ಜಿಲ್ಲಾ ಸುದ್ದಿತಾಜಾ ಸುದ್ದಿ

ವಾಸಸ್ಥಳದ ಹಕ್ಕು ಪತ್ರ ನೀಡಲು ಸ್ಥಳೀಯ ನಿವಾಸಿಗಳಿಂದ ಮನವಿ

Share Below Link

ಶಿವಮೊಗ್ಗ: ಹಾತಿ ನಗರದಲ್ಲಿ ವಾಸವಾಗಿರುವ ವಾರ್ಡ್ ನಂ.೧೩ ರ ನಿವಾಸಿಗಳನ್ನು ಸಕ್ಕರೆ ಕಾರ್ಖಾ ನೆಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಬಂದು ಜಗ ಖಾಲಿ ಮಾಡುವಂತೆ ಒತ್ತಾಯಿಸು ತ್ತಿದ್ದು, ನಮಗೆ ವಾಸಸ್ಥಳದ ಹಕ್ಕು ಪತ್ರ ನೀಡಬೇಕು ಹಾಗೂ ಸಕ್ಕರೆ ಕಾರ್ಖಾನೆಯ ಮಾಲೀಕರಿಗೆ ತಿಳಿಹೇಳಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಜಿಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ೩೦ ವರ್ಷಗಳಿಂದ ಮೂವತ್ತಕ್ಕೂ ಹೆಚ್ಚು ಕುಟುಂಬ ಗಳು ಸ್ಥಳದಲ್ಲಿ ವಾಸಿಸುತ್ತಿದ್ದು, ಸರ್ಕಾರದಿಂದ ವಿದ್ಯುತ್ ಸಂಪರ್ಕ, ಬಿ.ಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಿರು ತ್ತೇವೆ. ಕುಡಿಯುವ ನೀರು ಸೇರಿ ದಂತೆ ಮೂಲಭೂತ ಸೌಲಭ್ಯವನ್ನು ಪಾಲಿಕೆಯಿಂದ ಪಡೆದುಕೊಂಡಿ ದ್ದು, ಇದುವರೆಗೆ ನಮಗೆ ಯಾವು ದೇ ತೊಂದರೆಯನ್ನು ಯಾರೂ ನೀಡಿರಲಿಲ್ಲ. ಪಕ್ಕದ ಚಾನ್ ಮತ್ತು ರೈಲ್ವೆ ಟ್ರ್ಯಾಕ್ ಹಾದು ಹೋಗಿದ್ದು, ರಸ್ತೆ ಅಗಲೀಕರಣ ಸಂದರ್ಭದಲ್ಲಿ ನಮ್ಮನ್ನು ಸ್ಥಳಾಂತರಿ ಸಲಾಗಿತ್ತು. ಜೂ.೨೧ರಂದು ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಕೆಲ ವರು ಪೊಲೀಸ್ ಸಿಬ್ಬಂದಿಯೊಂ ದಿಗೆ ಆಗಮಿಸಿ ನಮ್ಮ ವಿಳಾಸ ಮತ್ತು ಫೋನ್ ನಂ. ತೆಗೆದುಕೊಂಡು ಹೋಗಿದ್ದು, ತೆರವುಗೊಳಿಸಲು ತಿಳಿಸಿzರೆ.
ನಾವು ಇದುವರೆಗೆ ಬೇರೆ ಕಡೆ ನಿವೇಶನ ಅಥವಾ ಮನೆ ಹೊಂದಿ ರುವುದಿಲ್ಲ. ಹಾತಿನಗರ ಕ್ಯಾಂಪ್ ನ ಚಿಕ್ಕದಾಗಿ ಮನೆ ಕಟ್ಟಿಕೊಂಡು ವಾಸವಾಗಿದ್ದು, ನಮಗೆ ಯಾವು ದೇ ರೀತಿಯ ತೊಂದರೆ ಆಗದಂತೆ ಮನೆ ತೆರವುಗೊಳಿಸದಂತೆ ವ್ಯವಸ್ಥೆ ಮಾಡಬೇಕೆಂದು ಸಂತ್ರಸ್ತರು ಮನವಿಯಲ್ಲಿ ಆಗ್ರಹಿಸಿzರೆ.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ರಾಜಶೇಖರ್, ಸುಧಾ, ಸಿದ್ದಲಿಂಗಮ್ಮ, ಚಂದ್ರ ಮತಿ, ರಂಗಮ್ಮ, ಪವಿತ್ರ, ಪ್ರಮೀ ಳಾ ಸೇರಿದಂತೆ ೨೫ಕ್ಕೂ ಹೆಚ್ಚು ಕುಟುಂಬದವರು ಭಾಗವಹಿಸಿ ದ್ದರು.