ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್ ಮಕ್ಕಳ ಸಾಧನೆ ಶ್ಲಾಘನೀಯ : ಬಿಇಓ
ಶಿವಮೊಗ್ಗ : ಶಿಕ್ಷಣದ ಜೊತೆ ಕ್ರೀಡಾ ಕ್ಷೇತ್ರಕ್ಕೂ ಹೆಚ್ಚಿನ ಒತ್ತು ನೀಡುತ್ತ ಶಾಲಾ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸುವಂತೆ ಪ್ರೋತ್ಸಾಹಿಸಿ, ಜಿಯಲ್ಲಿ ಉತ್ತಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಾಮಿ ವಿವೇಕಾ ನಂದ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ರವರಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ತಿಳಿಸಿದರು.
ರವೀಂದ್ರ ನಗರದ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷ ನಲ್ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್‍ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಮಕ್ಕಳಿಗೆ ಶಿಸ್ತಿನ ಜೊತೆ ಆಸಕ್ತಿಯಿಂದ ಇಷ್ಟಪಟ್ಟು ಶಾಲೆಗೆ ಬರುವಂತಹ ವಾತಾವರಣ ಈ ಶಾಲೆಯಲ್ಲಿದೆ. ಪ್ರತಿ ಮಕ್ಕಳನ್ನು ಪ್ರೀತಿಯಿಂದ ಉತ್ತಮ ಶಿಕ್ಷಣ ನೀಡುತ್ತ ಕ್ರೀಡೆಯಲ್ಲೂ ಮೇಲುಗೈ ಸಾಧಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದ ಎಜು ಕೇಶನಲ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷ ಅನೂಪ್ ಎನ್. ಪಟೇಲ್ ಅವರು ಮಾತನಾಡಿ, ಶಾಲೆಯ ಕೀರ್ತಿ ಪತಾಕಿಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಬೇಕು ಎಂದು ಕರಾಟೆ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸ್ವಾಮಿ ವಿವೇಕಾನಂದ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಯಾದ ಮಾಸ್ಟರ್ ಮೊಹಮ್ಮದ್ ಬಿಲಾಲ್, ಧರ್ವೇಶ್ ಅವರಿಗೆ ಶುಭ ಹಾರೈಸಿದ ಅವರು, ಬಿಲಾಲ್ ನಮ್ಮ ಶಾಲೆಗೆ ಸಾಧನೆಯ ಸ್ಪೂರ್ತಿಯಾಗಿದ್ದು, ಶಾಲೆಯ ಇತರೆ ಎ ಮಕ್ಕಳು ಇವರಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪ್ರಥಮ ಸ್ಥಾನ ವನ್ನು ಪಡೆದು ಯಾವಾಗಲೂ ಉತ್ಸಾಹದ ಚಿಲುಮೆ ಆಗಿರ ಬೇಕೆಂದು ಮಕ್ಕಳಿಗೆ ಹುರಿದುಂ ಬಿಸಿದರು.
ಸಂಸ್ಥೆಯ ಉಪಾಧ್ಯಕ್ಷೆ ರಾಗಿಣಿ ಸಿಂಗ್, ಶಾಲಾ ಮುಖ್ಯ ಶಿಕ್ಷಕಿ ರೂಪಶ್ರೀ ಪೋಷಕರು ಮತ್ತು ಕರಾಟೆ ಶಿಕ್ಷಕರೂ ಆದ ಮುಖೀಬ್ ಅಹಮದ್ ಧರ್‌ವೇಶ್ ಉಪಸ್ಥಿತರಿದ್ದರು.