ಜಿಲ್ಲಾ ಸುದ್ದಿತಾಜಾ ಸುದ್ದಿ

ಪಾಳು ಬಿದ್ದ ಹೊಸನಗರ ಬಸ್ ನಿಲ್ದಾಣದ ಅಸ್ತಿತ್ವ ಉಳಿಸಿಕೊಳ್ಳುವಂತೆ ಮನವಿ

Share Below Link

ಹೊಸನಗರ: ಪಟ್ಟಣದ ಮೂಲ ಸ್ಥಾನದಲ್ಲಿರುವ ಬಸ್ ನಿಲ್ದಾಣದ ೮ ಅಂಗಡಿಗಳನ್ನು ತಕ್ಷಣ ಪಟ್ಟಣ ಪಂಚಾಯತಿಯವರು ಟೆಂಡರ್ ಪ್ರಕ್ರಿಯೆ ಮುಗಿಸಬೇಕು ಹಾಗೂ ಬಸ್ ನಿಲ್ದಾಣದ ಹೋಟೆಲ್ ಬಾಗಿಲು ಮುಚ್ಚಿದ್ದು ತಕ್ಷಣ ಹರಾಜು ಮಾಡಿ ಹೋಟೆಲ್ ತೆರೆಯಬೇಕು ಎಂದು ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೇಟ್ ಹೇಳಿದರು.


ಹೊಸನಗರ ತಾಲ್ಲೂಕು ವರ್ತಕರ ಸಂಘದ ವತಿಯಿಂದ ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್‌ರವರ ನೇತೃತ್ವದಲ್ಲಿ ಹೊಸನಗರದ ಪ್ರಮುಖ ಬೀದಿ ಯಲ್ಲಿ ಪ್ರತಿಭಟನಾ ಮೆರೆವಣಿಗೆ ನಡೆಸಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ನವರಿಗೆ ಹಾಗೂ ಪ್ರಭಾರ ತಹಶೀಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಹೊಸನಗರದ ಸರ್ಕಾರಿ ಅಧಿಕಾರಿಗಳು ಸಾಗರ-ಶಿವಮೊಗ್ಗದಿಂದ ಓಡಾಟ ನಡೆಸುತ್ತಿದ್ದು ಅವರು ಹೊಸನಗರದಲ್ಲಿಯೇ ವಾಸಿಸುವುದ ರಿಂದ ವರ್ತಕರಿಗೆ ಅನುಕೂಲಕರ ವಾಗುತ್ತದೆ ಯಾವುದೇ ಪಟ್ಟಣ ಬೆಳೆಯಬೇಕೆಂದರೇ ಜನಸಂಖ್ಯೆಯ ಆಧಾರದಲ್ಲಿ ಬೆಳೆಯುತ್ತದೆ. ನಮ್ಮಲ್ಲಿ ಸರ್ಕಾರಿ ಕಛೇರಿಯ ಅಧಿಕಾರಿಗಳು ಸಾಗರ-ತೀರ್ಥಹಳ್ಳಿ-ಶಿವಮೊಗ್ಗದಲ್ಲಿ ಮನೆಮಾಡಿಕೊಂಡು ಓಡಾಟ ನಡೆಸುತ್ತಿzರೆ ಇದರಿಂದ ವರ್ತಕರಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತಿದೆ. ಹೊಸನಗರದಲ್ಲಿ ರುವ ಸರ್ಕಾರಿ ಕಛೇರಿಯ ಅಧಿಕಾರಿಗಳು ಹೊಸನಗರದಲ್ಲಿಯೇ ವಾಸವಾಗಿರುವಂತೆ ಶಾಸಕರು ತಾಕಿತು ಮಾಡಬೇಕು ಎಂದರು.
ಹೊಸನಗರ ಪಟ್ಟಣ ಪಂಚಾಯತಿಗೆ ಸೇರಿರುವ ಸುಮಾರು ೮ ಮಳಿಗೆಯ ಜೊತೆಗೆ ಹೋಟೆಲ್ ಖಾಲಿ ಇದೆ ಸುಮಾರು ೧೧ ವರ್ಷಗಳಿಂದ ಬಸ್ ನಿಲ್ದಾಣದ ಮೇಲಿರುವ ಲಾಡ್ಜ್ ಗಳಿಗೆ ಇನ್ನೂ ಬಾಡಿಗೆಗೆ ಬಂದಿಲ್ಲ ಇಲ್ಲಿಯವರೆಗೆ ಪಟ್ಟಣ ಪಂಚಾಯತಿಗೆ ಸುಮಾರು ೧೦ ಕೋಟಿ ರೂ. ನಷ್ಟು ನಷ್ಟ ಉಂಟಾಗಿದೆ. ಇದಕ್ಕೆ ಅವೈeನಿಕ ದರ ನಿಗದಿ ಪಡಿಸಿದ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಜನಪ್ರತಿನಿಧಿಗಳ ನಿಷ್ಕಾಳಜಿ ವ್ಯಾಪಾರಸ್ಥರಿಗೆ ಜೀವ ಕಂಟಕವಾಗಿದೆ ತಕ್ಷಣ ಬಸ್ ನಿಲ್ದಾಣ ಅಂಗಡಿಗಳು ಹೋಟೆಲ್‌ಗಳು ಲಾಡ್ಜ್‌ಗಳನ್ನು ಟೆಂಡರ್ ಕರೆಯಬೇಕು ಹಾಗೂ ಹೊಸನಗರ ಸರ್ಕಾರಿ ಅಧಿಕಾರಿಗಳು ಹೊಸನಗರ ದಲ್ಲಿಯೇ ವಾಸವಿರುವಂತೆ ಸೂಚಿಸ ಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಹರೀಶ್ ಕೆ.ಆರ್, ಉಪ ಕಾರ್ಯದರ್ಶಿ ವಾದಿ ರಾಜ್ ಭಟ್, ಉಪಾಧ್ಯಕ್ಷ ಸುದೇಶ್ ಕಾಮತ್, ಶಿವಕುಮಾರ್, ಖಜಂಚಿ ದೀಪಕ್ ಸ್ವರೂಪ್, ವಿಠಲ್‌ರಾವ್, ನಿಂಗಮೂರ್ತಿ, ಪೂರ್ಣೇಶ್ ಸುರೇಶ ಬಿ.ಎಸ್, ವಿನಾಯಕ ಹೆದ್ಲಿ, ಪ್ರವೀಣ, ಭೋಜಪ್ಪ ಗೌಡ, ಪ್ರಶಾಂತ್, ವಿನಯಕುಮಾರ್, ಗುರುರಾಜ್, ಗೌತಮ್, ವಿಜಯ ಕುಮಾರ್, ಸುಧೀಂದ್ರ ಪಂಡಿತ್ ಮನೋಹರ, ರಾಘವೇಂದ್ರ ಗಣೇಶ ಇನ್ನೂ ಮುಂತಾದ ವರ್ತಕರಿದ್ದರು.