ಗ್ರಾಹಕರಿಗೆ ಸಕಾಲದಲ್ಲಿ ಸಮರ್ಪಕ ಸೇವೆ ಮುಖ್ಯ:ಜಿವಿಕೆ
ಶಿವಮೊಗ್ಗ: ಎಲ್ಲ ಉದ್ಯಮ ಕ್ಷೇತ್ರಗಳಲ್ಲಿ ಹಣಕಾಸಿನ ವಹಿವಾಟು ಅತಿ ಮುಖ್ಯ ಪಾತ್ರ ವಹಿಸಿದ್ದು, ಬ್ಯಾಂಕ್‌ಗಳ ಪಾತ್ರ ಕೂಡ ಅವಶ್ಯಕ ವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕ್‌ಗಳು ಸಕಾಲದಲ್ಲಿ ಸಮರ್ಪಕ ಸೇವೆ ಒದಗಿಸಬೇಕು ಎಂದು ಜಿ ವಾಣಿಜ್ಯ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.
ನಗರದ ದುರ್ಗಿಗುಡಿಯಲ್ಲಿ ರುವ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಟಿಎಂ ಯಂತ್ರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬ್ಯಾಂಕ್ ಗಳು ನಂಬಿಕೆಗೆ ಪಾತ್ರವಾಗುವ ಜತೆಯಲ್ಲಿ ಉತ್ತಮ ತುರ್ತು ಸೇವೆಗಳನ್ನು ಒದಗಿಸಬೇಕು. ಯೂನಿಟಿ ಬ್ಯಾಂಕ್ ಗ್ರಾಹಕರಿಗೆ ವಿಶೇಷ ಸೇವೆಗಳ ಮೂಲಕ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಬ್ಯಾಂಕ್‌ಗಳು ಸೇವೆ ವಿತರಣೆಯಲ್ಲಿ ಸರಳ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಉದ್ಯಮಿ ನಾಗರಾಜ್ ಜಿ. ಆರ್. ಮಾತನಾಡಿ, ಬೇರೆ ಬೇರೆ ಖಾಸಗಿ ಹಣಕಾಸು ಸಂಸ್ಥೆ ಗಳಿಗಿಂತ ಬ್ಯಾಂಕ್‌ಗಳು ವ್ಯವಹಾರ ಭದ್ರತೆ ಹಾಗೂ ಸುರಕ್ಷತೆ ಹೊಂದಿದೆ. ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ನೀಡುತ್ತಿವೆ. ಗ್ರಾಹಕರು ವ್ಯವಹಾರ ವನ್ನು ಸರಿಯಾಗಿ ಇಟ್ಟುಕೊಂಡು ನಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ಎಂ.ಜಿ.ಹೆಗಡೆ ಮಾತನಾಡಿ, ಇಂದು ದೇಶಾದ್ಯಂತ ೨೦೦ಕ್ಕೂ ಹೆಚ್ಚು ಅಧಿಕ ಎಟಿಎಂ ಸೇವೆಯನ್ನು ಜನರಿಗೆ ಒದಗಿಸಲಾ ಗುತ್ತಿದೆ. ಗ್ರಾಹಕರ ಸಂಖ್ಯೆ ಹೆಚ್ಚಿಸಿ ಕೊಳ್ಳುವುದರ ಜತೆಗೆ ಹಲವಾರು ಸೇವೆಗಳನ್ನು ನಾವು ನೀಡುತ್ತಿದ್ದೇವೆ. ವಿಶ್ವಾಸಾರ್ಹ ಸೇವೆ ಒದಗಿಸುತ್ತಿರುವ ಸಂಸ್ಥೆ ಯೂನಿಟಿ ಬ್ಯಾಂಕ್ ಎಂದರು.
ಗ್ರಾಹಕ ರವೀಂದ್ರ ಪಾಲ್ ಸಿಂಗ್ ಎಟಿಎಂನಲ್ಲಿ ಹಣ ಡೆಪಾಸಿಟ್ ಮಾಡಿದರು. ಸಂತೋಷ್ ಕಾಮತ್, ಶಿವರಾಜ್ ಹೊಸೂರ್, ನಾಗರಾಜ. ಎಚ್.ಎನ್. ಹಾಗೂ ಬ್ಯಾಂಕ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.