save VISL ಎಂದು ಪಧಾನಿ ಮೋದಿಗೆ ರಕ್ತದಲ್ಲಿ ಪತ್ರ…
ಭದ್ರಾವತಿ : ವಿಐಎಸ್ ಎಲ್ ಕಾರ್ಖಾನೆ ಉಳಿಸಿ ಎಂದು ಆಗ್ರಹಿಸಿ ನಡೆಯುತ್ತಿರುವ ಗುತ್ತಿಗೆ ಕಾರ್ಮಿಕ ಚಳುವಳಿಗೆ ಇಂದು ೬೭ನೇ ದಿನ ತುಂಬಿದ್ದು ಅದರ ಅಂಗವಾಗಿ ರಕ್ತ ಪತ್ರ ಚಳುವಳಿ ನಡೆಸಲಾಗಿದೆ.
ಒಂದು ರೂ. ಪೋಸ್ಟಲ್ ಕಾರ್ಡ್‌ನಲ್ಲಿ ಕಾರ್ಮಿಕರು ಮತ್ತು ಮಹಿಳೆಯರು ಸಿರಂಜ್‌ನಲ್ಲಿ ರಕ್ತ ತೆಗೆದು ಲೋಟದಲ್ಲಿ ಸಂಗ್ರಹಿಸಿ ನಂತರ ಕಾರ್ಡ್‌ನಲ್ಲಿ ಸೇವ್ ವಿಐಎಸ್‌ಎಲ್ ಎಂದು ಬರೆದು ರಕ್ತದಲ್ಲಿಯೇ ಹೆಬ್ಬಟ್ಟು ಒತ್ತಿ ಪ್ರಧಾನಿ ಮೋದಿ ವಿಳಾಸಕ್ಕೆ ಬರೆದು ಬಾಕ್ಸ್ ನಲ್ಲಿ ಎಲ್ಲರ ಕಾರ್ಡನ್ನ ಸಂಗ್ರಹಿಸುತ್ತಿzರೆ.
ಸೇವ್ ವಿಐಎಸ್‌ಎಲ್ ಎಂದು ಬರೆದು ಫೋಟೊ ತೆಗೆದು ಫೇಸ್ ಬುಕ್ ಮತ್ತು ಟ್ವೀಟರ್‌ನಲ್ಲಿ ಅಪ್ಲೋಡ್ ಮಾಡುವುದಾಗಿ ಕಾರ್ಮಿಕರು ಮಾಧ್ಯಮಕ್ಕೆ ಮಾಹಿತಿ ನೀಡಿzರೆ. ಈ ಪ್ರತಿಭಟನೆಯಲ್ಲಿ ಹೊಸದುರ್ಗ ಕನಕ ಪೀಠದ ಮಠಾಧೀಶ ಈಶ್ವರಾನಂದ ಪುರಿ ಸ್ವಾಮಿಗಳು ಭಾಗಿಯಾಗಿದ್ದರು.
ನಂತರ ಮಾಧ್ಯಮಗಳಿಗೆ ಮಾತನಾಡಿದ ಪೂಜ್ಯಶ್ರೀಗಳು ಕಾರ್ಖಾನೆ ಉಳಿಸಿ ನಡೆಯುತ್ತಿರುವ ಹೋರಾಟ ೬೭ನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟ ೬೭ನೇ ದಿನಕ್ಕೆ ಕಾಲಿಟ್ಟರೂ ಯಾವ ಮಾಧ್ಯಮಗಳಲ್ಲೂ ಪ್ರಚಾರ ಪಡೆಯದಿರುವುದು ದುರಂತದ ಸಂಗತಿ ಎಂದು ವಿಷಾದಿಸಿದರು.
ಪ್ರಧಾನಿ ಮೋದಿ ಕಾರ್ಮಿಕರ ಹೋರಾಟಕ್ಕೆ ಇತಿಶ್ರೀ ಹೇಳಬೇಕು. ಮಧ್ಯಪ್ರವೇಶಿಸಬೇಕು. ಸರ್ಕಾರ ೧೦೦೦ ಕೋಟಿ ಹಣ ನೀಡಿ ಪುನಶ್ಚೇತನಗೊಳಿಸಬೇಕು. ಒಂದು ವೇಳೆ ಸರ್ಕಾರ ನೀಡದಿದ್ದರೆ ಮಠಾಧೀಶರು ಜೋಳಿಗೆ ಹಿಡಿದು ಕಾರ್ಖಾನೆಗೆ ಧೇಣಿಗೆ ಸಂಗ್ರಹಿಸಲು ಮುಂದಾಗಲಿzರೆ ಎಂದು ಹೇಳಿದರು.