ಮುಕ್ತ ಅವಕಾಶದೊಂದಿಗೆ ಶೈಕ್ಷಣಿಕ ಜೀವನ…
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಪಯಣದಲ್ಲಿ ಪ್ರೌಢ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣದ ಮೈಲು ಗಲ್ಲುಗಳು ತುಂಬಾ ಪ್ರಮುಖ ಪಾತ್ರ ವಹಿಸುತ್ತವೆ . ಆದ್ದರಿಂದ ಈ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಹಂತಗಳನ್ನು ಮುಗಿಸಿದ ವಿದ್ಯಾರ್ಥಿಗಳ ಮುಂದಿನ ಓದಿಗಾಗಿ ತಮ್ಮ ಅವಗಾಹನಕ್ಕೆ ಈ ಲೇಖನ .
ಉತ್ತೀರ್ಣರಾದ ಮಕ್ಕಳು ಮುಂದೆ ಏನು? ಯಾವ ? ಕಲಿಕಾ ತರಗತಿಗಳು (ಕೋರ್ಸ್‌ಗಳು) ಸೇರಬೇಕು ಎಂಬುದರ ಗೊಂದಲ ಗಳು ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲ ಪಾಲಕ ಬಂಧುಗಳಲ್ಲಿಯೂ ಕೂಡಾ ಕಾಡುವಂತಹ ದೊಡ್ಡ ಪ್ರಶ್ನೆಯಾ ಗಿದೆ. ಹಾಗಾಗಿ ನಾವು ಆಯ್ಕೆ ಮಾಡುವ ಕೋರ್ಸ್‌ಗಳು ಹೇಗೆ ನಮ್ಮ ಭವಿಷ್ಯವನ್ನು ರೂಪಿಸುವುವು , ಇದರಿಂದ ನಾವು ಹೇಗೆ ಸಂತೃಪ್ತ ಜೀವನ ಸಾಗಿದಬಹುದು ಎಂಬು ದನ್ನು ಮೊದಲೇ ಯೋಜಿಸಿಕೊಂಡು ಮುಂದಿನ ಓದಿಗೆ ಅಣಿಯಾಗಬೇಕು.
ಇದರಲ್ಲಿ ವಿದ್ಯಾರ್ಥಿಗಳ ಆಸಕ್ತಿ, ಬುದ್ಧಿಮತ್ತೆ, ದೃಢತೆ ಹಾಗೂ ನಿರ್ಧಾ ರಗಳು ಪ್ರಮುಖ ಪಾತ್ರ ವಹಿಸು ತ್ತವೆ. ಹಾಗೆಯೇ ಪಾಲಕರ ಮಾರ್ಗ ದರ್ಶನ, ಪ್ರೋತ್ಸಾಹ, ಆತ್ಮಸ್ಥೈರ್ಯ ತುಂಬುವ ಕಾರ್ಯವು ಕೂಡ ಶೈಕ್ಷಣಿಕ ಕೊಂಡಿಯನ್ನು ಜೋಡಿಸುವ ವ್ಯವಸ್ಥೆಯಾಗಿದೆ. ಆದ್ದರಿಂದ ಪ್ರತಿ ಶೈಕ್ಷಣಿಕ ಹಂತದ ಆಯ್ಕೆಯು ಈ ಇಬ್ಬರ ಸಮ್ಮಿಳಿತ ಯೋಚನೆಗಳಿಂದ ಕೂಡಿದ್ದರೆ ಮಕ್ಕಳ ಶೈಕ್ಷಣಿಕ ಜೀವನವು ನಿಶ್ಚಿತ ಗುರಿ ತಲುಪುವಲ್ಲಿ ಯಾವುದೇ ತೊಂದರೆ ಆಗಲು ಸಾಧ್ಯವಿಲ್ಲ
ಮಕ್ಕಳ ಓದಿನಲ್ಲಿ ಪಾಲಕರ ಪಾತ್ರ:
- ಮಕ್ಕಳಿಗೆ ಕೈಗೆಟಕುವ ದೇವರೆಂದರೆ ಅದು ತಂದೆ ತಾಯಿಗಳು ಮಾತ್ರ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಪಾಲಕರೆ ದಾರಿ ದೀವಿಗೆಗಳು. ಹಾಗಾಗಿ ಮಕ್ಕಳ ಭವಿಷ್ಯ ರೂಪಣೆಗೆ ಪಾಲಕರು ಉತ್ತಮ ಮಾರ್ಗದರ್ಶನ ಮಾಡಬೇಕು.
- ಮಕ್ಕಳ ಆಸಕ್ತಿ ಅಭಿರುಚಿಗೆ ತಕ್ಕಂತೆ ಓದುವ ಮುಕ್ತ ಅವಕಾಶವನ್ನು ಅವರಿಗೆ ನೀಡಬೇಕು.
- ಮಕ್ಕಳಿಗೆ ಓದಿನಲ್ಲಿ ಒತ್ತಡ ಹಾಗೂ ಅತಿಯಾದ ಆಕಾಂಕ್ಷೆಗಳ ಮೂಟೆಗಳನ್ನು ಎಂದೂ ಹೊರಿಸಬಾರದು.
- ಕಡಿಮೆ ಅಂಕಗಳಿಸಿದ ಮಕ್ಕಳಿಗೆ ಆಘಾತಕಾರಿ ನಿಂದನೆಗಳನ್ನು ಮಾಡಬಾರದು .
- ಬೇರೆ ಮಕ್ಕಳ ಬುದ್ಧಿಮಟ್ಟಕ್ಕೆ ಎಂದಿಗೂ ತಮ್ಮ ಮಕ್ಕಳ ಬುದ್ಧಿಮಟ್ಟ ವನ್ನು ಹೋಲಿಸಿ ನಿಂದಿಸಬಾರದು.
- ತಮ್ಮ ಮಕ್ಕಳ ಬುದ್ಧಿಮತ್ತೆಗೆ ಅನುಸಾರವಾಗಿ ಮುಂದಿನ ತರಗತಿ (ಕೋರ್ಸ್) ಗಳಿಗೆ ಸೇರಿಸಿ ಅವರಿಗೆ ಪ್ರೋತ್ಸಾಹ ಒದಗಿಸಬೇಕು.
- ಬೇರೆಯವರಿಂದ ವಿವಿಧ ಕೋರ್ಸ್‌ಗಳ ಬಗ್ಗೆ ಮಾಹಿತಿ ಪಡೆದು ಸೂಕ್ತ ಕೋರ್ಸ್‌ನ ಆಯ್ಕೆಯನ್ನು ಮಾಡುವಲ್ಲಿ ಮಕ್ಕಳಿಗೆ ಪಾಲಕರು ಸಹಾಯ ಮಾಡಬೇಕು.
- ಮಕ್ಕಳ ಮೇಲೆ ಇದೇ ಕೋರ್ಸ್ ಸೇರು ಇದೇ ನೌಕರಿ ಪಡೆಯಬೇಕೆಂಬ ಕಟ್ಟಾeಯನ್ನು ಮಾಡಬಾರದು.
- ಮಕ್ಕಳ ಶೈಕ್ಷಣಿಕ ಜೀವನದ ಜೊತೆಯಲ್ಲಿ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೂ ಪಾಲಕರು ನಿಗಾ ವಹಿಸಬೇಕು.
- ತಮ್ಮ ಮಕ್ಕಳ ಶೈಕ್ಷಣಿಕ ಜೀವನವು ಉಸ ಹಾಗೂ ಉತ್ಸಾಹದಿಂದ ಕೂಡಿರುವಂತೆ ನೋಡಿಕೊಳ್ಳಬೇಕು.
- ಮಕ್ಕಳ ಶೈಕ್ಷಣಿಕದ ಪ್ರತಿ ಸೋಲಿನಲ್ಲೂ ಆತ್ಮ ಸ್ಥೈರ್ಯವನ್ನು ತುಂಬಿ ಅವರನ್ನು ಖಿನ್ನತೆಯಿಂದ ಹೊರಬರುವಂತೆ ಮಾಡಬೇಕು.
- ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ನಡತೆ ಹಾಗೂ ಆಚಾರ ವಿಚಾರಗಳ ಪರಿಕಲ್ಪನೆಯನ್ನು ಚಿಕ್ಕಂದಿನಿಂದಲೇ ಮೂಡಿಸಬೇಕು.
- ಮಕ್ಕಳ ಜೊತೆ ಪಾಲಕರ ಸಂಬಂಧವು ಉತ್ತಮ ಹಾಗೂ ಸಂತೋಷಕರ ವಾತಾವರಣ ನಿರ್ಮಿಸಿಕೊಂಡಿರಬೇಕು.
- ಮಕ್ಕಳ ಪ್ರತಿ ಅಭಿರುಚಿಯನ್ನು ಸಮ್ಮತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು.
- ಕೇವಲ ಓದುವ ಹಾಗೂ ಉತ್ತಮ ಅಂಕ ಗಳಿಸುವ ಒತ್ತಡದ ಉದ್ದೇಶವನ್ನು ಮಕ್ಕಳ ಮೇಲೆ ಎಂದೂ ಹಾಕಬಾರದು.
ಒಟ್ಟಿನಲ್ಲಿ ಮಕ್ಕಳ ಭವಿಷ್ಯವನ್ನು ನಿರೂಪಿಸುವಲ್ಲಿ ಪಾಲಕರು ಸರ್ವ ಪ್ರೋತ್ಸಾಹವನ್ನು ನೀಡಿ ಉತ್ತಮ ನಾಗರೀಕರಾಗುವಂತೆ ಮಾಡುವುದು ಅವರ ಕರ್ತವ್ಯವಾಗಿದೆ.
ಶೈಕ್ಷಣಿಕ ಕ್ಷೇತ್ರದ ಆಯ್ಕೆಯಲ್ಲಿ ಮಕ್ಕಳ ಪಾತ್ರ:
*ಮಕ್ಕಳು ಮೊದಲು ತಮ್ಮ ಆಸಕ್ತಿಗೆ ಅನುಗುಣವಾಗಿ ವಿಷಯ ಹಾಗೂ ಅಧ್ಯಯನದ ಕ್ಷೇತ್ರಗಳ ಆಯ್ಕೆಯನ್ನು ಮಾಡಬೇಕು. - ಬೇರೆಯವರ ಉತ್ತಮ ಸಲಹೆಯನ್ನು ಪಡೆಯಬೇಕು.
- ತಂದೆ ತಾಯಿಯರ ಮಾರ್ಗದರ್ಶನವನ್ನು ಪಡೆಯಬೇಕು.
- ಬೇರೆಯವರನ್ನು ಹೋಲಿಸಿಕೊಂಡು ಕಠಿಣ ತರಗತಿಗಳ ಅಧ್ಯಯನ ಆಯ್ಕೆ ಮಾಡಕೂಡದು.
- ತಮ್ಮ ನೆಚ್ಚಿನ ಗುರುಗಳ ಮಾರ್ಗದರ್ಶನ ಪಡೆದು ಮುಂದಿನ ವಿದ್ಯಾಭ್ಯಾಸ ಕೈಗೊಳ್ಳಬೇಕು.
- ನಿಮ್ಮ ಕುಟುಂಬದ ಉತ್ತಮ ಸಾಧನೆ ಮಾಡಿದ ವ್ಯಕ್ತಿಗಳನ್ನು ಸಂಪರ್ಕಿಸಿ ಶೈಕ್ಷಣಿಕ ಮಾರ್ಗದರ್ಶನ ಪಡೆಯಬೇಕು.
- ಕಠಿಣ ತರಗತಿಗಳನ್ನು ಆಯ್ಕೆ ಮಾಡುವ ಮೊದಲು ಹತ್ತು ಬಾರಿ ಯೋಚಿಸಿ ದಢ ನಿರ್ಧಾರ ಕೈಗೊಳ್ಳಬೇಕು.
- ಒಮ್ಮೆ ಗಟ್ಟಿ ನಿರ್ಧಾರ ಮಾಡಿ ಮುಂದಿನ ತರಗತಿಯನ್ನು ಸೇರಿದ ಮೇಲೆ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು.
*ಯಾವುದೇ (ಕೋರ್ಸ್) ತರಗತಿಗಳನ್ನು ಅರ್ಧಕ್ಕೆ ನಿಲ್ಲಿಸಿ, ಬೇರೆ ಕೋರ್ಸ್‌ಗಳಿಗೆ ಸೇರದೆ ಇದ್ದುದರಲ್ಲಿ ಮುಂದುವರೆದು ಸಾಧಿಸಬೇಕು. - ಜೀವನದಲ್ಲಿ ಒಂದು ನಿಶ್ಚಲ ಗುರಿಯನ್ನು ಹೊಂದಿ ಅದರ ಅಡಿಯಲ್ಲಿಯೇ ಸಾಗಬೇಕು.
- ಮೊದಲು ನಿಮ್ಮ ಆಸಕ್ತಿ ಹಾಗೂ ಬುದ್ಧಿಮತ್ತೆಗೆ ಅನುಸಾರವಾಗಿ ನೀವು ಮುಂದಿನ ಶೈಕ್ಷಣಿಕ ತರಗತಿಗಳ ಆಯ್ಕೆ ಮಾಡಿಕೊಳ್ಳಬೇಕು.
- ಯಾರ ಒತ್ತಡ ಹಾಗೂ ಅಪೇಕ್ಷೆಗಾಗಿ ನಿಮ್ಮ ಶೈಕ್ಷಣಿಕ ಕ್ಷೇತ್ರದ ಆಯ್ಕೆಯನ್ನು ಮಾಡಬೇಡಿ.
- ನಿಮ್ಮ ಜೀವನವು ಈ ಸಮಾಜಕ್ಕೆ ಒಂದು ಉತ್ತಮ ಕೊಡುಗೆ ಆಗುವಂತೆ ನಿರೂಪಿಸಿಕೊಳ್ಳಬೇಕು.
ಈ ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಮಕ್ಕಳು ಹಾಗೂ ಪಾಲಕರು ಉಚಿತ ಅಧ್ಯಯನದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಶ್ರಮವಹಿಸಿ ಅಧ್ಯಯನ ಕೈಗೊಂಡು ಉತ್ತಮ ಗುರಿಯನ್ನು ಹೊಂದಬೇಕು. ಅಲ್ಲದೆ ತಮ್ಮ eನವು ಸಮಾಜಕ್ಕೆ ಒಂದು ಉತ್ತಮ ಮಾನವ ಸಂಪನ್ಮೂಲ ಒದಗಿಸಿ ಸದಢ ಸಮಾಜ ಕಟ್ಟುವಲ್ಲಿ ಸಹಕಾರಿ ಆಗಬೇಕಾಗಿದೆ.
ಅಶ್ವಿನಿ ಅಂಗಡಿ, ಬದಾಮಿ.