ಜಿಲ್ಲಾ ಸುದ್ದಿತಾಜಾ ಸುದ್ದಿ

ಬಿರುಗಾಳಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ

Share Below Link

ಹೊಸನಗರ : ಮಂಗಳವಾರ ಮಧ್ಯಾಹ್ನ ಬೀಸಿದ ಭಾರಿ ಪ್ರಮಾಣದ ಗಾಳಿಗೆ ತೆಂಗಿನಮರ ವೊಂದು ಮನೆ ಮೇಲೆ ಮುರಿದು ಬಿದ್ದು ಮನೆ ಜಖಂಗೊಂಡ ಘಟನೆ ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದಲ್ಲಿ ನಡೆದಿದೆ.
ನಾಗರತ್ನ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು ಮಧ್ಯಾಹ್ನ ಮಳೆಯೊಂದಿಗೆ ಬೀಸಿದ ಭಾರಿ ಪ್ರಮಾಣದ ಬಿರುಗಾಳಿ ಯಿಂದಾಗಿ ಈ ಘಟನೆ ನಡೆದಿದ್ದು, ಮನೆಗೆ ಭಾಗಶಃ ಹಾನಿ ಉಂಟಾ ಗಿದೆ. ಇದರಿಂದ ೫೦ ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಕೋಡೂರು ಗ್ರಾಪಂ ಸದಸ್ಯರು ಭೇಟಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿzರೆ.