ಇತರೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಚಿಂತನ ಮಂಥನ-ರಚನಾತ್ಮಕ ಶಿಕ್ಷಣಕ್ಕಾಗಿ’ ಶಿಕ್ಷಕರ ವಿಶೇಷ ಕಾರ್ಯಾಗಾರ…

Share Below Link

ಶಿವಮೊಗ್ಗ: ಕಲ್ಲಗಂಗೂರು ಗ್ರಾಮದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ೧೭ನೆಯ ವಾರ್ಷಿಕೋತ್ಸವದ ಅಂಗವಾಗಿ ಜೂ.೨೪ರ ನಾಳೆ ಆಶ್ರಮದ ಭಾವೈಕ್ಯ ಮಂದಿರದಲ್ಲಿಚಿಂತನ ಮಂಥನ-ರಚನಾತ್ಮಕ ಶಿಕ್ಷಣಕ್ಕಾಗಿ’ ಶಿಕ್ಷಕರ ವಿಶೇಷ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಪ್ರಮುಖರಾದ ಕೆ.ವಿ. ವಸಂತಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರು ಶಿಕ್ಷಕರ ಬಗ್ಗೆ ಅಪಾರ ಕಳಜಿ ಉಳ್ಳವರಾ ಗಿದ್ದರು. ಶಿಕ್ಷಕರಿಂದಲೇ ಮಾದರಿ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ನಂಬಿದ್ದವರು. ಹೀಗಾಗಿ ಈ ವಿಶೇಷ ಕಾರ್ಯಾಗಾರಕ್ಕೆ ಶಿಕ್ಷಕ ರನ್ನು ನಿಯೋಜಿಸುವ ಮೂಲಕ ಶಾಲಾ ಶಿಕ್ಷಣ ಇಲಾಖೆ ಸಹ ಕೈಗೂಡಿಸಿದೆ. ಕಾರ್ಯಾಗಾರದಲ್ಲಿ ಒಟ್ಟು ೪ ಗೋಷ್ಠಿಗಳು ನಡೆಯಲಿವೆ ಎಂದರು.


ಬೆಳಿಗ್ಗೆ ೧೦.೩೦ರಿಂದ ಸಂಜೆ ೪ ಗಂಟೆಯವರೆಗೆ ನಡೆಯುವ ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವನ್ನು ಆಶ್ರಮದ ಶ್ರೀ ವಿನಯಾ ನಂದ ಸರಸ್ವತಿ ಸ್ವಾಮೀಜಿ ವಹಿಸ ಲಿದ್ದು, ಮುಖ್ಯ ಅತಿಥಿಗಳಾಗಿ ಜಿಪಂ,ಉಪ ಕಾರ್‍ಯದರ್ಶಿ ಮಲ್ಲಿಕಾ ರ್ಜುನ ಕೆ.ತೊದಲಬಾಗಿಯವರು ಆಗಮಿಸಲಿzರೆ ಎಂದರು.
ಮೊದಲನೇ ಗೋಷ್ಠಿಯಲ್ಲಿ ಶೈಕ್ಷಣಿಕ ಬದ್ಧತೆ- ಪ್ರಸ್ತುತತೆ' ವಿಷಯದ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರೂ, ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನ ಶೈಕ್ಷಣಿಕ ಸಂಯೋಜ ಕರಾದ ಡಾ. ಮಹಾಬಲೇಶ್ವರ ರಾವ್ ಅವರು ಮಾರ್ಗದರ್ಶನ ಮಾಡಲಿದ್ದು, ಎರಡನೇ ಗೋಷ್ಠಿ ಯಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಮೋಹನ್ ಹೆಚ್.ಎಸ್. ಅವರುವಿವೇಕ ವಾಣಿ ಮತ್ತು ಶೈಕ್ಷಣಿಕ ಚಿಂತನೆ ಗಳು’ ಕುರಿತು ಮಾತನಾಡಲಿzರೆ ಎಂದರು.
ಮೂರನೇ ಗೋಷ್ಠಿಯಲ್ಲಿ ಜಿ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಡಾ.ಹರಿಪ್ರಸಾದ್ ಅವರು ಶಿಕ್ಷಕರು ಮತ್ತು ಶಿಕ್ಷಣ ನೀತಿಗಳು-ವಿಚಾರವಾಗಿ ಮತ್ತು ನಾಲ್ಕನೇ ಗೋಷ್ಟಿಯಲ್ಲಿ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಚಾರ್ಯ ಸಂಧ್ಯಾ ಕಾವೇರಿ ಯವರುಮಕ್ಕಳ ಮಾನಸಿಕ ಒತ್ತಡ ನಿರ್ವಹಣೆಯಲ್ಲಿ ಶಿಕ್ಷಕರ ಪಾತ್ರ’ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಲಿzರೆ ಎಂದರು.
ಆಶ್ರಮದ ಇನ್ನೋರ್ವ ಪ್ರಮುಖರಾದ ಎಂ.ಎನ್. ಸುಂದರ್‌ರಾಜ್ ಮಾತನಾಡಿ, ಆಶ್ರಮವು ಕಳೆದ ಹದಿನಾರು ವರ್ಷಗಳಿಂದ ಹಲವಾರು ಕಾರ್‍ಯಕ್ರಮಗಳನ್ನು ಹಮ್ಮಿಕೊಂಡು ಯುವಜನರಿಗೆ, ವಿದ್ಯಾರ್ಥಿಗಳಿಗೆ ವಿವೇಕಾನಂದರ, ರಾಮಕೃಷ್ಣ ಪರಮಹಂಸರ ಮತ್ತು ಮಾತೆ ಶಾರದಾದೇವಿಯವರ ವಿಚಾರ ಗಳನ್ನು ಎಲ್ಲರ ಮನಗಳಿಗೆ ಮುಟ್ಟಿ ಸುವ ಕೈಂಕರ್ಯದಲ್ಲಿ ನಿರತವಾ ಗಿದೆ. ಆಶ್ರಮದ ಆವರಣದಲ್ಲಿ ಸುಸಜ್ಜಿತವಾದ ಭಾವೈಕ್ಯ ಸಭಾಂಗಣವನ್ನು ನಿರ್ಮಿಸಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಯ ಸುಮಾರು ೩೦೦ಕ್ಕೂ ಶಿಕ್ಷಕರು ಭಾಗವಹಿಸುವ ನಿರೀಕ್ಷೆ ಇದ್ದು, ಭಾಗವಹಿಸುವ ಶಿಕ್ಷಕರಿಗೆ ಒಒಡಿ ಸೌಲಭ್ಯವಿದೆ. ಭಾಗವಹಿಸುವ ಶಿಕ್ಷಕರಿಗೆ ವಿನೋಬನಗರದ ಪೊಲೀಸ್ ಚೌಕಿಯಿಂದ ಆಶ್ರಮಕ್ಕೆ ಬೆಳಿಗ್ಗೆ ೮.೩೦ರಿಂದ ೯.೧೫ರವರೆಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಎಲ್ಲರಿಗೂ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಭೋಜನ ವ್ಯವಸ್ಥೆ ಇರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಶ್ರ ಮದ ಗೌರವಾಧ್ಯಕ್ಷ ಡಾ.ಚಿಕ್ಕ ಸ್ವಾಮಿ, ಶ್ರೀಕಾಂತ್, ಬಿ.ವಿ.ವಿಶ್ವ ರಾಜಚಾರ್, ನಾಗೇಂದ್ರರಾವ್ ಉಪಸ್ಥಿತರಿದ್ದರು.