ವಿನುತ ಮುರಳೀಧರ್‌ರಿಗೆ ಆತ್ಮೀಯ ಸನ್ಮಾನ…
ಶಿವಮೊಗ್ಗ : ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ, ಸ್ತ್ರೀಬಂಧು ಸ್ವಸಹಾಯ ಸಂಘಗಳ ಒಕ್ಕೂಟ ತೀರ್ಥಹಳ್ಳಿ ವಲಯದ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.
ತೀರ್ಥಹಳ್ಳಿಯ ಯುನಿಟಿ ಚರ್ಚ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಲೂರ್ದು ಮಾತೆ ಚರ್ಚ್‌ನ ಧರ್ಮಕೇಂದ್ರದ ಗುರುಗಳಾದ ರೆ|ಫಾ| ವೀರೇಶ್ ವಿಕ್ಟರ್ ಮೊರಾಸ್ ಉದ್ಘಾಟಿಸಿದರು. ಎಸ್‌ಎಂಎಸ್ ಎಸ್‌ಎಸ್‌ನ ನಿರ್ದೇಶಕರಾದ ರೆ|ಫಾ| ಪಿಯೂಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಅಥಿತಿಗಳಾಗಿ ತೀರ್ಥಹಳ್ಳಿಯ ಅಸಿಸ್ಸಿ ಕಾನ್ವೆಂಟ್‌ನ ಸುಪಿರಿಯರ್ ಸಿಸ್ಟರ್ ಅನ್ನಿ, ಸ್ತ್ರೀಬಂಧು ಸ್ವಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಮೋಕ್ಷಾರಾಕಿಣಿ, ಪ್ರಮುಖರಾದ ಶ್ರೀಮತಿ ರೇಣುಕಾ, ಶ್ರೀಮತಿ ಸುರೇಖ ಆಗಮಿಸಿದ್ದರು.
ತೀರ್ಥಹಳ್ಳಿಯ ಪ್ರತಿಷ್ಠಿತ ಪ್ರಶಾಂತಿ ಚಿಕಿತ್ಸಾಲಯದ ಆಪ್ತ ಸಮಾಲೋಚಕಿ ಶ್ರೀಮತಿ ವಿನುತ ಮುರಳೀಧರ್ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿ ಹಾಗೂ ಆಪ್ತ ಸಮಾಲೋಚಕಿ ಶ್ರಿಮತಿ ವಿನುತ ಮುರಳೀಧರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೆ| ಫಾ| ಮಿಲ್ಟನ್ ಸೋಜ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

