ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಗ್ರಾಮೀಣ ಭಾಗದ ಅದ್ಭುತ ಕಲಾವಿದ ಮುಂಡರಗಿ ಮಠದ ಶರಣಯ್ಯ

Share Below Link

ಗ್ರಾಮೀಣ ಭಾಗದ ಕಲಾವಿದರು ನಮ್ಮ ನಾಡಿನ ಆಸ್ತಿ. ನಮ್ಮ ಕನ್ನಡಿಗರನ್ನು ಕುರಿತು ಕುರಿತೋದದೆ ಕಾವ್ಯ ಪ್ರಯೋಗ ಮತಿಗಳ್ ಎಂದು ೯ನೇ ಶತಮಾನದ ಕವಿರಾಜ ಮಾರ್ಗಕಾರ ಶ್ರೀವಿಜಯ ಹೇಳಿzನೆ.
ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿನ ಗ್ರಾಮೀಣ ಭಾಗದ ಜನರು ಅಕ್ಷರವನ್ನು ಕಲಿಯದಿದ್ದರೂ ಕಲಾವಿದರಾಗಿ ದ್ದರು. ಪ್ರಸ್ತುತ ದಿನಗಳಲ್ಲಿ ತೆರೆಮರೆಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಯಿಸುವ ಕಾರ್ಯವಾಗಬೇಕಿದೆ.
ವಿಜಯನಗರ ಜಿಯ ಮಲ್ಲಿಗೆಗೆ ಹೆಸರಾದ ಹೂವಿನಹಡಗಲಿ ಕಲಾವಿದರ ನಾಡೆಂದೇ ಗುರುತಿಸಿಕೊಂಡಿದೆ. ಈ ಭಾಗದಲ್ಲಿ ಅದ್ಭುತ ಹಾಗೂ ನುರಿತ ಮತ್ತು ಪ್ರತಿಭಾವಂತ ಕಲಾವಿದರಿzರೆ. ಇನ್ನೂ ಗ್ರಾಮೀಣ ಭಾಗದಲ್ಲಿನ ಕಲಾವಿದರು ತೆರೆಯ ಮರೆಯಲ್ಲಿzರೆ.
ಹೂವಿನಹಡಗಲಿ ತಾಲೂಕಿನ ಮದಲಗಟ್ಟಿ ಪೌರಾಣಿಕ ಸುಕ್ಷೇತ್ರ ವಾಗಿದ್ದು, ಶ್ರೀ ಆಂಜನೇಯ ಸ್ವಾಮಿ ಈ ಕ್ಷೇತ್ರದ ಅಧಿಪತಿಯಾಗಿ zನೆ. ಇಲ್ಲಿನ ವೀರಶೈವ ಹೋಟಲಿನ ಮಾಲಿಕ ಮುಂಡರಗಿ ಮಠದ ಶರಣಯ್ಯ ಗ್ರಾಮೀಣ ಭಾಗದ ಅದ್ಭುತ ಕಲಾವಿದರು. ಇವರು ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದ ಮುಂಡರಗಿ ಮಠದ ಕೊಟ್ರಯ್ಯ ಮತ್ತು ಶಿವಮ್ಮನವರ ಹಿರಿಯ ಪುತ್ರರೇ ಈ ಶರಣಯ್ಯನವರು.
ಇವರ ತಂದೆ ಕೊಟ್ರಯ್ಯ ನವರು ೧೯೬೫ರ ತಮ್ಮ ಸ್ವಂತ ಊರಾದ ಬಿಸರಳ್ಳಿಯಲ್ಲಿ ಚಿಕ್ಕದಾದ ವೀರಶೈವ ಹೋಟೆಲ್ ತೆರೆದು ಹೋಟೆಲ್ ಉದ್ದಿಮೆ ಆರಂಭಿಸಿದ್ದರು. ಜೂನ್ ೧, ೧೯೮೧ರಲ್ಲಿ ಜನಿಸಿದ ಶರಣಯ್ಯನವರು ೧ರಿಂದ ೮ನೇ ತರಗತಿಯವರೆಗೆ ಸ್ವಗ್ರಾಮದಲ್ಲಿ ಅಭ್ಯಾಸ ಮಾಡಿದ್ದು, ತಮ್ಮ ತಂದೆಯವರ ಹೋಟೆಲಿನಲ್ಲಿ ಕೆಲಸದಲ್ಲಿ ಸಹಾಯ ಮಾಡುತ್ತಾ ಬೆಳೆದವರು.
ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ನಾಟಕದ ಪಾತ್ರ ಮಾಡುತ್ತಾ ಬಂದಿದ್ದು, ೫ನೇ ತರಗತಿ ಓದುವಾಗ ಜಂಭಕೊಚ್ಚಿದ ಉತ್ತರಕುಮಾರ ಎಂಬ ಏಕಾಂಕ ನಾಟಕದಲ್ಲಿ ಬೃಹನ್ನಳೆಯ ಪಾತ್ರ, ಪಶ್ಚಾತ್ತಾಪ ನಾಟಕದಲ್ಲಿ ಪ್ರಕಾಶ ಎಂಬ ಪಾತ್ರದ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ನೀಡಿzರೆ.
ವಿರಾಟಪರ್ವ ಬಯಲಾಟ ದಲ್ಲಿ ಶಶಿವರ್ಮ ಹಾಗೂ ಗೋಪಾಲ ಪಾತ್ರ ಮಾಡುವ ಮೂಲಕ ಕರ್ನಾಟಕ ಗಂಡುಕಲೆಯಾದ ಬಯಲಾಟದ ಕಲಾವಿದರಾದರು. ೧೯೯೩ರಲ್ಲಿ ದುರಂತನಾಯಕ ಎಂಬ ಸಾಮಾಜಿಕ ನಾಟಕದಲ್ಲಿ ಖಳನಾಯಕ ವಕೀಲ ಪಾತ್ರಧಾರಿಯಾಗಿ ರಂಗಭೂಮಿಗೊಂದು ಕಳೆಯನ್ನು ತಂದವರು.
ಸತ್ಯಕ್ಕೆ ಸಾವಿಲ್ಲ ಸೇಡಿಗೆ ಸೋಲಿಲ್ಲ ಎಂಬ ನಾಟಕದಲ್ಲಿ ವರದರಾಜ ಹೆಸರಿನ ಕಥಾನಾಯಕ ಪಾತ್ರದಲ್ಲಿಯೂ ಅಭಿನಿಯಿಸಿ ಹೆಸರು ಗಳಿಸಿzರೆ. ಪ್ರಾಥಮಿಕ ಅಧ್ಯಯನದ ಸಂದರ್ಭದಲ್ಲಿ ಹಾಡಿ, ಭಾಷಣ ಮಾಡುವ ಹವ್ಯಾಸ ಬೆಳೆಸಿಕೊಂಡವರು. ಟಿಕ್ ಟಾಕ್ ಮಾಡುವುದರ ಜೊತೆಗೆ ಬರಗಾಲ ಎಂಬ ಕಿರುಚಿತ್ರದಲ್ಲಿ ಗೌಡರ ಪಾತ್ರದಲ್ಲಿ ಅಭಿನಯಿಸಿzರೆ.
ತಮ್ಮ ಆರ್ಥಿಕ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕ ಶರಣಯ್ಯನವರು ತಮ್ಮ ತಂದೆಯವರು ಆರಂಭಿಸಿದ ವೀರಶೈವ ಹೋಟೆಲನ್ನು ಮದಲಗಟ್ಟಿಯಲ್ಲಿ ಮುಂದುವರೆಸಿದರು. ಈ ಹೋಟೆಲ್ ಉದ್ದಿಮೆಯೊಡನೆ ತಾವು ಕರಗತ ಮಾಡಿಕೊಂಡಿರುವ ಕಲೆಯನ್ನು ಬಿಟ್ಟುಕೊಡದೆ ಆಗಾಗ ಕಲಾ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರು. ಹೋಟೇಲಿಗೆ ಬಂದ ಗ್ರಾಹಕರನ್ನು ನಗುತ್ತಾ ಸ್ವಾಗತಿಸಿ, ಹಾಡಿನ ಮೂಲಕ ರಸದೌತಣ ನೀಡುತ್ತಾ ಬಂದಿzರೆ.
ನಂದಿಪುರ ಪುಣ್ಯಕ್ಷೇತ್ರದ ಶ್ರೀಗುರು ದೊಡ್ಡಬಸವೇಶ್ವರ ಜತ್ರೆ, ಸೋಗಿ ಪುರವರ್ಗ ಕಟ್ಟೀಮನಿ ಮಠದ ಪುರದ ಶ್ರೀ ಸಿದ್ದವೀರೇಶ್ವರ ಜತ್ರಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಕಲಾಸೇವೆಯನ್ನು ಸಲ್ಲಿಸಿzರೆ. ಜನಪದ ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ಇವರೊಂದಿಗೆ ಲಕ್ಕುಂಡಿ ಉತ್ಸವದಲ್ಲಿ ಭಾಗವಹಿಸಿ ಕಲಾಪ್ರದರ್ಶನ ನೀಡಿzರೆ. ಭಜನಾ ಸೇವೆಯ ಮೂಲಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಿzರೆ.
ಕಳೆದ ೨೭ವರ್ಷಗಳಿಂದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಪಾದಯಾತ್ರೆ, ಕೊರೋನಾ ಸಂದರ್ಭದಲ್ಲಿ ಸರ್ವರ ಆರೋಗ್ಯಕ್ಕಾಗಿ ಮದಲಗಟ್ಟಿ ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ೧೦೧ ಪ್ರದಕ್ಷಿಣೆ ಸೇವೆ ಸಲ್ಲಿಸಿದವರು.
ಗ್ರಾಮೀಣ ಭಾಗದ ಕಲಾವಿದ ಎಂ.ಎಂ.ಶರಣಯ್ಯನವರ ಕಲೆಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಯೂಟ್ಯೂಬ್ ಚಾನೆಲ್, ವಿವಿಧ ಸಂಘ- ಸಂಸ್ಥೆಗಳು ನೀಡಿರುವ ಪ್ರಶಸ್ತಿಗಳೆಂದರೆ, ೨೦೨೧ರಲ್ಲಿ ವಿಸ್ಮಯ ಸಂಗೀತ ಚೇತನ ರಾಜ್ಯಮಟ್ಟದ ಪ್ರಶಸ್ತಿ, ಕನ್ನಡದ ಮಾಣಿಕ್ಯ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ ೨೦೨೨ರಲ್ಲಿ ಕರ್ನಾಟಕ ಕಲಾ ರತ್ನ ರಾಜ್ಯ ಪ್ರಶಸ್ತಿ, ಅಪ್ಪು ಸಮಾಜ ಸೇವಾ ರತ್ನ ಪ್ರಶಸ್ತಿ, ಸೇವಾ ರತ್ನ ಪ್ರಶಸ್ತಿ, ೨೦೨೩ರಲ್ಲಿ ಕಲಾ ರತ್ನ ಪ್ರಶಸ್ತಿ, ಲಕುಂಡಿ ಉತ್ಸವ ಪ್ರಶಸ್ತಿ, ಕಾಯಕಯೋಗಿ ಕಲಾ ರತ್ನ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿzರೆ.
ಸುಕ್ಷೇತ್ರ ಮದಲಗಟ್ಟಿ ಆಂಜನೇಯಸ್ವಾಮಿಯ ಕೃಪೆ ಹಾಗೂ ಹರ-ಗುರು-ಚರ ಮೂರ್ತಿಗಳ ಆಶೀರ್ವಾದದಿಂದ ಹಾಗೂ ಗೆಳೆಯರ ಬಳಗದ ಸಹಕಾರದಿಂದ ಈ ವರ್ಷ ಶ್ರೀ ಅನ್ನಪೂರ್ಣೇಶ್ವರಿ ಸಂಗೀತ ಬಳಗವನ್ನು ಪ್ರಾರಂಭಿಸಿ ಕನ್ನಡಾಂಬೆಯ ಸೇವೆಗೆ ನಿಂತಿzರೆ. ಇವರ ಕಲೆ ನಾಡಿನಾದ್ಯಂತ ಪ್ರಸರಿಸಲಿ, ಅಜರಾಮರವಾಗಲಿ ಎಂದು ಶುಭ ಹಾರೈಸುತ್ತೇನೆ.

ಹೆಚ್.ಎಂ. ಗುರುಬಸವರಾಜಯ್ಯ,ನಂದಿಪುರ.