ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮೇಗರವಳ್ಳಿ ಶಾಲೆಯಲ್ಲಿ ಯಶಸ್ವಿಯಾಗಿ ಜರುಗಿದ ಆಗುಂಬೆ ವಲಯಮಟ್ಟದ ಕ್ರೀಡಾಕೂಟ…

Share Below Link

ತೀರ್ಥಹಳ್ಳಿ: ಇತ್ತೀಚೆಗೆ ಆಗುಂಬೆ ವಲಯ ಮಟ್ಟದ ಕ್ರೀಡಾಕೂಟವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕ ಆರಗ ಜನೇಂದ್ರ, ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ವೈ.ಗಣೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಪ್ಪ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಉಪಾಧ್ಯಕ್ಷರಾದ ರುಬಿನಾ ಅವರು ಕ್ರೀಡಾ ಜ್ಯೋತಿಯನ್ನು ಬೆಳಗುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಕ್ರೀಡಾಪಟುಗಳಿಗೆ ಶುಭಾಶಯ ಕೋರಿ ಮಾತನಾಡಿದ ಶಾಸಕ ಆರಗ eನೇಂದ್ರ, ಶಿಕ್ಷಣ ಇಲಾಖೆ ಪ್ರತಿ ಬಾರಿ ಮಳೆಗಾಲದಲ್ಲಿಯೇ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿದ್ದು, ಇದರಿಂದ ಮಲೆನಾಡ ಭಾಗದಲ್ಲಿ ಅಧಿಕ ಮಳೆ ಇರುವುದರಿಂದ ವಿಧ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಈ ಕುರಿತು ನಾನು ಈಗಾಗಲೇ ವಿಧಾನ ಸಭೆಯಲ್ಲೂ ಚರ್ಚೆ ಮಾಡಿರುತ್ತೇನೆ. ಮುಂದಿನ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಬೇಕಾದರೆ ಈ ತಿಂಗಳ ಕ್ರೀಡಾಕೂಟ ಆಯೋಜಿಸುವುದು ಅನಿವಾರ್ಯ ಎಂಬ ಉತ್ತರ ಶಿಕ್ಷಣ ಇಲಾಖೆಯಿಂದ ಬಂದಿದೆ. ಆದಾಗ್ಯೂ ಕ್ರೀಡಾಕೂಟ ಆಯೋಜನೆ ಬಹಳ ಅಚ್ಚುಕಟ್ಟಾಗಿದೆ ಎಂದು ಪ್ರಶಂಶಿಸಿದ ಅವರು, ವಿದ್ಯಾರ್ಥಿಗಳು ಸೋತಾಗ ಕುಗ್ಗದೇ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಸೋಲನ್ನೇ ಗೆಲುವಿಗೆ ಮೆಟ್ಟಿಲಾಗಿಸಿಕೊಳ್ಳಿ ಮತ್ತು ಗೆದ್ದವರು ಜಿ-ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ವೈ. ಗಣೇಶ್ ಅವರು ಮಾತನಾಡಿ, ವಿಧ್ಯಾರ್ಥಿಗಳು ಕ್ರೀಡಾಮನೋಭಾವದಿಂದ ಆಟೋಟಗಳಲ್ಲಿ ಪಾಲ್ಗೊಂಡು ಜಯಶಾಲಿಗಳಾಗಿ ಎಂದು ಹಾರೈಸಿದರಲ್ಲದೇ, ತೀರ್ಪುಗಾರರು ನಿಷ್ಪಕ್ಷಪಾತವಾತವಾಗಿ ತೀರ್ಪು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಎಂದು ಕಿವಿಮಾತು ಹೇಳಿದರು.
ಕ್ರೀಡಾಕೂಟದಲ್ಲಿ ಮೇಗರವಳ್ಳಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು, ಆಗುಂಬೆ ಹೋಬಳಿಯ ಎ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಹಳೆಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ವಿಜೇತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಂತಿ ಎನ್ ಕೆ, ಆಗುಂಬೆ ಹೋಬಳಿ ಶಿಕ್ಷಣ ಸಂಯೋಜಕ ಗಣೇಶ್, ಸಿಆರ್‌ಪಿ ಆನಂದ್ ಕುಮಾರ್, ನಾಲೂರು ಸಿಆರ್‌ಪಿ ಸಾದಿಕ್ ಅಹಮದ್, ಪ್ರೌಢ-ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಶಿಕ್ಷಕರು, ನಿವೃತ್ತ ದೈಹಿಕ ಶಿಕ್ಷಣ ಪರೀವೀಕ್ಷಕರಾದ ಧನಂಜಯ, ಕಿರಣ್ ಕುಮಾರ್, ಮೇಗರವಳ್ಳಿ ಪ್ರೌಢ ಶಾಲಾ ಮುಖ್ಯಶಿಕ್ಷಕ ದಿವಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕ್ರೀಡಾಕೂಟಕ್ಕೆ ಹಗಲಿರುಳು ಶ್ರಮಿಸಿ, ಸಹಕರಿಸಿದ ಸರ್ವರನ್ನು ಶಾಲಾಭಿವೃದ್ಧಿ ಸಮಿತಿಯವರು ಸ್ಮರಿಸಿದರು. ಸರ್ವರನ್ನು ಶಿಕ್ಷಕಿ ಪೂರ್ಣಿಮಾ ರವರು ವಂದಿಸಿದರು.


ಶಿಕ್ಷಕಸ್ನೇಹಿ ಶಿಕ್ಷಣಾಧಿಕಾರಿ: ತಾಲೂಕಿಗೆ ನೂತನವಾಗಿ ಕ್ಷೇತ್ರಶಿಕ್ಷಣಾಧಿಕಾರಿಗಳಾಗಿ ಅಧಿಕ ಸ್ವೀಕರಿಸಿರುವ ವೈ.ಗಣೇಶ್ ಅವರು ಶಿಕ್ಷಕ ಸ್ನೇಹಿ, ಸರಳ ಸಜ್ಜನಿಕೆಯ ಸದಾಕ್ರಿಯಾಶೀಲ ವ್ಯಕ್ತಿತ್ವವುಳ್ಳವರು ಎಂಬ ಮಾತು ಶಿಕ್ಷಕ ಮತ್ತು ಪೋಷಕರ ವಲಯದಲ್ಲಿ ಕೇಳಿರುತ್ತಿದೆ. ಕ್ಷೇತ್ರಶಿಕ್ಷಣಾಧಿಕಾರಿಗಳು ಕಚೇರಿಯಲ್ಲಿ ಸದಾ ಶಿಕ್ಷಕರ ಸೇವೆಗೆ ಲಭ್ಯದ್ದು, ಯಾವುದೇ ಪೋಷಕರ ಮಕ್ಕಳ ಶೈಕ್ಷಣಿಕ ವಿಚಾರವಾಗಿ ದೂರವಾಣಿ ಕರೆ ಮಾಡಿದರೆ, ತಕ್ಷಣ ಸ್ಪಂದಿಸುವ ಮೂಲಕ ಸಮಸ್ಯೆಗೆ ಪರಿಹಾರ ಸೂಚಿಸುತ್ತಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಶಿಕ್ಷಣಾಧಿಕಾರಿಗಳು ತಮ್ಮ ಸೇವಾಧಿಕಾರ ಸ್ವೀಕರಿಸಿದ ನಂತರ ಬಹುತೇಕ ಎಲ್ಲಾ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ, ಕ್ರೀಡಾಕೂಟಗಳಲ್ಲಿ ಖುzಗಿ ಪಾಲ್ಗೊಂಡು ಸಲಹೆ ಮಾರ್ಗದರ್ಶನ ನೀಡಿರುತ್ತಾರೆ. ಈ ಬಾರಿಯ ಶಿಕ್ಷಕರ ದಿನಾಚರಣೆಯ ಆಯೋಜನೆಯು ಸಹ ಅಚ್ಚುಕಟ್ಟಾಗಿ ನೆರವೇರಿದ್ದು, ಕೆಳಹಂತದ ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾವು ಪಾಲಿಸಿ, ಇತರರಿಗೆ ಪಾಲಿಸುವಂತೆ ಹೇಳುವ ಮಾದರಿ ಶಿಕ್ಷಣಾಧಿಕಾರಿಗಳು ತೀರ್ಥಹಳ್ಳಿಗೆ ಬಂದಿರುವುದು ಹೆಮ್ಮೆಯ ವಿಚಾರವಾಗಿದ್ದು, ಮುಂದಿನ ದಿನಗಳಲ್ಲಿ ಇವರಿಂದ ತಾಲೂಕಿನ ಶೈಕ್ಷಣಿಕ ಗುಣಮಟ್ಟ ಹೆಚ್ಚುವ ಮೂಲಕ ಹೊಸ ಯೋಜನೆ ಯೋಚನೆಗಳೊಂದಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಇನ್ನಷ್ಟು ಉತ್ತಮಗೊಳ್ಳಲಿ ಎಂಬುದು ತಾಲೂಕಿನ ಜನತೆಯ ಅಶಯವಾಗಿದೆ.