ಸೂಪರ್ ಮಾಮ್ಸ್ ಗ್ರೂಪ್ಸ್‌ನಿಂದ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ
ದಾವಣಗೆರೆ : ಸೂಪರ್ ಮಾಮ್ಸ್ ಆಫ್ ಗ್ರೂಪ್ ಹಾಗೂ ಕುಂದುವಾಡ ಕೆರೆ ವಾಯುವಿಹಾರ ಬಳಗದಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಪುಣ್ಯಸ್ಮರಣೆ ಮಾಡುವ ಮೂಲಕ ನೆನೆಯಲಾಯಿತು.
ನಿನ್ನೆ ಮುಂಜನೆ ವಾಯು ವಿಹಾರಿಗಳು, ಸೂಪರ್ ಮಾಮ್ಸ್ ಆಫ್ ಗ್ರೂಪ್ ತಂಡ ಕುಂದವಾಡ ಕೆರೆಯಂಗಳದಲ್ಲಿ ಪರಮಾತ್ಮ ಕರ್ನಾಟಕ ರತ್ನ ಅಪ್ಪು ಭಾವಚಿತ್ರವಿಟ್ಟು ಪುಷ್ಪ ನಮನ ಸಲ್ಲಿಸಿ ಪೂಜಿಸಿ ೨ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.
ವಿಶೇಷವೆಂದರೆ ಪುನೀತ್ ಅಭಿನಯದ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ ಹಾಡು ಹಾಡುವ ಮೂಲಕ ಅಪ್ಪುಗೆ ಗೌರವ ಸಲ್ಲಿಸಿದ ಅಭಿಮಾನಿಗಳು.