ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ
ಸೊರಬ: ದೇವಸ್ಥಾನಗಳನ್ನೇ ಗುರಿಯಾಗಿಸಿ ಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸೊರಬ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿzರೆ.

ಘಟನೆ ಹಿನ್ನೆಲೆ: ಪಟ್ಟಣದ ಪುರಸಭೆ ಮುಂಭಾಗದಲ್ಲಿ ದೀಪಾ ವಳಿ ಹಬ್ಬದ ನಿಮಿತ್ತ ಗಸ್ತಿನಲ್ಲಿದ್ದ ಸಿಬ್ಬಂದಿಯನ್ನು ಕಂಡು ವ್ಯಕ್ತಿ ಯೋರ್ವ ಓಡಲು ಯತ್ನಿಸಿzನೆ. ಆತನನ್ನು ವಶಕ್ಕೆ ಪಡೆದು ವಿಚಾ ರಣೆಗೆ ಒಳಪಡಿಸಿದಾಗ ದೇವಸ್ಥಾನ ಗಳ ಕಳುವು ಪ್ರಕರಣಗಳು ಬೆಳಕಿಗೆ ಬಂದಿದೆ. ದಾವಣಗೆರೆ ಜಿ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಕೆ. ಸಂದೀಪ ಕರಿಬಸಪ್ಪ ಬಂಧಿತ ಆರೋಪಿ.
ಇತ್ತೀಚೆಗೆ ಕಡಸೂರು ಗ್ರಾಮದ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಕಳ್ಳತನವಾದ ಬಗ್ಗೆ ದೂರು ದಾಖ ಲಾಗಿತ್ತು. ಬಂಧಿತ ಆರೋಪಿಯಿಂದ ಸುಮಾರು ನಾಲ್ಕು ಲಕ್ಷ ರೂ., ಮಲ್ಯದ ೩೬ ಗ್ರಾಂ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾ ಗಿದೆ. ಸಾಗರ ತಾಲೂಕಿನ ಯಲ ಕುಂದ್ಲಿ ಗ್ರಾಮದ ಶ್ರೀ ರಾಚಮ್ಮ ದೇವಸ್ಥಾನ, ದಿಗಟೆಕೊಪ್ಪ ಗ್ರಾಮದ ಚೌಡಮ್ಮ ದೇವಸ್ಥಾನ, ಶಿರೂರು- ಆಲಳ್ಳಿ ಗ್ರಾಮದ ಯಕ್ಷಾಂಬ ದೇವಸ್ಥಾನ, ಬಲೆಗಾರು ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನ, ಮರತ್ತೂರು ಗ್ರಾಮದ ದುರ್ಗಮ್ಮ ದೇವಸ್ಥಾನ ಹಾಗೂ ಕಾರ್ಗಲ್ ಠಾಣಾ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ಕೋಟೇಶ್ವರ ದೇವಸ್ಥಾನ ಗಳಲ್ಲಿ ಕಳವು ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿರು ತ್ತದೆ.
ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್, ಎಎಸ್‌ಪಿಗಳಾದ ಬಿ. ರಮೇಶ್ ಹಾಗೂ ಕಾರಿಯಪ್ಪ, ಶಿಕಾರಿಪುರ ಡಿವೈಎಸ್‌ಪಿ ಕೆ.ಇ. ಕೇಶವ, ಸಿಪಿಐ ಮಹಾಂತೇಶ ಕೆ. ಲಂಬಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಎಂ.ಎಚ್. ನವೀನ್ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಸಿಬ್ಬಂದಿ ನಾಗೇಶ್, ರಾಜುನಾಯ್ಕ್, ಆರ್. ಗಿರೀಶ್, ರಾಘವೇಂದ್ರ, ಲೋಕೇಶ್, ವಿನಯ, ಗಿರೀಶ್, ಹನುಮಂತ, ಮಶ್, ಕೆ.ಎನ್. ಶಶಿಧರ, ಸಂದೀಪ, ಸೋಮಶೇಖರ, ಉಮೇಶ್, ಕಿರಣ್, ಮೋಹನ್, ರವೀಂದ್ರ, ಹೇಮಲತಾ, ರೂಪಾಲಿ ಪಾಲ್ಗೊಂಡಿದ್ದರು.

