ಜಿಲ್ಲಾ ಸುದ್ದಿತಾಜಾ ಸುದ್ದಿ

ಶಾಂತಿಯುತ ಮೆರವಣಿಗೆಗೆ ಸರ್ವಸಿದ್ದತೆ: ಎಸ್‌ಪಿ

Share Below Link

ಶಿವಮೊಗ್ಗ: ನಾಳೆ ನಡೆಯಲಿ ರುವ ಹಿಂದೂ ಮಹಾಸಭಾ ಗಣೇಶನ ರಾಜಬೀದಿ ಉತ್ಸವ ಶಾಂತಿಯುತವಾಗಿ ನೆರವೇರಲು ಎಲ್ಲ ರೀತಿಯ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆಗೆ ಸಂಬಂಧಿಸಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಕಿಡಿಗೇಡಿ ಕೃತ್ಯ ನಡೆಸುವ ಶಂಕೆ ಇರುವ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ. ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಬಂದೋಬಸ್ತ್‌ಗಾಗಿ ೫ ಮಂದಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ೧೪ ಡಿವೈಎಸ್‌ಪಿ, ೪೦ ಇನ್ಸ್‌ಪೆಕ್ಟರ್, ೭೫ ಪಿಎಸ್‌ಐ, ಹೆಡ್ ಕಾನ್ಸ್‌ಟೇ ಬಲ್ ಮತ್ತು ಹೋಮ್ ಗಾರ್ಡ್ ಸೇರಿ ೨೫೦೦ ಮಂದಿ ಕಾರ್ಯನಿ ರ್ವಹಿಸಲಿದ್ದಾರೆ.
ಇದರ ಜೊತೆಗೆ ೨ ಕೆಎಸ್‌ಆರ್‌ಪಿ, ೨ ಆರ್‌ಎಎಫ್ ಹಾಗೂ ೧೦ ಡಿಎಆರ್ ತುಕಡಿಗ ಳನ್ನು ಬಂದೋಬಸ್ತ್‌ಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ೩೦೦೦ ಕ್ಕೂ ಅಧಿಕ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಇದೇ ಮೊದಲ ಬಾರಿಗೆ ಶಿವ ಮೊಗ್ಗದಲ್ಲಿ ಗಣಪತಿ ವಿಸರ್ಜನೆಗೆ ೪೦೦ಕ್ಕೂ ಅಧಿಕ ಸ್ವಯಂ ಸೇವಕರು ಕಾರ್ಯನಿರ್ವಹಿಸಲು ಮುಂದೆ ಬಂದಿದ್ದಾರೆ. ಅವರನ್ನು ಕೂಡ ವಿವಿಧ ಸ್ಥಳಗಳಲ್ಲಿ ಬಳಕೆ ಮಾಡಿ ಕೊಳ್ಳ ಲಾಗುವುದು. ಭದ್ರಾವತಿಯ ೧೫೦ ಮಂದಿ ಸ್ವಯಂ ಸೇವಕರು ಇಲಾಖೆಗೆ ಸಹಾಯ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ೧೩೦೦ ರೌಡಿ ಶೀಟರ್‌ಗಳು ಇದ್ದಾರೆ. ಅವರೆಲ್ಲರ ಮೇಲೆ ನಿಗಾ ಇರಿಸಲಾಗಿದೆ. ಕೆಲವರು ಊರು ತೊರೆದಿದ್ದಾರೆ. ಇದುವರೆಗೂ ಜೈಲಿನಲ್ಲಿದ್ದು ಹೊರಬಂದಿರುವ ಸುಮಾರು ೭೦ರಿಂದ ೮೦ ಮಂದಿಯನ್ನು ಪುನಃ ವಶಕ್ಕೆ ಪಡೆಯಲಾಗಿದೆ ಎಂದರು.
ಮೆರವಣಿಗೆ ಮೇಲೆ ಸಂಪೂ ರ್ಣ ನಿಗಾ ಇಡಲು ಈಗಾಗಲೇ ೫೦೦ ಸಿಸಿ ಕ್ಯಾಮೆರಾ ಅಳವಡಿಸ ಲಾಗಿದೆ. ಇದರ ಜೊತೆಗೆ ೮ ಡ್ರೋನ್‌ಗಳನ್ನು ಬಳಕೆ ಮಾಡಿಕೊ ಳ್ಳಲಾಗುತ್ತಿದೆ. ೧೦೦ ಕ್ಯಾಮೆರಾ ಕಣ್ಗಾವಲು ಸಹ ಇರಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಎಎಸ್‌ಪಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿವೈಎಸ್‌ಪಿ ಬಾಲರಾಜ್ ಉಪಸ್ಥಿತರಿದ್ದರು.