ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅಮೆರಿಕದಲ್ಲಿ ಇಷ್ಟಲಿಂಗ ಪೂಜೆ ವೈeನಿಕ ಅಧ್ಯಯನ: ಜತ್ತಿ

Share Below Link

ಶಿವಮೊಗ್ಗ : ಅಮೆರಿಕಾ ವಿeನಿಗಳ ತಂಡ ಇಷ್ಟಲಿಂಗ ಪೂಜೆ ಕುರಿತು ವೈeನಿಕ ಅಧ್ಯಯನ ನಡೆಸುತ್ತಿದೆ. ಕೆಲವೇ ತಿಂಗಳುಗಳಲ್ಲಿ ಜಗತ್ತೇ ಇತ್ತ ನೋಡುವಂತ ಫಲಿತಾಂಶ ದೊರಕುವ ನಿರೀಕ್ಷೆ ಇದೆ ಎಂದು ರಾಷ್ಟ್ರೀಯ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ಚಿಂತನ ಕಾರ್ತಿಕ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣ- ಬಸವತತ್ವ ವಿಶ್ವವ್ಯಾಪಿ ಆಗಬೇಕಿದೆ. ಈ ನಿಟ್ಟಿನಲ್ಲಿ ವಚನ ಗಳನ್ನು ೬೦ ಭಾಷೆಗಳಿಗೆ ಅನುವಾದಿಸುವ ಕೆಲಸ ರಾಷ್ಟ್ರೀಯ ಬಸವ ಸಮಿತಿಯಿಂದ ನಡೆದಿದೆ ಎಂದದರು.
ಸುಮಾರು ೮೦೦ ವರ್ಷವಾದರೂ ಬಸವಣ್ಣ ಇನ್ನೂ ಕರ್ನಾಟಕ ಬಿಟ್ಟು ಹೊರಗೆ ಹೋಗಿಲ್ಲ. ಈ ನಿಟ್ಟಿನಲ್ಲಿ ವಚನ ಗಳನ್ನು ೬೦ ಭಾಷೆಗಳಿಗೆ ಅನುವಾದಿಸುವ ಕೆಲಸ ರಾಷ್ಟ್ರೀಯ ಬಸವ ಸಮಿತಿಯಿಂದ ನಡೆದಿದೆ ಎಂದು ವಿವರಿಸಿದರು.


ಬಸವಣ್ಣನವರ ಸಮಾಜದಲ್ಲಿ ಹುಟ್ಟಿzವೆ ಎಂಬ ಕಾರಣಕ್ಕೆ ಅವರ ಬಗ್ಗೆ ತಿಳಿಯಬೇಕು ಎಂದೇನಿಲ್ಲ. ನಾವು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರಲ್ಲದೇ, ಬಸವಪ್ರe, ವಚನಪ್ರe, ಲಿಂಗಪ್ರe ಮೂರೂ ಸಮುಚ್ಛಯ ಗೊಂಡಾಗ ಮಾತ್ರ ಬಸವತತ್ವದ ಅರಿವು ನಮಗಾಗುತ್ತದೆ. ಲಿಂಗ ಎಂಬುದು ಜತಿಯತೆಯ ಸಂಕೇತವಲ್ಲ ಎಂದರು.
ಚಿಕ್ಕಮಗಳೂರು ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವ ಕೇಂದ್ರದ ಪೂಜ್ಯಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಹಿರಿಯ ಸಾಹಿತಿ ಜಯರಾಜ ಶೇಖರ್, ವಿದ್ಯುತ್ ನೌಕೃ ಸಂಘದ ಚಂದ್ರಕಲಾ ಅತಿಥಿಯಾಗಿ ಪಾಲ್ಗೊಂಡಿದ್ದರು. ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು.
ಶಿವಮೊಗ್ಗ ರಂಗಾಯಣ ನಿರ್ದೇಶಕ ಪ್ರಸನ್ನ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಂದ್ರಹಾಸ ಹಿರೇಮಳಲಿ, ಪ್ರಸನ್ನ, ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎನ್. ಮಂಜುನಾಥ್, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ಜಿ.ವಿ. ಹರಿಪ್ರಸಾದ್ ಅವರುಗಳನ್ನು ಅಭಿನಂದಿಸಲಾಯಿತು. ನ್ಯಾಮತಿ ಚನ್ನಬಸಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು.