ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ನಗರದ ಅಭಿವೃದ್ಧಿಗೆ ಕೇಂದ್ರದಿಂದ ಕೋಟ್ಯಂತರ ಅನುದಾನ…

Share Below Link

ಶಿವಮೊಗ್ಗ: ನಗರದ ಅಭಿ ವೃದ್ಧಿಗೆ ಕೇಂದ್ರ ಸರ್ಕಾರ ಕೋಟ್ಯ ಂತರ ರೂ. ಅನುದಾನ ನೀಡಿದ್ದು, ಇಲ್ಲಿನ ಸಂಚಾರ ವ್ಯವಸ್ಥೆ ಗಮನಿಸಿ ಸುಗಮ ಸಂಚಾರ ಕ್ಕಾಗಿ ಐದು ರೈಲ್ವೆ ಮೇಲ್ಸೇತುವೆ ಹಾಗೂ ಎರಡು ರೈಲ್ವೆ ಅಂಡರ್‌ಪಾಸ್‌ಗಳನ್ನು ಸುಮಾರು ೧೪೦ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಅವರು ಇಂದು ಸವಳಂಗ ರಸ್ತೆಯ ಎಲ್‌ಸಿ-೪೯, ೩೯ ಕೋಟಿ ವೆಚ್ಚದ ರೈಲ್ವೆ ಮೇಲ್ಸೇತುವೆ ಕಾಮ ಗಾರಿ ಪ್ರಗತಿ ಪರಿಶೀಲಿಸಿ ಸುದ್ದಿ ಗಾರರೊಂದಿಗೆ ಮಾತನಾಡಿದರು.


ಈಗಾಗಲೇ ಸೋಮಿನಕೊಪ್ಪ ರೈಲ್ವೆ ಮೇಲ್ಸೇತುವೆ ಹಾಗೂ ಪಿಎನ್‌ಟಿ ಕಾಲೋನಿ ಬಳಿ ರೈಲ್ವೆ ಅಂಡರ್ ಪಾಸ್ ಒಟ್ಟೂ ೨೭ಕೋಟಿ ವೆಚ್ಚದಲ್ಲಿ ಪೂರ್ಣ ಗೊಂಡು ಲೋ ಕಾರ್ಪಣೆಗೊಂಡಿದೆ. ಭದ್ರಾವತಿ ತಾಲೂಕಿನ ಕಡದಕಟ್ಟೆ ಬಳಿ ಎಲ್. ಸಿ-೩೪ ಮೇಲ್ಸೇತುವೆ ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ವಿದ್ಯಾ ನಗರದ ರೈಲ್ವೆ ಮೇಲ್ಸೇತುವೆ ೪೩ ಕೋಟಿ ವೆಚ್ಚದಲ್ಲಿ ಅತ್ಯಂತ ಸುಂದ ರವಾಗಿ ನಿರ್ಮಾಣಗೊಂಡಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ಡಿಸೆಂಬರ್ ಅಂತ್ಯಕ್ಕೆ ಎಲ್ಲಾ ಕಾಮ ಗಾರಿ ಮುಗಿದು ಸಾರ್ವಜನಿಕರ ಉಪಯೋಗಕ್ಕೆ ಸಿಗಲಿದೆ ಎಂದರು.
ಕೆಲವು ಕಡೆ ಅಡ್ಡರಸ್ತೆ ಕಾಮ ಗಾರಿ ಗಳು ಹೆಚ್ಚುವರಿಯಾಗಿ ಹಮ್ಮಿಕೊಳ್ಳ ಲಾಗಿದ್ದು, ಸಾರ್ವಜ ನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೆಚ್ಚುವರಿಯಾಗಿ ಎರಡು ಸಣ್ಣ ಸೇತುವೆಗಳನ್ನು ಕೂಡ ಮಾಡಲಾಗುತ್ತಿದೆ ಎಂದರು.
ಇತಿಹಾಸದಲ್ಲೇ ಇಷ್ಟೊಂದು ವೇಗವಾಗಿ ರೈಲ್ವೆ ಕಾಮಗಾರಿಗಳು ಮುಗಿಯುತ್ತಿರುವುದು ಇದೇ ಮೊದಲು. ಇದಕ್ಕಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಮಾಜಿ ಸಿಎಂ ಯಡಿಯೂರಪ್ಪನ ವರಿಗೆ ಶಿವಮೊಗ್ಗ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸು ತ್ತೇನೆ. ರೈಲ್ವೆ ಅಧಿಕಾರಿಗಳು ಕೂಡ ಅತ್ಯಂತ ಸಹಕಾರ ನೀಡಿದ್ದಾರೆ. ಶಿವಮೊಗ್ಗ ನಗರದ ಅಭಿವೃದ್ಧಿ ದೃಷ್ಟಿಯಿಂದ ಈ ಕಾಮಗಾರಿ ಗಳಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅತ್ಯಂತ ಅನುಕೂಲ ವಾಗಲಿದೆ ಎಂದರು.
ಈ ಸಂದರ್ಭದಲ್ಲಿ ರೈಲ್ವೆ ಇಂಜಿನಿಯರ್ ರಾಜ್‌ಕುಮಾರ್, ಸ್ಮಾರ್ಟ್ ಸಿಟಿ ಕಾರ್ಯಪಾಲಕ ಇಂಜಿನಿಯರ್ ವಿಜಯ ಕುಮಾರ್, ಕರ್ನಾಟಕ ಜಲ ಮಂಡಳಿ ಕಾರ್ಯಪಾಲಕ ಅಭಿಯ ಂತರ ಸಿದ್ದಪ್ಪ, ಸ್ಥಳೀಯ ಕಾರ್ಪೊ ರೇಟರ್ ಇ. ವಿಶ್ವಾಸ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖ ರಾದ ಜ್ಯೋತಿಪ್ರಕಾಶ್, ಮಾಲ ತೇಶ್, ದಿವಾಕರ ಶೆಟ್ಟಿ, ರಾಜೇಶ್ ಕಾಮತ್ ಮತ್ತಿತರರಿದ್ದರು.