ಜಿಲ್ಲಾ ಸುದ್ದಿತಾಜಾ ಸುದ್ದಿ

ಸರ್ವeನಿ ಸರ್ವಜ್ಞರು ಸಾಮಾಜಿಕ ನ್ಯಾಯದ ಪ್ರತಿಪಾದಕರು…

Share Below Link

ಶಿವಮೊಗ್ಗ : ಎಡೆ ಸಂಚಾರ ಮಾಡುತ್ತಾ ಎಲ್ಲದರಿಂದ ಕಲಿಯುತ್ತಾ ಸರ್ವeನಿಯಾದ ಮಹಾನ್ ಕವಿ ಸರ್ವಜ್ಞರು ಸಾಮಾಜಿಕ ನ್ಯಾಯವನ್ನು ಪರಿಣಾ ಮಕಾರಿಯಾಗಿ ಪ್ರತಿಪಾದಿಸಿzರೆ ಎಂದು ಜಿ ಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ತಿಳಿಸಿದರು.
ಜಿಡಳಿತ, ಜಿಪಂ, ಮಹಾ ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿ ಕುಂಬಾರರ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಒಂದೇ ಮಾತಿನಲ್ಲಿ ಹೇಳುವು ದಾದರೆ ಎಲ್ಲವನ್ನು ತಿಳಿದ ಮಹಾನ್ ಕವಿ ಸರ್ವಜ್ಞ. ಸಮಾಜ ದಲ್ಲಿ ಮಢ್ಯತೆ ತೊಲಗಬೇಕು. ಸಮ ಸಮಾಜ ನಿರ್ಮಾಣ ಆಗಬೇಕು ಎಂದು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ ಅವರು ಎಲ್ಲರೂ ಉತ್ತಮ ಜೀವನದ ಮೂಲಕ ಶ್ರೇಷ್ಠತೆ ಕಾಣಬೇಕೆಂದು ಹೇಳಿzರೆ. ೧೨ನೇ ಶತಮಾನದಲ್ಲಿ ಬಸವಾದಿ ಶರಣರು ಸಮ ಸಮಾಜಕ್ಕಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾ ಡಿದ್ದು, ಡಾ.ಅಂಬೇಡ್ಕರ್‌ರವರು ಸಂವಿಧಾನ ರಚನೆ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಮುಂದಾದರು. ಎಲ್ಲ ಕಾಲಘಟ್ಟ ದಲ್ಲಿ ಹಲವಾರು ಮಹನೀಯರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿzರೆ ಎಂದ ಅವರು ಸರ್ವಜ್ಞರ ತ್ರಿಪದಿಗಳಲ್ಲಿನ ಸಾರವನ್ನು ಜೀವನದಲ್ಲಿ ಅಳವಡಿ ಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡೋಣ ಎಂದು ಕರೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ಜಿ ಸಂಚಾಲಕ ಡಾ. ಗಣೇಶ ಆರ್. ಕೆಂಚನಾಲ್ ಉಪನ್ಯಾಸ ನೀಡಿ, ಸರ್ವಜ್ಞ ಎಂದರೆ ಎಲ್ಲರೊಳು ಒಂದೊಂದು ವಿಷಯ ತಿಳಿದು, ತಿಳಿಯನ್ನು ಒಳಕ್ಕೆ ಹಾಕಿಕೊಂಡು ತಿಳುವಳಿಕೆ ಹೊಂದಿದವನೇ ಸರ್ವಜ್ಞ. ಜೀವನದ ಸಾರವನ್ನು ಗುರು ಹಿರಿಯರು, ತಂದೆ ತಾಯಿ, ಋಷಿ ಮುನಿಗಳು, ಅನುಭಾವಿಗಳ ಮೂಲಕ ತಿಳಿದವನೇ ಸರ್ವಜ್ಞ ಎಂಬುದಾಗಿದೆ. ಲೋಕ ಸಂಚಾರದ ಅನುಭಕ್ಕಿಂತ ದೊಡ್ಡ ಅನುಭವ ಮತ್ತೊಂದಿಲ್ಲ. ಅದರಂತೆ ಸರ್ವಜ್ಞರು ಲೋಕ ಸಂಚಾರ ಮಾಡುತ್ತಾ ಸಮಾಜದಲ್ಲಿ ಜಗೃತಿ ಮೂಡಿಸಿದ ಮಹಾeನಿ ಎಂದರು.
ಕನ್ನಡ ಭಾಷೆಗೆ ಅತ್ಯಂತ ದೊಡ್ಡ ಇತಿಹಾಸ ಇದ್ದು ಅಪಾರ ಶಬ್ದ ಸಂಪತ್ತು ಇದೆ. ಸರ್ವಜ್ಞರು ಸಾಮಾನ್ಯರಿಗೆ ಅರ್ಥವಾಗುವಂತಹ ಕನ್ನಡ ಭಾಷೆಯಲ್ಲಿ ಸಮಾಜದಲ್ಲಿ ಮಢ್ಯ, ಜತಿ, ವರ್ಣ ಪದ್ದತಿ ಯನ್ನು ವಿರೋಧಿಸುವುದು ಸೇರಿದಂತೆ ಆಹಾರ, ಆರೋಗ್ಯ, ಹೆಣ್ಣು, ಗುರು-ಶಿಷ್ಯರ ಬಾಂಧವ್ಯ, ಭಕ್ತಿ, ವಿeನ ಹೀಗೆ ಎಲ್ಲ ವಿಷಯಗಳ ಬಗ್ಗೆ ತ್ರಿಪದಿಗಳನ್ನು ರಚಿಸಿzರೆ. ಆಶು ಕವಿಯಾಗಿದ್ದ ಇವರ ಜೀವನಾನುಭವವೇ ಸಾಹಿತ್ಯವಾಗಿದೆ ಎಂದರು.
ಸರ್ವಜ್ಞರು ಸುಮಾರು ೭೦೦೦ ಸಾವಿರ ತ್ರಿಪದಿ ರಚಿಸಿzರೆಂದು ತಿಳಿದು ಬಂದಿದ್ದು, ೧೦೦೦ ತ್ರಿಪದಿಗಳು ದಾಖಲೆ ರೂಪದಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಜಿ ಕುಂಬಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ತಾಲ್ಲೂಕು ಅಧ್ಯಕ್ಷ ಎಸ್ ಮಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಇನ್ನಿತರರಿದ್ದರು.

Leave a Reply

Your email address will not be published. Required fields are marked *