ಅಂತರಾಷ್ಟ್ರೀಯ ಡಾಡ್ಜ್ ಬಾಲ್‌ನಲ್ಲಿ ಬಿಜಿಎಸ್ ಶಾಲೆಯ ಸಾಧನೆ…
ಶಿವಮೊಗ್ಗ : ಭಾರತ ಪುರುಷರ ಡಾಡ್ಜ್ ಬಾಲ್ ತಂಡದ ಆಯ್ಕೆ ತರಬೇತಿಯನ್ನು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಆವರಣ ದಲ್ಲಿ ಪುರುಷರ ಮತ್ತು ಮಹಿಳೆಯರ ಡಾಡ್ಜ್ ಬಾಲ್ ತಂಡದ ತರಬೇತಿಯನ್ನು ಮೇ .೧೬ ರಿಂದ ೨೨ ರವರೆಗೆ ಹಮ್ಮಿಕೊಂಡಿತ್ತು, ಈ ತರಬೇತಿಯಲ್ಲಿ ದೇಶದ ವಿವಿಧ ರಾಜ್ಯಗ ಳಿಂದ ಪ್ರತಿಭಾವಂತ ಕ್ರೀಡಾಪಟುಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು, ತರಬೇತಿ ಶಿಬಿರದಲ್ಲಿ ಶಿವಮೊಗ್ಗ ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಪ್ರತಿಭಾವಂತ ಕ್ರೀಡಾಪಟುಗಳಾದ ಹೇಮಂತ್ ಗೌಡ ಮತ್ತು ಮಣಿಕಂಠ ಎಸ್. ಈ ಪ್ರತಿಭೆಗಳು ಭಾಗವಹಿಸಿ ಉತ್ತಮ ಆಟದ ಪ್ರದರ್ಶನ ನೀಡಿ, ಪುರುಷರ ಭಾರತ ತಂಡದ ಡಾಡ್ಜ್ ಬಾಲ್ ಗೆ ಆಯ್ಕೆಯಾಗಿ ರುವುದು ಹೆಮ್ಮೆಯ ಸಂಗತಿ.
ಇಂತಹ ಸಾಧನೆಯಲ್ಲಿಯೇ ಹೇಮಂತ್ ಗೌಡ, ಮಣಿಕಂಠ ದೇಶದ ಪ್ರಮುಖ ಡಾಡ್ಜ್ ಬಾಲ್ ನಲ್ಲಿ ಉತ್ತಮ ಕ್ರೀಡಾ ಪ್ರತಿಭೆಗಳಾಗಿ ಹೊರಹೊಮ್ಮಿzರೆ.
ಈ ಪ್ರತಿಭಾನ್ವಿತರು ಮೇ ೨೫ ರಿಂದ ೨೯ ರವರೆಗೆ ಮಲೇಶಿಯಾದಲ್ಲಿ ಆಯೋಜಿ ಸಲಾಗಿದ್ದ ಅಂತರಾಷ್ಟ್ರೀಯ ಡಾಡ್ಜ್ ಬಾಲ್ ಪುರುಷರ ಚಾಂಪಿಯನ್ ಶಿಫ್ ನಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿ, ಏಷ್ಯನ್ ಗೇಮ್ಸ್ ಮತ್ತು ವರ್ಡ್ ಚಾಂಪಿಯನ್ ಶಿಫ್ ನಲ್ಲಿ ಆಡುವ ಅರ್ಹತೆಯನ್ನು ಪಡೆದು ಕೊಂಡಿರುವುದು ಮತ್ತೊಂದು ವಿಶೇಷ.
ಡಾಡ್ಜ್ ಬಾಲ್ ನಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರತಿನಿಧಿಸಿ ಶಿವಮೊಗ್ಗ ಜಿ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿರುತ್ತಾರೆ. ಚಿತ್ರಕಲೆ,
ಯೋಗ, ಹ್ಯಾಂಡ್ ಬಾಲ್, ವಾಲಿ ಬಾಲ್, ಕಬ್ಬಡ್ಡಿ, ಅಥ್ಲೆಟಿಕ್ಸ್ ನಲ್ಲಿ ಸೇರಿದಂತೆ ಹಲವು ವಿಭಾಗಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ತನ್ನ ಪರಿಶ್ರಮದಿಂದ ಮತ್ತು ಅತ್ಯುತ್ತಮ ಆಟದ ಪ್ರದರ್ಶನ ನೀಡಿರುವ ಹೇಮಂತ್ ಗೌಡ ಹಾಗೂ ಮಣಿ ಕಂಠ ಎಸ್. ಅನೇಕ ಬಹುಮಾನಗಳನ್ನು ಪಡೆದಿದ್ದು, ಶಿವಮೊಗ್ಗ ಜಿಯ ಹಿರಿಮೆ ಯನ್ನು ಎತ್ತಿ ಹಿಡಿದಿzರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಡಾಡ್ಜ್ ಬಾಲ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಹೇಮಂತ್ ಗೌಡ, ತಂದೆ ಯೋಗೀಶ್ ಮತ್ತು ತನುಜ ದಂಪತಿ ಗಳ ಪುತ್ರನಾಗಿರುತ್ತಾನೆ. ಅದೇ ರೀತಿ ಮಣಿ ಕಂಠ ಎಸ್. ತಂದೆ ಸುರೇಂದ್ರ ಎಸ್ ನಾಯ್ಕ ಹಾಗೂ ಸುಮಾ ದಂಪತಿಗಳ ಪುತ್ರನಾಗಿ ರುತ್ತಾನೆ. ಕ್ರೀಡೆಯ ಜೊತೆಗೆ ಓದಿನ ಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಯಾಗಿ zರೆ.
ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕಾರ್ತಿಕ್ ಪಟೇಲ್ ಜಿ.ಎನ್. ಇವರ ತರ ಬೇತಿಯಲ್ಲಿ ತರಬೇತಿಯನ್ನು ಪಡೆದಿರು ತ್ತಾರೆ. ಹಾಗೂ ಭಾರತ ಡಾಡ್ಜ್ ಬಾಲ್ ಪುರುಷರ ತಂಡದ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸಿರುವುದು ಮತ್ತೊಂದು ಹೆಮ್ಮೆಯ ವಿಚಾರ.
ಈ ಸಾಧನೆ ಪರಿಶ್ರಮದ ಹಿಂದೆ ಬೆನ್ನು ತಟ್ಟಿ, ಮಾರ್ಗದರ್ಶನವನ್ನು ನೀಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಹೇಮಾ ಎಸ್. ಆರ್. ಹಾಗೂ ಅಧ್ಯಾಪಕ ವೃಂದದ ವರು ಮತ್ತು ಭಾರತೀಯ ಡಾಡ್ಜ್ ಬಾಲ್ ಸಂಸ್ಥೆಯ ಕಾರ್ಯದರ್ಶಿ, ಶ್ರೀ ನರಸಿಂಹ ರೆಡ್ಡಿ, ರಾಜ್ಯ ಡಾಡ್ಜ್ ಬಾಲ್ ಕಾರ್ಯದರ್ಶಿ, ಶ್ರೀ ರಾಜೇಶ್ ಇವರ ಸೂಕ್ತ ಮಾರ್ಗದರ್ಶನ ನಮ್ಮ ಕ್ರೀಡಾ ಬದುಕಿಗೆ ಹೊಸ ದಾರಿ ತೋರಿಸಿತು ಎನ್ನುತ್ತಾರೆ ಈ ಪ್ರತಿಭೆಗಳು.
ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದ ಡಾಡ್ಜ್ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿ, ಇನ್ನೂ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆಯಲಿ ಎನ್ನುವುದೇ ನಮ್ಮೆಲ್ಲರ ಶುಭ ಹಾರೈಕೆ.