ತಾಜಾ ಸುದ್ದಿಲೇಖನಗಳು

ಶತಮಾನಗಳ ಇತಿಹಾಸ ಹೊಂದಿರುವ ಸುಕ್ಷೇತ್ರ – ಶ್ರೀ ಮೈಲಾರಲಿಂಗೇಶ್ವರ ಜಾತ್ರೆ…

Share Below Link

ವಿಜಯ ನಗರ ಜಿ, ಹೂವಿನ ಹಡಗಲಿ ತಾಲ್ಲೂಕಿನ, ಪುರಾಣ ಇತಿಹಾಸ ಹೊಂದಿರುವ ಮೈಲಾರದಲ್ಲಿ ಭಾರತ ಹುಣ್ಣಿಮೆ ಯಿಂದ ಫೆ. ೫ರವರೆಗೆ ನಡೆಯಲಿರುವ ಐತಿಹಾಸಿಕ ಶ್ರೀ ಮೈಲಾರಲಿಂಗೇಶ್ವರ ಜಾತ್ರೆಗೆ ನಾಡಿನ ಮೂಲೆ ಮೂಲೆಗಳಿಂದ ಎತ್ತಿನ ಬಂಡಿ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಮೂಲಕ ಲಕ್ಷಾಂತರ ಭಕ್ತ ಜನಸಾಗರ ಹರಿದು ಬರುತ್ತಿದೆ.
ಶತಮಾನಗಳ ಇತಿಹಾಸ ಹೊಂದಿರುವ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ಸ್ಥಳ ಡೆಂಕಣ ಮರಡಿ ಪುಣ್ಯಭೂಮಿಯಲ್ಲಿ ನಡೆಯುವ ಭಂಡಾರದ ಒಡೆಯನ ವಾಣಿ ಯಲ್ಲಿ ದೇಶದ ಭವಿಷ್ಯವೇ ಅಡಗಿದೆ. ಕಾರ್ಣಿಕೋತ್ಸವದ ಮುನ್ನಾ ದಿನವಾದ ಮಂಗಳವಾರ ಬೆಳಗ್ಗೆ ದೇವಸ್ಥಾನದಲ್ಲಿ ತ್ರಿಶೂಲ, ಆಯುಧ ಪೂಜೆ ಹಾಗೂ ಪೊಲೀಸ್ ಇಲಾಖೆಯಿಂದ ತರಿಸಿದ್ದ ಬಂದೂಕಿಗೆ ಪೂಜೆ ನೆರವೇರಿಸಲಾಗುತ್ತದೆ. ಜತೆಗೆ ಬಿರುದಾವಳಿಗಳ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ ಸಮ್ಮುಖದಲ್ಲಿ ಜರುಗಿಸಲಾಗುವುದು.


ಸವಾರಿ ಬಂಡಿ ಹೂಡಿ, ಎತ್ತಿನ ಕೊಂಬುಗಳಿಗೆ ಬಣ್ಣ ಹಚ್ಚಿ, ಕೊರಳಿಗೆ ಗೆಜ್ಜೆಸರ ಕಟ್ಟಿ ಗಲ್ ಗಲ್ ಎಂದು ಶಬ್ದ ಮಾಡುತ್ತಾ ಬರುತ್ತಿರುವ ಸಾಲು ಸಾಲು ಬಂಡಿಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ. ಜಾತ್ರೆ ಬಂದರೆ ಸಾಕು ಎಡೆ ಸಂಭ್ರಮ ಮನೆ ಮಾಡುತ್ತದೆ. ಎ ಜಾತಿ- ಜನಾಂಗದವರು ಪಾಲ್ಗೊಂಡು ದೇವರ ದರ್ಶನ ಪಡೆಯುತ್ತಾರೆ. ಈ ಜಾತ್ರೆಗೆ ರಾಜ್ಯವಷ್ಟೇ ಅಲ್ಲ ವಿವಿಧ ರಾಜ್ಯಗಳ ಮೂಲೆ – ಮೂಲೆಗಳಿಂದಲೂ ಆಗಮಿಸುತ್ತಾರೆ. ಜಾತ್ರೆ ಆರಂಭಗೊಳ್ಳುವ ಒಂದು ತಿಂಗಳ ಮೊದಲೇ ಜಾತ್ರೆಯ ಸಿದ್ಧತೆ ನಡೆಯುತ್ತದೆ. ರೈತರಿಗಂತೂ ಈ ಜಾತ್ರೆಯ ಸಂಭ್ರಮ ಹೇಳತೀರದು. ರೈತರು ತಮ್ಮ ಎತ್ತುಗಳನ್ನು ಮೇಯಿಸುವುದು, ಸವಾರಿ ಬಂಡಿಗಾಗಿ ಹೊಸ ವಸ್ತುಗಳನ್ನು ಮುಂಗಡವಾಗಿ ಖರೀದಿಸಿ ಇಟ್ಟುಕೊಳುವುದು ಮುಂತಾದವುಗಳನ್ನು ಮಾಡುತ್ತಾರೆ.
ಹುಣ್ಣಿಮೆಯಿಂದ ೩ ದಿನಗಳ ಕಾಲ ಸುಕ್ಷೇತ್ರ ಮೈಲಾರಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ. ಇಂದಿನ ಆಧುನಿಕ ಕಾಲದಲ್ಲೂ ಅತೀ ಹೆಚ್ಚು ಚಕ್ಕಡಿಗಳು ಕಾಣೋದು ಈ ಜತ್ರೆ ಯಲ್ಲಿಯೇ. ಎತ್ತುಗಳನ್ನು ಸಿಂಗರಿಸಿ ಕೊಂಡು ಬಂಡಿ ಕಟ್ಟಿಕೊಂಡು ಜತ್ರೆಗೆ ತೆರಳುವುದನ್ನು ನೋಡುವುದೇ ಸಡಗರ- ಸಂಭ್ರಮ. ಮನೆಯಲ್ಲಿ ರೊಟ್ಟಿ, ಹಲವು ಬಗೆಯ ಕಾಳುಗಳ ಪ, ಸಿಹಿ ಪದಾರ್ಥ ತಯಾರಿಸಿ ಕೊಂಡು ಬುತ್ತಿ ಕಟ್ಟಿಕೊಂಡು ಜತ್ರೆಗೆ ಹೊರಡುತ್ತಾರೆ. ಸುಮಾರು ಒಂದು ವಾರಕ್ಕೆ ಸಾಕಾಗುವಷ್ಟು ದವಸ ಧಾನ್ಯಗಳನ್ನು ಶೇಖರಿಸಿಕೊಂಡು ಶ್ರೀ ಕ್ಷೇತ್ರಕ್ಕೆ ಹೊರಡುತ್ತಾರೆ.
ಈಗಾಗಲೇ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಬೀಡು ಬಿಟ್ಟಿದ್ದು, ಫೆ.೪ ರಂದು ನಡೆಯುವ ಕಾರ್ಣಿಕೋತ್ಸವ ಹಾಗೂ ೫ ರಂದು ಜರುಗಲಿರುವ ಸರಪಳಿ ಪವಾಡದವರೆಗೂ ಎ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.


ಗೊರವಯ್ಯ ರಾಮಜ್ಜ ನುಡಿಯುವ ಕಾರ್ಣಿಕ :
ಫೆ.೪ ರ ಸಂಜೆ ೫.೩೦ಕ್ಕೆ ಡೆಂಕಣ ಮರಡಿಯಲ್ಲಿ ೧೧ ದಿನಗಳ ಕಾಲ ಉಪವಾಸ ವ್ರತ ದಲ್ಲಿರುವ ಗೊರವಯ್ಯ ಸುಮಾರು ೨೦ ಅಡಿ ಉದ್ದದ ತುಪ್ಪ ಸವರಿದ ಐತಿಹಾಸಿಕ ಬಿಲ್ಲನ್ನು ಏರಿ ಸದ್ದಲೇ..! ಎಂದಾಗ ನೆರೆಯುವ ಲಕ್ಷಾಂತರ ಭಕ್ತರು, ಪಶು, ಪಕ್ಷಿ ಸೇರಿದಂತೆ ಎಲ್ಲ ಕಡೆಗೂ ನಿಶ್ಯಬ್ದ ಆವರಿಸುತ್ತದೆ. ಆ ಕ್ಷಣದ ಗೊರವಯ್ಯ ಕಾರ್ಣಿಕ ನುಡಿಯುವುದು ಸಂಪ್ರದಾಯ.
ಲಕ್ಷೆಪ ಲಕ್ಷ ಭಕ್ತರಿದ್ದ ಪ್ರದೇಶದಲ್ಲಿ ಒಂದು ಸೂಜಿ ಮೊನೆ ಬಿದ್ದರೂ ಕೇಳಿಸುವಷ್ಟು ಮನ ಆವರಿಸುತ್ತದೆ. ನಂತರ ಗೊರವಪ್ಪ ಶ್ರೀ ಮೈಲಾರಲಿಂಗನ ಆಶೀರ್ವಾದದಂತೆ ಕಾರ್ಣಿಕದ ಭವಿಷ್ಯವಾಣಿ ನುಡಿದು ಭೂಮಿಗೆ ಧುಮುಕುತ್ತಾನೆ. ಇದು ನಿಜಕ್ಕೂ ಕ್ಷಣ ಕಾಲ ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿರಿಸುತ್ತದೆ. ಈ ಕಾರ್ಣಿಕದ ನುಡಿಯಿಂದ ದೇಶದ ಒಳಿತು -ಕೆಡಕುಗಳ ವಿಶ್ಲೇಷಣೆ ಮಾಡಲಾಗುತ್ತದೆ. ನಾಡಿನ ಗಣ್ಯರ ಜೀವನ, ರೈತಾಪಿ ವರ್ಗಕ್ಕೆ ಶುಭ-ಅಶುಭ, ಮಕ್ಕಳು, ಹಿರಿಯ ಜೀವನ, ನಾಡಿನ ಒಳಿತು ಕೆಡುಕುಗಳ ಮುನ್ನೆಚ್ಚರಿಕೆ ಕೈಗನ್ನಡಿ ಆಗಿರುತ್ತದೆ ಎಂದರೆ ತಪ್ಪಾಗಲಾ ರದು. ಹೀಗೆ ಎ ರೀತಿ ಯಿಂದಲೂ ಶ್ರೀ ಮೈಲಾರ ಕಾರ್ಣಿಕೋತ್ಸವವನ್ನು ಭಕ್ತರು ತಮ್ಮದೇ ಲೆಕ್ಕಾಚಾರದಲ್ಲಿ ವಿಶ್ಲೇಷಿಸುತ್ತಾರೆ.
ಈ ಕಾರ್ಣಿಕ ನುಡಿಯಲ್ಲಿ ಪ್ರಸಕ್ತ ವರ್ಷದ ಮಳೆ, ಬೆಳೆ, ರಾಜಕೀಯದ ಏಳು-ಬೀಳು, ಆರ್ಥಿಕ, ವಾಣಿಜ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳು ಹಾಗೂ ದೇಶದ ಭವಿಷ್ಯ ಅಡಗಿರುತ್ತದೆ. ಕಾರ್ಣಿಕ ನುಡಿ ಭವಿಷ್ಯದ ಸತ್ಯವಾಣಿ ಎಂದು ಭಕ್ತರು ನಂಬುತ್ತಾರೆ.
ಮೈಲಾರ ಜತ್ರೆಯ ಧಾರ್ಮಿಕ
ವಿವಿಧ ಕಾರ್ಯಕ್ರಮಗಳು :
ಜ.೨೫ರ ಭಾನುವಾರ ರಥಸಪ್ತಮಿಯ ನಂತರ ಶ್ರೀ ಮಾರ್ತಾಂಡ ಭೈರವನ ದೆಂಕಣ ಮರಡಿ ಆರೋಹಣ ಮತ್ತು ಕಡುಬಿನ ಕಾಳಗ ನಡೆಯು ವುದು. ಫೆ.೧ ರಂದು ಭಾನುವಾರ ಭರತ ಹುಣ್ಣಿಮೆ ನಡೆಯಲಿದ್ದು, ಫೆ.೨ ಸೋಮವಾರ ಧ್ವಜ ರೋಹಣ ನಡೆಯಲಿದ್ದು, ಫೆ.೩ರ ಮಂಗಳವಾರ ತ್ರಿಶೂಲ ಪೂಜೆ ನಡೆಸಲಾಗುವುದು, ಬುಧವಾರ ೪ ರಂದು ಪ್ರಾತ:ಕಾಲ ೫ ಗಂಟೆಗೆ ಶ್ರೀ ಸ್ವಾಮಿಯು ಮಲ್ಲ ವೀರನ ಸಂಹಾರಕ್ಕೆ ದೆಂಕಣ ಮರಡಿಗೆ ಗುಪ್ತ ಮನ ಸವಾರಿ, ಅದೇ ದಿನ ಸಾಯಂಕಾಲ ೫:೩೦ಕ್ಕೆ ಶ್ರೀ ಮೈಲಾರ ಲಿಂಗಸ್ವಾಮಿಯ ದೇವಸ್ಥಾನದ ಗುರು ಪರಂಪರೆಯ ಶ್ರೀ ಗುರುಗಳಿಂದ ಬಂಡಾರ ಆಶೀರ್ವಾದ ನಂತರ ಗೊರವಯ್ಯನವರಿಂದ ಕಾರ್ಣಿಕೋತ್ಸವ ನುಡಿಯುವುದು. ಫೆ.೫ರಂದು ಮಂಗಳವಾರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯು ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುವುದು. ಸಾಯಂಕಾಲ ೪:೩೦ಕ್ಕೆ ದೇವಸ್ಥಾನ ಗುರು ಪರಂಪರೆಯ ಶ್ರೀ ಗುರುಗಳಿಂದ ಬಂಡಾರ ಆಶೀರ್ವಾದ ನಂತರ ಕಂಚಿ ವೀರರಿಂದ ಪವಾಡ ಮತ್ತು ಗೊರವಯ್ಯ ರವರಿಂದ ಸರಪಳಿ ಪವಾಡಗಳು ನಡೆಯುವವು.
ಸ್ಥಳಪುರಾಣ: ಪ್ರಸ್ತುತ ಕ್ಷೇತ್ರದ ಸ್ಥಳಪುರಾಣ ದಂತೆ ಜನಗಳಿಗೆ ತೊಂದರೆ ಕೊಡುತ್ತಿದ್ದ ಮಣಿಮಪುರ ಎಂಬ ರಾಕ್ಷಸನನ್ನು ಈಶ್ವರ ಗೊರವನ ವೇಷದಲ್ಲಿ ಬಂದು ಸಂಹರಿಸಿದನೆಂದು ಕಥೆ ಇದೆ. ಈ ರಾಕ್ಷಸ ಬ್ರಹ್ಮನನ್ನು ಪ್ರಾರ್ಥಿಸಿ ಯಾರಿಂದಲೂ ಸಾವು ಬಾರದೆ ಇರುವಂತೆ ವರ ಬೇಡುತ್ತಾನೆ. ಆದರೆ ಬ್ರಹ್ಮ ಇದಕ್ಕೆ ಕಿವಿಗೊಡದಿರಲು ಆತ ಪರಮೇಶ್ವರನನ್ನೇ ಕುರಿತು ಬೇಡುತ್ತಾನೆ. ಪರಮೇಶ್ವರ ಇದರಿಂದ ಕುಪಿತನಾಗಿ ತಲೆ ಕೊಡವುತ್ತಾನೆ. ಈಶ್ವರನ ತಲೆಯಿಂದ ತುಪ್ಪದ ಮಾಳಮ್ಮ ಎಂಬ ಹೆಣ್ಣು ಜನಿಸಿ ರಾಕ್ಷಸನನ್ನು ಕೊಲ್ಲಲು ಉದ್ಯುಕ್ತಳಾಗುತ್ತಾಳೆ. ಆಕೆಯಿಂದಲೂ ರಾಕ್ಷಸನನ್ನು ಕೊಲ್ಲಲು ಸಾಧ್ಯವಾಗದೆ ಹೋದಾಗ, ಪರಮೇಶ್ವರನೇ ಗೊರವರ ವೇಷದಲ್ಲಿ ಬಂದು ರಾಕ್ಷಸನನ್ನು ಕೊಂದು, ತುಪ್ಪದ ಮಾಳಮ್ಮನನ್ನು ಮದುವೆಯಾಗುತ್ತಾನೆ.
ಗೊರವರು: ಗೊರವರು ಎಂಬ ವೃತ್ತಿಗಾಯಕರು ಈ ಮೈಲಾರಲಿಂಗ ಕ್ಷೇತ್ರಕ್ಕೆ ಸಂಬಂಧಪಟ್ಟವರು. ಇವರ ವೇಷಭೂಷಣಗಳಿಂದ ಇವರನ್ನು ಸುಲಭ ವಾಗಿ ಗುರುತಿಸಬಹುದಾಗಿದೆ. ತಲೆಗೆ ಕರಡಿಯ ಚರ್ಮವನ್ನು ಟೋಪಿಯಾಗಿ ಧರಿಸುತ್ತಾರೆ. ಕೈಯಲ್ಲಿ ಡಮರುಗ, ಪಿಳ್ಳಂಗೋವಿ, ರುದ್ರಾಕ್ಷಿ ಮಣಿಹಾರ, ಎಲೆಯ ಸಂಚಿ, ದೋಣಿ (ಭಿಕ್ಷಾಪಾತ್ರೆ), ಹೊಕ್ಕಳಿನವರೆಗೂ ಹುಲಿಚರ್ಮ, ರಟ್ಟೆಗೆ ಬಳೆ, ಕಾಲಿಗೆ ಗೆಜ್ಜೆ, ಕೊರಳಿಗೆ ಕವಡೆ ಇವುಗಳಿಂದ ಶೃಂಗರಿಸಿಕೊಳ್ಳುತ್ತಾರೆ. ಮೈಲಾರಲಿಂಗನ ಕೃಥಾ ಪರಂಪರೆಯನ್ನು ಇವರು ಉಳಿಸಿಕೊಂಡು ಬಂದಿzರೆ. ಕಥಾ ಪರಂಪರೆಗಿಂತ ರೋಮಾಂಚಕಾರಿ ಪವಾಡಗಳನ್ನು ಮಾಡುವಲ್ಲಿ ಇವರು ಹೆಸರಾದವರು. ಇವರ ನೃತ್ಯವೂ (ಗೊರವರ ಕುಣಿತ) ಬಹಳ ವೈವಿಧ್ಯಪೂರ್ಣ ವಾದುದೆನಿಸಿದೆ.
ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.