ಇತರೆಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಜೈನ ಮುನಿಗಳ ಹಂತಕರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ದಿಗಂಬರ ಜೈನ್ ಸಮಾಜದಿಂದ ಮೌನ ಪ್ರತಿಭಟನೆ

Share Below Link

ಹೊನ್ನಾಳಿಃ ಬೆಳಗಾವಿ ಜಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜ್ ಅವರನ್ನು ದುಷ್ಕರ್ಮಿಗಳು ಅಮಾನುಷವಾಗಿ ಹತ್ಯೆ ಮಾಡಿದ್ದು ಹಂತಕರಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ತಾಲೂಕು ದಿಗಂಬರ ಜೈನ್ ಸಮಾಜದ ವತಿಯಿಂದ ಪಟ್ಟಣದ ಟಿ.ಬಿ.ವೃತ್ತದಿಂದ ಮೌನ ಮೆರವಣಿಗೆ ನಡೆಸಿ ನಂತರ ತಾಲೂಕು ಕಚೇರಿಗೆ ಆಗಮಿಸಿ ಉಪ-ತಹಶೀಲ್ದಾರ್ ಸುರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹನುಮಸಾಗರ ಗ್ರಾಪಂ ಮಾಜಿ ಸದಸ್ಯ ಶ್ರೇಯಾಂಶ್ ಕುಮಾರ್ ಗೌಡ್ರು ಮಾತನಾಡಿ, ಜೈನ ಧರ್ಮ ಆಹಿಂಸಾ ವಾದವನ್ನು ಪ್ರಬಲವಾಗಿ ಆಚರಿಸುವ ಒಂದು ಅಲ್ಪಸಂಖ್ಯಾತ ಸಮಾಜವಾಗಿದ್ದು ಇಂತಹ ಸಮಾಜದ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರು ವುದು ಅತ್ಯಂತ ಖಂಡನೀಯ ಹಾಗೂ ಅಮಾನುಷ ಕೃತ್ಯವಾಗಿದ್ದು, ಇಂತಹ ಹೇಯ ಕೃತ್ಯವನ್ನು ಎಸಗಿದವರ ವಿರುದ್ಧ ಸರ್ಕಾರ ಅತ್ಯಂತ ಕಠಿಣ ಕ್ರಮ ಜರುಗಿಸ ಬೇಕು ಹಾಗೂ ಎ ಜೈನ ಮುನಿ ಗಳಿಗೆ ಹಾಗೂ ಸಾಧುಸಂತರಿಗೆ ಸೂಕ್ತ ಭದ್ರತೆಯನ್ನು ಒದಗಿಸ ಬೇಕೆಂದು ಅವರು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಸಿ.ಬಾಹುಬಲಿ, ವೀರೇಂದ್ರ, ಅಭಿನಂದನ್, ಬಿ. ಮಹಾವೀರ್, ವಕೀಲರಾದ ಪ್ರಮೋದ್, ವರ್ಧಮಾನ್, ಷಣ್ಮುಖಪ್ಪ, ಜಿನದತ್ತ, ಯಶೋಧರ, ಪ್ರಭಾಕರ, ಶ್ರೀಪಾಲ್ ಕುಮಾರ್, ಪದ್ಮರಾಜಯ್ಯ, ಧನಂಜಯ, ಸುಭಾಷ್, ವಿ.ಶಾಂತರಾಜ್, ಗೀತಾ ಬಾಹುಬಲಿ, ಪ್ರಶಾಂತ್ ಕುಮಾರ್, ನಾಗವೇಣಿ, ಲಕ್ಷ್ಮಿಬಾಬು, ಪ್ರಜ್ವಲ್, ಪವನ್, ಸೀಮಾ, ನಿಮಿತಾ, ಸಿ.ಪಿ.ಜಯಪ್ಪ, ನವೀನ್ ಕುಮಾರ್, ಮಂಜುನಾಥ್, ವೀರೇಂದ್ರ, ಜಿನದತ್ತ, ರೈತ ಸಂಘದ ಅಧ್ಯಕ್ಷ ಕಡದಕಟ್ಟೆ ಜಗದೀಶ್, ಡಿ.ಎಸ್.ಎಸ್. ಮುಖಂಡರಾದ ದಿಡಗೂರು ತಮ್ಮಣ್ಣ, ಕೊನಾಯ್ಕನಹಳ್ಳಿ ಮಂಜುನಾಥ್ ಸೇರಿದಂತೆ ಹಲವಾರು ಬಳ್ಳೆಶ್ವರ, ಚಿಕ್ಕಗೋಣಿಗೆರೆ, ಹೊಳೆಹರಳಹಳ್ಳಿ, ಹಿರೇಗೋಣಿಗೆರೆ, ಕೊನಾಯ್ಕನಹಳ್ಳಿ ಗ್ರಾಮಗಳ ಜನ ಜೈನ ಸಮಾಜ ಬಾಂಧವರು ಪಾಲ್ಗೊಂಡಿದ್ದರು.