ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಆಧ್ಯಾತ್ಮ – ಗುರುವಿನ ಮಾರ್ಗದರ್ಶನದಿಂದ ಮನಸ್ಸಿಗೆ ಶಾಂತಿ ಲಭ್ಯ

Share Below Link

ಭದ್ರಾವತಿ: ಮನುಷ್ಯ ಎಷ್ಟೇ ಐಶ್ವರ್ಯ, ಅಂತಸ್ತು, ಪ್ರಸಿಧ್ಧಿ, ಪ್ರಶಸ್ತಿ, ಸನ್ಮಾನಗಳು ಪಡೆದರೂ ಅತನಿಗೆ ಅಂತಿಮವಾಗಿ ಮನಸ್ಸಿಗೆ ಶಾಂತಿ ಸಿಗುವುದು ಆಧ್ಯಾತ್ಮ, ಗುರುವಿನ ಮಾರ್ಗದರ್ಶನದ ಸಾನಿಧ್ಯದಿಂದ ಮಾತ್ರ ಎಂದು ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಸುಂದರ್ ರಾಜ್ ತಿಳಿಸಿದರು.


ನಗರದ ಅಪೇಕ್ಷ ನೃತ್ಯ ಕಲಾ ವೃಂದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಪ್ರಾಯೋಜಕತ್ವದಲ್ಲಿ ಸಿzರೂಢ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಸಂಗೀತ, ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ನಿಮಿತ್ತ ತಮ್ಮ ವಿಷ್ಣುವರ್ಧನ್ ಅವರ ಭೇಟಿಯ ಸಂಧರ್ಭದಲ್ಲಿ ನಡೆದ ಮಾತುಕತೆಯ ಅಭಿಪ್ರಾಯವನ್ನು ಸಭಿಕರೊಂದಿಗೆ ಹಂಚಿಕೊಳ್ಳುತ್ತಾ, ಅವರು ಸುಮಾರು ೩೮ ವರ್ಷಗಳ ಕಾಲ ಚಲನಚಿತ್ರ ರಂಗದಲ್ಲಿ ಅಭಿನಯಿಸಿ ಹಲವಾರು ಪ್ರಶಸ್ತಿ ಗಳನ್ನು ಪಡೆದಿದ್ದರೂ ಅವರಿಗೆ ಮನಃಶಾಂತಿ ಎಂಬುದು ಇರಲಿಲ್ಲ ಎಂದು ಅವರ ಕೆಲ ಘಟನೆಗಳನ್ನು ಮೆಲುಕು ಹಾಕಿದರು.
ವಿಷ್ಣವರ್ಧನ್ ಸಿನಿಮಾ ರಂಗ ದಲ್ಲಿ ಎಷ್ಟೇ ಪ್ರಸಿದ್ಧಿ ಪಡೆದು ಜನ ನಾಯಕರಾಗಿದ್ದರೂ ಅವರು ತಮ್ಮ ಜೀವನದಲ್ಲಿ ಅಷ್ಟೇ ನೋವು, ಸಂಕಟ, ಅವಮಾನಗಳನ್ನು ಅನುಭವಿಸಿದ್ದರು. ಅವರ ತಂದೆಯವರು ಮೃತಪಟ್ಟಿದ್ದು ಅವರ ಶವಯಾತ್ರೆಯ ಸಮಯದಲ್ಲಿ ಕಲ್ಲು ತೂರಾಟಗಳನ್ನು ಮಾಡಿದ ಘಟನೆಯನ್ನು ಸ್ಮರಿಸಿ, ಆ ಘಟನೆಯ ನಂತರ ಅವರು ಬೆಂಗಳೂರು ಬಿಟ್ಟು ಮದ್ರಾಸ್ ಸೇರಿದ್ದರು, ನಂತರ ಕೆಲ ಸಮಯದ ನಂತರ ವಾಪಸ್ ಬೆಂಗಳೂರಿಗೆ ಆಗಮಿಸಿ ತಮ್ಮ ವೃತ್ತಿ ಜೀವನವನ್ನು ಮುಂದುವರೆಸಿದರು. ಅವರ ನೆನೆಪಿನಲ್ಲಿ ಅಪೇಕ್ಷ ಮಂಜು ನಾಥ್ ಇಂತಹ ಸಮಾಜ ಮುಖಿ ಕಾರ್ಯುಕ್ರಮಗಳನ್ನು ಮಾಡುತ್ತಿರು ವುದು ಸಂಗತಸ ಸಂಗತಿ ಎಂದರು.
ಡಾ.ವಿಷ್ಣುವರ್ಧನ್ ಪ್ರಶಸ್ತಿ ಸ್ವೀರಕಸಿ ಮಾತನಾಡಿದ ಚಲನಚಿತ್ರ ನಟ ಸುಂದರ್‌ರಾಜ್, ಜೀವನ ದಲ್ಲಿ ತಂದೆ, ತಾಯಿ,ಗುರುಗಳು, ನೆರೆಹೊರೆಯವರ ಆಶೀರ್ವಾದ ವೃತ್ತಿಯಲ್ಲಿ ಪ್ರಾಮಾ ಣಿಕತೆ ನಿಷ್ಠೆ ಸಮರ್ಪಣಾ ಮನೋ ಭಾವದಿಂದ ಕಾರ್ಯ ನಿರ್ವಹಿಸಿ ದಾಗ ಯಶಸ್ಸು, ಪ್ರಶಸ್ತಿ, ಸನ್ಮಾನ ಗಳಿಗೆ ಪಾತ್ರರಾಗುತ್ತೇವೆ ಎಂದರು.
ಮನುಷ್ಯ ಮನುಷ್ಯರಲ್ಲಿ ಪ್ರೀತಿ ವಿಶ್ವಾಸ ಹಂಚಿ ಸಹಬಾಳ್ವೆ ಮಾಡಿ ರಾಗ ದ್ವೇಷ ಕಿತ್ತೋಗೆದಾಗ ಸಮಾಜದ ಅಭಿವೃದ್ಧಿ ಆಗುತ್ತದೆ. ಧರ್ಮ ನಂಬಿ, ಜತಿ ನಂಬಬೇಡಿ ಮನುಷ್ಯತ್ವ ಮಾನವೀಯತೆಯ ಕಳಕಳಿಯನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ವಿಷ್ಣುಸೇನಾ ಸಮಿತಿ ಅಧ್ಯಕ್ಷ ರಾಜುಗೌಡ ಶ್ರೀಧರ್ ಮಾತನಾಡಿ ವಿಷ್ಣುವರ್ಧನ್ ನಿಧನರಾಗಿ ವರ್ಷಗಳು ಕಳೆದರೂ ಅವರ ಸ್ಮಾರಕ ನಿರ್ಮಾಣ ಆಗಿಲ್ಲ. ಅದರ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೆ ರೀತಿಯ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಅಭಿಮಾನ್ ಸ್ಟುಡಿಯೋದವರು ಅವರ ಸಮಾಧಿ ಸ್ಥಳಕ್ಕೆ ೧೦ ಗುಂಟೆ ಜಗವನ್ನು ನೀಡಿದ್ದರು. ಆದರೆ ನಂತರ ಅದರ ಬಗ್ಗೆ ವಾದ ವಿವಾದ ಉಂಟಾಗಿ ಈಗ ವ್ಯಾಜ್ಯ ಹೈಕೋರ್ಟ್‌ನಲ್ಲಿದೆ. ಇದರ ಬಗ್ಗೆ ಸೇನಾ ಸಮಿತಿ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುತ್ತಿದೆ. ರಾಜ್ ಕಲಾ ಭವನ ಇದೆ, ಅಂಬರೀಷ್ ಕಲಾ ಭವನ ಇದೆ. ಆದರೆ ವಿಷ್ಣುವರ್ಧನ್ ಹೆಸರಿನಲ್ಲಿ ಕಲಾ ಭವನ ಇಲ್ಲ. ಸ್ಮಾರಕನೂ ಇಲ್ಲ. ಆದ್ದರಿಂದ ಇನ್ನಾದರೂ ಇದರ ಬಗ್ಗೆ ಕಾರ್ಯ ಪ್ರವೃತರಾಗ ಬೇಕು. ಇದರ ಬಗ್ಗೆ ಸರ್ಕಾರದ ಜೊತೆ ವ್ಯವಹರಿಸಲಾಗುತ್ತಿದೆ ಎಂದರು.
ಕನ್ನಡ ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್, ಸಮಾಜ ಸೇವಕ ಪಿ.ವೆಂಕಟರಮಣ ಶೇಟ್, ಗಾಯಕ ಸುಬ್ರಮಣ್ಯ ಕೆ ಐಯ್ಯರ್, ಅರ್ಜುನ್, ರಾಧಾ ಗಂಗಾಧರ್, ಆನಂದ ರಾಜ್, ರಘು, ತುಳಸಿಕೃಷ್ಣ, ವಸಂತ ಆರ್ ಮಾಧವ, ಹರೀಶ್ ಗೌಡ, ಶರಾವತಿ, ಯದುನಂದನ್ ಗೌಡ, ಎಸ್. ಮಂಜುನಾಥ್‌ರವರುಗಳಿಗೆ ಅಪೇಕ್ಷ ರಾಜ್ಯ ಪ್ರಶಸ್ತಿ ನೀಡಿದರು.
ವೀರಕಪುತ್ರ ಶ್ರೀನಿವಾಸ್ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಭಾರತಿ ಗೋವಿಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಅಪೇಕ್ಷ ಮಂಜುನಾಥ್ ಪ್ರಸ್ತಾವಿಕ ಭಾಷಣ ಮಾಡಿದರು. ಮಣಿಶೇಖರ್, ಶ್ರೀಧರ್, ಎಂ.ಶ್ರೀನಿವಾಸ್, ಕೋಕಿಲ, ಬನಶಂಕರಿ, ರಾಧಾ, ವೈ.ಕೆ.ಹನುಮಂತಯ್ಯ, ಕವಿತಾ ರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಚನ್ನಪ್ಪ ಸ್ವಾಗತಿಸಿದರು. ಅರಳೆಹಳ್ಳಿ ಅಣ್ಣಪ್ಪ ಕಾಯಕ್ರಮ ನಿರೂಪಿಸಿದರು.