ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಪುರುಷರಿಗೆ ಸಮಾನವಾಗಿ ಸಾಧನೆ ಮಾಡಿರುವ ಮಹಿಳೆ ಸಬಲರಾಗಿದ್ದಾರೆ..

Share Below Link

ಶಿಕಾರಿಪುರ: ಮಹಿಳೆಯರು ಇಂದು ಅಬಲೆಯರಲ್ಲ ಸಬಲರು, ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾದ ಸಾಧನೆಯ ಮೂಲಕ ಸಾಮರ್ಥ್ಯವನ್ನು ಸಾಬೀತುಪಡಿಸಿzರೆ. ಹಿಂಜರಿಕೆ ಬಿಟ್ಟು ಪ್ರತಿಭೆಯ ಅನಾವರಣಕ್ಕೆ ವೇದಿಕೆ ಬಳಸಿಕೊಳ್ಳಬೇಕು. ಈ ದಿಸೆಯಲ್ಲಿ ಸಂಘ ಎಲ್ಲ ರೀತಿ ಪ್ರೋತ್ಸಾಹ ನೀಡಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಮಹಿಳಾ ಘಟಕದ ಜಿ ಸಂಚಾಲಕಿ ಸುನೀತಾ ಶ್ರೀಧರ್ ಅವರು ತಿಳಿಸಿದರು.
ಪಟ್ಟಣದ ಶ್ರೀ ದತ್ತ ಕೇವಲಾನಂದಾಶ್ರಮದ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗ ತಾಲೂಕು ಘಟಕದಿಂದ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಬಾಲ್ಯದಿಂದ ಮುಪ್ಪಿನವರೆಗೆ ಪುರುಷರ ಬದುಕಿನಲ್ಲಿ ತಾಯಿಯಾಗಿ, ಮಗಳಾಗಿ, ಮಡದಿಯಾಗಿ, ಅಕ್ಕ ತಂಗಿಯಾಗಿ ಬಹು ಮಹತ್ವದ ಪಾತ್ರವನ್ನು ವಹಿಸುತ್ತಿದ್ದು ಕುಟುಂಬ ನಿರ್ವಹಣೆ ಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಮಹಿಳೆಗೆ ಮಾತ್ರ ಸೂಕ್ತ ಸ್ಥಾನಮಾನ ಪುರುಷ ಪ್ರಧಾನ ಸಮಾಜದಲ್ಲಿ ದೊರೆಯುತ್ತಿಲ್ಲ ಎಂದು ವಿಷಾಧಿಸಿದ ಅವರು, ಮಹಿಳೆ ಹೊರತಾದ ಕುಟುಂಬ ವನ್ನು ಊಹಿಸಲು ಸಾದ್ಯವಿಲ್ಲ ಎಂದು ತಿಳಿಸಿದರು.


ಅನಾದಿ ಕಾಲದಿಂದ ಮಹಿಳೆ ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದು ಕಾಲಕಾಲಕ್ಕೆ ತನ್ನ ಜವಾಬ್ದಾರಿ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಕುಟುಂಬದ ಸದಸ್ಯರಲ್ಲಿ ಸಂಸ್ಕಾರ, ಸಂಸ್ಕೃತಿ, ಪರಂಪರೆಯನ್ನು ಜಗೃತಿಗೊಳಿಸಿzಳೆ ಎಂದರ ಲ್ಲದೇ, ವಿಪ್ರ ಸಮುದಾಯದಲ್ಲಿನ ಬಹುತೇಕ ಹಬ್ಬ ಹರಿದಿನಗಳ ಆಚರಣೆ ಮೂಲಕ ಸಂಪ್ರದಾಯವನ್ನು ಕಾಪಾಡುವಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ. ವಿಪ್ರರು ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ನಶಿಸದಂತೆ ಕಾಪಾಡುವ ಜವಾಬ್ದಾರಿಯನ್ನು ಹೊಂದಿದ್ದು ಈ ದಿಸೆಯಲ್ಲಿ ವಿಪ್ರ ಮಹಿಳೆಯರು ಧರ್ಮ ಸಂಸ್ಕತಿಗೆ ಅಪಚಾರವಾಗದ ರೀತಿಯಲ್ಲಿ ಪೀಳಿಗೆಯನ್ನು ಸಿದ್ದಗೊಳಿಸುವಂತೆ ಕರೆ ನೀಡಿದರು.
ತಾಲೂಕು ಬ್ರಾಹ್ಮಣ ಮಹಾ ಸಭಾ ಉಪಾಧ್ಯಕ್ಷೆ ರೂಪ ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ಹಲವು ಮಹಿಳಾ ಪ್ರತಿಭೆಯರಿದ್ದು ಸೂಕ್ತ ವೇದಿಕೆ ಕೊರತೆಯನ್ನು ಅನುಭವಿಸುತ್ತಿದ್ದರು ಇದೀಗ ಮಹಿಳಾ ಘಟಕ ಎಲ್ಲರನ್ನು ಒಗ್ಗೂಡಿಸಿ ಸಂಘಟನೆ ಸದೃಢ ಗೊಳಿಸುವ ಜತೆಗೆ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಿರುವುದು ಹೆಮ್ಮೆ ಸಂಗತಿ ಎಂದ ಅವರು, ಕ್ರಿಯಾಶೀಲ ಸಂಘದ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಗೌರವಾಧ್ಯಕ್ಷೆ ಅಪರ್ಣಾ ಗುರುಮೂರ್ತಿ ಮಾತನಾಡಿ, ಮಹಿಳೆಯರ ಸಂಘಟನೆ ಮೂಲಕ ಸುಪ್ತ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶ ಸಂಘ ಹೊಂದಿದ್ದು ಮಹಿಳೆಯರು ಹಿಂಜರಿಕೆ ತೊರೆದು ಸಂಘದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ವೈಯುಕ್ತಿಕವಾಗಿ ಅಭಿವದ್ದಿ ಹೊಂದುವಂತೆ ತಿಳಿಸಿ ಕುಟುಂಬಸ್ಥರ ಹುಟ್ಟುಹಬ್ಬ,ವಿವಾಹ ವಾರ್ಷಿಕೋತ್ಸವ ಮತ್ತಿತರ ವಿಶೇಷ ಸಂದರ್ಬದಲ್ಲಿ ಸಂಘದ ಸಹಕಾರ ಪಡೆದುಕೊಳ್ಳುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶುಭ ರಘು ಮಾತನಾಡಿ, ಸಂಘದ ಆರಂಭಕ್ಕೆ ಎಲ್ಲರ ಪ್ರೋತ್ಸಾಹ ಕಾರಣವಾಗಿದ್ದು ಇದೀಗ ಸದಸ್ಯರ ಕ್ರಿಯಾಶೀಲತೆ ಉತ್ತಮ ಕಾರ್ಯಕ್ಕೆ ಪ್ರೇರಣೆ ನೀಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್ಸಿ ಹಾಗೂ ಎಂಎಸ್ಸಿಯಲ್ಲಿ ಕ್ರಮವಾಗಿ ೬ ಮತ್ತು ೫ ಚಿನ್ನದ ಪದಕಗಳಿಸಿದ ಕು.ಅನ್ವಿತಾ ಜೋಷಿ ಅವರನ್ನು ಸನ್ಮಾನಿಸಲಾಯಿತು.
ಎಲ್ಲ ವಯೋಮಾನದ ಮಹಿಳೆಯರಿಗೆ ಆಟೋಟ ಸ್ಪರ್ದೆ ಆಯೋಜಿಸಲಾಗಿದ್ದು ತೇಜಸ್ವಿನಿ ರಾಘವೇಂದ್ರ ಬಹುಮಾನ ವಿತರಿಸಿದರು. ಫ್ಯಾಷನ್ ಷೋ, ಸಾಂಸ್ಕೃತಿಕ ಕಾರ್ಯಕ್ರಮ ಮಹಿಳಾ ದಿನಾಚರಣೆಯ ಮೆರಗು ಹೆಚ್ಚಿಸಿತು.
ವೇದಿಕೆಯಲ್ಲಿ ಉಮಾ,ಸುಮ ಜೋಯ್ಸ್, ಸುಷ್ಮಾ ದೀಕ್ಷಿತ್, ಜಯಲಕ್ಷ್ಮಿ, ಪಲ್ಲವಿ, ಶ್ರೀದೇವಿ, ದಿವ್ಯ, ವರ್ಷಾ, ಬಿಂದು, ಲಲಿತ, ವಿಜಯಲಕ್ಷ್ಮಿ ನಾಡಿಗ್ ಮತ್ತಿತರರು ಉಪಸ್ಥಿತರಿದ್ದರು. ಸುನಿತಾ ಜೋಯ್ಸ್ ಸ್ವಾಗತಿಸಿ,ಗೌರಿಭಟ್ ನಿರೂಪಿಸಿ ಸುಕನ್ಯಾ ವಂದಿಸಿದರು.