ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಅಕ್ರಮ ನಾಡಬಂದೂಕು ತಯಾರಿಕೆ ಮಾಲು ಸಹಿತ ಆರೋಪಿ ಅರೆಸ್ಟ್…

Share Below Link

ಶಿಕಾರಿಪುರ: ಪಟ್ಟಣಕ್ಕೆ ಸಮೀಪದ ಭದ್ರಾಪುರ ಗ್ರಾಮದಲ್ಲಿ ಮರ ಕೆಲಸ ವೃತ್ತಿಯ ಲಕ್ಷ್ಮಣಪ್ಪ (೬೭ ) ಎಂಬುವವರು ಮನೆಯ ಪಕ್ಕದಲ್ಲಿನ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕು ಗಳನ್ನು ತಯಾರಿಸುತ್ತಿದ್ದ ಖಚಿತ ಮಾಹಿತಿ ಆಧರಿಸಿ ಪಟ್ಟಣ ಪೊಲೀಸ್ ಠಾಣೆ ಸಿಬ್ಬಂದಿ ದಾಳಿ ನಡೆಸಿ ನಾಡು ಬಂದೂಕು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿzರೆ .
ದಾಳಿಗೂ ಮುನ್ನ ಸ್ಥಳೀಯ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಪೊಲೀಸರು ಮನೆಯನ್ನು ಶೋಧಿಸಿದಾಗ ೭ ನಾಡ ಬಂದೂಕುಗಳು ಹಾಗೂ ಸಂಬಂಧಿಸಿದ ಇತರೆ ವಸ್ತುಗಳು ಸಹ ಪತ್ತೆಯಾಗಿದ್ದು ವಶಪಡಿಸಿಕೊಳ್ಳಲಾಗಿದೆ.
ನ್ಯಾಯಾಲಯವು ಆರೋಪಿ ಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು ಪೊಲೀಸ್ ಉಪಾಧೀಕ್ಷಕ ಕೆ.ಇ ಕೇಶವ ಅವರ ಮೇಲ್ವಿಚಾರಣೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಶರತ್ ಹಾಗೂ ಸಿಬ್ಬಂದಿ ಕೊಟ್ರೇಶ, ಪ್ರದೀಪ್, ರವಿಕುಮಾರ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *