , ಸಿ.ಕೆ.ಮಲ್ಲಿಕಾರ್ಜುನ , ಹೊಲ್ತಿಹಾಳ್ ಶಿವಪ್ಪ, ಎಚ್.ಕೆ. ಹಾಲೇಶಪ್ಪ ಎಚ್.ಬಿ.ವಾಗೀಶ್ , ಎಚ್.ವಿ.ಚೇತನ್ , ಸೇರಿದಂತೆ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಅಕ್ಕನ ಬಳಗದ ಸ್ಥಾಪಕರಾದ ಕಾತ್ಯಾಯನಮ್ಮ , ಪಾಪಮ್ಮ ಅನ್ನಪೂರ್ಣಮ್ಮ , ಜಯಮ್ಮ , ಶಕುಂತಲಮ್ಮ ಹಾಗೂ ದೇಗುಲ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಧರ್ಮಬಂಧುಗಳಿಗೆ ಸ್ವಾಮೀಜಿಯವರು ಗುರುರಕ್ಷೇ ನೀಡಿ ಗೌರವಿಸಿದರು.