ಜಿಲ್ಲಾ ಸುದ್ದಿತಾಜಾ ಸುದ್ದಿ

ಆಧುನಿಕ ತಂತ್ರeನದ ಕೌಶಲ್ಯ ಉಪನ್ಯಾಸಕರಿಗೆ ಅವಶ್ಯಕ ಪಠ್ಯಕ್ರಮದಲ್ಲಿ ಇತ್ತೀಚಿನ ಬೆಳವಣಿಗೆಗಳು ಕುರಿತ ಕಾರ್ಯಕ್ರಮ…

Share Below Link

ಶಿವಮೊಗ್ಗ: ಉಪನ್ಯಾಸಕರು ಆಧುನಿಕ ತಂತ್ರeನ ಹಾಗೂ ಕಾಲ ಘಟ್ಟಕ್ಕೆ ಪೂರಕವಾಗಿ ಪಠ್ಯಕ್ರಮ ಬೋಧಿಸುವ ಕೌಶಲಗಳನ್ನು ಕಲಿಯುವುದು ಅತ್ಯಂತ ಅವಶ್ಯಕ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣು ಮೂರ್ತಿ ಹೇಳಿದರು.
ಚಿಕ್ಕಮಗಳೂರಿನ ಎವಿಎಸ್ ಶಿಕ್ಷಣ ಕಾಲೇಜು ಮತ್ತು ಕುವೆಂಪು ವಿವಿ ಬಿಎಡ್ ಕಾಲೇಜಿನ ಪ್ರಾಚಾ ರ್ಯರು ಮತ್ತು ಶಿಕ್ಷಕರ ಸಂಘದ ಸಹಯೋಗದಲ್ಲಿ ಶಿವಮೊಗ್ಗ ನಗರದ ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೊ ಜಿಸಿದ್ದ ಪಠ್ಯಕ್ರಮದಲ್ಲಿ ಇತ್ತೀಚಿನ ಬೆಳವಣಿಗೆಗಳು ವಿಷಯ ಕುರಿತು ೧ ದಿನದ ರಾಜ್ಯಮಟ್ಟದ ಕಾರ್‍ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಪಠ್ಯಕ್ರಮವನ್ನು ಪರಿಣಾಮಕಾರಿಯಾಗಿ ಬೋಧಿಸಲು ಇಂದಿನ ಯುಗದ ಹೊಸ ತಂತ್ರeನವನ್ನು ಉಪನ್ಯಾಸಕರು ಕಲಿತುಕೊಳ್ಳಬೇಕು. ನಮಗೆ ಹೊಸ ಹೊಸ ವಿಷಯಗಳ ಬಗ್ಗೆ ಅರಿವು ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ಸಾಧ್ಯ ವಿಲ್ಲ. ಉತ್ತಮ ವಿದ್ಯಾರ್ಥಿಗಳ ರೂಪಿಸಲು ಉಪನ್ಯಾಸಕರು ಕೌಶ ಲ್ಯಗಳನ್ನು ಹೆಚ್ಚು ಹೆಚ್ಚು ಕಲಿತುಕೊ ಳ್ಳಬೇಕು ಎಂದು ತಿಳಿಸಿದರು.
ಎವಿಎಸ್ ಶಿಕ್ಷಣ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಡಾ. ವೀರಣ್ಣ ಸಜ್ಜನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಠ್ಯ ಕ್ರಮದಲ್ಲಿ ಇತ್ತೀಚಿನ ಬೆಳವಣಿಗೆ ಗಳು ಕುರಿತ ಕಾರ್‍ಯಾಗಾರ ಅತ್ಯಂತ ಉಪಯುಕ್ತ ಕಾರ್ಯಕ್ರಮ ಆಗಿದ್ದು, ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಸದುಪ ಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್‍ಯ ಡಾ. ಎಂ.ವೆಂಕಟೇಶ್ ಮಾತನಾಡಿ, ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಶಿಕ್ಷಕರು ಹೊಸ ಪಠ್ಯಕ್ರಮಗಳ ಬಗ್ಗೆ ಶೀಘ್ರ ಅರಿತುಕೊಂಡು ಪರಿಣಾಮ ಕಾರಿ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಚಾರ್ಯ ಪ್ರೊ. ಪಂಚಾಕ್ಷರಯ್ಯ ಮಾತನಾಡಿ, ಶಿಕ್ಷಣ ಬದುಕಿನ ಸಾಮಾರ್ಥ್ಯ ಹಾಗೂ ಮಲ್ಯ ಹೆಚ್ಚಿಸುವಂತಿರ ಬೇಕು. ಶಿಕ್ಷಣ ಪ್ರಮಾಣ ಜನಸಂಖ್ಯೆಗೆ ಅನುಗುಣವಾಗಿ ಶೇ. ೮೦ಕ್ಕಿಂತ ಹೆಚ್ಚು ಇದ್ರೆ ಅತ್ಯಂತ ವೇಗಗತಿಯಲ್ಲಿ ಸಮಾಜ ಅಭಿವೃದ್ಧಿ ಹೊಂದುತ್ತದೆ. ಉಪನ್ಯಾಸಕರು ಹೆಚ್ಚಿನ ಕೌಶಲ್ಯ ಹೊಂದಿರಬೇಕು ಎಂದು ತಿಳಿಸಿದರು.
ಪ್ರೊ. ಗೀತಾ ಸಿ., ಎವಿಎಸ್ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಅಜೇಶ್ ವಿ.ಎಸ್. ಕುವೆಂಪು ವಿಶ್ವವಿದ್ಯಾಲಯ ಬಿಎಡ್ ಕಾಲೇಜಿನ ಪ್ರಾಚಾರ್ಯರು ಮತ್ತು ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಪರಮೇಶ್ವರಪ್ಪ ಎಚ್.ಎಂ., ಜಿಪಂನ ನವೀದ್, ಮತ್ತಿತರರು ಉಪಸ್ಥಿತರಿದ್ದರು.