ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬೃಹತ್ ಕೊಬ್ಬರಿ ಹಾರದೊಂದಿಗೆ ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ ಸ್ವಾಗತ…

Share Below Link

ಭದ್ರಾವತಿ: ವಿಜಯ ಸಂಕಲ್ಪ ಯಾತ್ರೆ ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಹಾಗು ಪಕ್ಷದ ಮುಖಂಡರು, ಕಾರ್ಯಕರ್ತರ ಸಂಭ್ರಮದೊಂದಿಗೆ ಶನಿವಾರ ಬೆಳಿಗ್ಗೆ ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಆರಂಭಗೊಂಡಿತು.
ವಿಜಯ ಸಂಕಲ್ಪ ಯಾತ್ರೆ ಯಲ್ಲಿ ಸಂಸದ ಬಿ.ವೈ ರಾಘ ವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ, ಬಿಜೆಪಿ ಜಿಧ್ಯಕ್ಷ ಡಿ.ಟಿ ಮೇಘರಾಜ್, ರಾಜ್ಯ ಸಂಚಾಲಕರಾದ ರಾಜೇಂದ್ರ, ಎಸ್. ದತ್ತಾತ್ರಿ, ಜಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಮುಖರಾದ ಮಂಗೋಟೆ ರುದ್ರೇಶ್, ಎಸ್. ಕುಮಾರ್, ತೀರ್ಥಯ್ಯ ಸೇರಿ ದಂತೆ ಪಕ್ಷದ ಹಿರಿಯ ಪ್ರಮು ಖರು, ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಕಲ್ಪ ಯಾತ್ರೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ನಂತರ ಹೊಸಮನೆ ಶಿವಾಜಿ ಸರ್ಕಲ್‌ವರೆಗೂ ಸಾಗಿತು.

ಬೃಹತ್ ಕೊಬ್ಬರಿ ಹಾರ : ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗ ಸರ್.ಎಂ ವಿಶ್ವೇಶ್ವ ರಾಯ ಪ್ರತಿಮೆ ಬಳಿ ಕರ್ನಾಟಕ ರತ್ನ ಡಾ. ರಾಜ್‌ಕುಮಾರ್, ಡಾ. ಪುನೀತ್ ರಾಜ್‌ಕುಮಾರ್ ಅಭಿ ಮಾನಿಗಳ ಸಂಘದ ಪ್ರಮುಖರು, ಅಭಿಮಾನಿಗಳು ಬೃಹತ್ ಕೊಬ್ಬರಿ ಹಾರ ಕ್ರೇನ್ ಬಳಸಿ ಸಮರ್ಪಿಸುವ ಮೂಲಕ ಅಭಿಮಾನ ಪ್ರದರ್ಶಿ ಸಿದರು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಬೈಕ್ ರ್‍ಯಾಲಿ, ಮಹಿಳೆಯರಿಂದ ನೃತ್ಯ:
ವಿಜಯ ಸಂಕಲ್ಪ ಯಾತ್ರೆ ಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ ಗಮನ ಸೆಳೆದರು. ಅಲ್ಲದೆ ಮಹಿಳಾ ಕಾರ್ಯಕರ್ತೆಯರು, ಮುಖಂಡರು ನೃತ್ಯ ಮಾಡುವ ಮೂಲಕ ಹೆಜ್ಜೆ ಹಾಕಿದರು.
ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.