ಉತ್ಸವಮೂರ್ತಿಗಳ ಭವ್ಯ ಮೆರವಣಿಗೆ..
ನ್ಯಾಮತಿ: ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ಮಾಧವ ಶ್ರೀ ರಂಗನಾಥ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಮುರಡೇಶ್ವರ ಸ್ವಾಮಿ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ಗುರುವಾರ ನಡೆಯಿತು.
ಮಾದನಬಾವಿ ಗ್ರಾಮದ ಮಾಧವ ಶ್ರೀ ರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ, ಮುರಡೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಅಲಂಕತಗೊಂಡ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಗುರುವಾರ ಬೆಳಿಗ್ಗೆ ಮಾದನಬಾವಿ ಗ್ರಾಮದಿಂದ ಬಸವನಹಳ್ಳಿ ಗ್ರಾಮದ ಮೂಲಕ ಡೊಳ್ಳು, ಭಜನೆ, ಕಹಳೆ ಇತರೆ ವಾದ್ಯ ಗಳೊಂದಿಗೆ ಪಲ್ಲಕ್ಕಿಯನ್ನು ಭಕ್ತರು ಹೊತ್ತು ಪಾದಯಾತ್ರೆ ಮುಖಾಂತರ ಮೆರವಣಿಯು ತಾಲೂಕಿನ ಕುರುವ ಗೋವಿನಕೋವಿ ಮತ್ತು ರಾಂಪುರ ಗ್ರಾಮಗಳಲ್ಲಿ ಹರಿಯುವ ತುಂಗಾ ಭದ್ರಾ ನದಿಯನ್ನು ತಲುಪಿತು.
ಕುರುವ, ಗೋವಿನಕೋವಿ ಮತ್ತು ರಾಂಪುರ ಗ್ರಾಮಗಳಲ್ಲಿ ಹರಿಯುವ ತುಂಗಾ ಭದ್ರಾ ನದಿ ಯಲ್ಲಿ ಮಾಧವ ಶ್ರೀ ರಂಗನಾಥ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಮುರಡೇಶ್ವರ ಸ್ವಾಮಿ ಉತ್ಸವ ಮೂರ್ತಿಗಳಿಗೆ ಮಾದನಬಾವಿ ಗ್ರಾಮದ ಜಂಗಮರ ಮಂತ್ರ ಘೋಷಣೆಯಲ್ಲಿ ಪಂಚಾಮೃತ ಸಹಿತ ರುದ್ರಾಭಿಷೇಕ ಬಿಲ್ವಾರ್ಚನೆ ಮಂಗಳಾರತಿಯನ್ನು ನಡೆಸಿದ ಬಳಿಕ ತುಂಗಾ ಭದ್ರಾ ನದಿಯ ಮಧ್ಯೆ ಭಾಗದ ನಡುಗಡ್ಡೆಯ ಶ್ರೀ ಗಡ್ಡೆ ರಾಮೇಶ್ವರ ದೇವರ, ಶ್ರೀ ದುರ್ಗಾದೇವಿ, ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಠದ ಮೂಲಗದ್ದುಗೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಮಾದನಬಾವಿ ಗ್ರಾಮದ ಮಾಧವ ಶ್ರೀ ರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ, ಮುರಡೇಶ್ವರ ಸ್ವಾಮಿ ಉತ್ಸವ ಮೂರ್ತಿಗಳಿಗೆ ವಿವಿಧ ಧಾರ್ಮಿಕ ಪೂಜ ಕೈಂಕರ್ಯದ ಬಳಿಕ ಪುನಃ ಅಲಂಕತಗೊಂಡ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ತುಂಗಾ ಭದ್ರಾ ನದಿಯಿಂದ ಡೊಳ್ಳು , ಭಜನೆ , ಕಹಳೆ ಇತರೆ ವಾದ್ಯಗಳೊಂದಿಗೆ ಪಲ್ಲಕ್ಕಿಯನ್ನು ಭಕ್ತರು ಹೊತ್ತು ಪಾದಯಾತ್ರೆ ಮುಖಾಂತರ ಮೆರವಣಿಗೆ ಬಸವನಹಳ್ಳಿ ಗ್ರಾಮದ ಮೂಲಕ ಮಾದನಬಾವಿ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ದೇಗುಲ ತಲುಪಿ ಪೂಜೆ ಸಲ್ಲಿಸಿ ಮಾದನ ಬಾವಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಯನ್ನು ನಡೆಸಿದರು.