ಜಿಲ್ಲಾ ಸುದ್ದಿತಾಜಾ ಸುದ್ದಿ

ಅ.೨೫: ಅನ್ನದಾತರೇ ಆಯೋಜಿಸಿರುವ ೩ ದಿನಗಳ ರಾಜ್ಯಮಟ್ಟದ ಕೃಷಿಮೇಳ

Share Below Link

ನ್ಯಾಮತಿ: ದಸರಾ ಬನ್ನಿ ಹಾಗೂ ಪ್ರಕೃತಿ ವೈಪಲ್ಯದ ಸಮ ನ್ವಯ ಸಾಂಗತ್ಯ ಕೃಷಿ ಶಿರ್ಷಿಕೆಯಲ್ಲಿ ರಾಜ್ಯ ಮಟ್ಟದ ಕೃಷಿಮೇಳ ಅವಳಿ ತಾಲೂಕು ವತಿಯಿಂದ ಅ.೨೫ ರಿಂದ ೩ ದಿನಗಳ ಕಾಲ ಮಾದನ ಭಾವಿ ಗ್ರಾಮದ ಗವಿಸಿದ್ದೇಶ್ವರ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ರೈತರೇ ಆಯೋಜಿಸಿರುವ ಕೃಷಿ ಮೇಳ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ. ಕರಿಬಸಪ್ಪ ತಿಳಿಸಿದರು.


ಗುರುವಾರ ಕಾರ್ಯಕ್ರಮ ನಡೆಯುತ್ತಿರುವ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರೈತರೇ ಆಯೋ ಜಿಸಿರುವ ಈ ಕೃಷಿ ಮೇಳ ಕಾರ್‍ಯ ಕ್ರಮನ್ನು ದಾವಣಗೆರೆ ಜಿಲ್ಲಾ ಉಸ್ತು ವಾರಿ ಸಚಿವ ಎಸ್‌ಎಸ್‌ಎಂ ಹಾಗೂ ಶಾಸಕ ಡಿ.ಜಿ.ಶಾಂತನ ಗೌಡ ಉದ್ಘಾಟಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಇರುವಕ್ಕಿ ಬಳಿ ಇರುವ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಆರ್.ಸಿ ಜಗ ದೀಶ್,ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂಪಿಆರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹಾಗೂ ಇತರರು ಆಗಮಿಸಲಿದ್ದಾರೆ.ಮದ್ಯಾಹ್ನ ಒಂದು ಗಂಟೆಗೆ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕತಿಕ ಸೌರಭ ಗೋಷ್ಟಿ ನಡೆಯಲಿದೆ ಈ ಕಾರ್‍ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಹಾಸನ ಮಾಜಿ ಶಾಸಕ ಪ್ರೀತಂಗೌಡ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹಾಗೂ ತರಿಕೆರ ಶಾಸಕ ಶ್ರೀನಿವಾಸ್ ಇರಲಿ ದ್ದಾರೆ. ಬೀಜಗಳ ಸಂರಕ್ಷಣೆ ಹಾಗೂ ಬೀಜೋಪಚಾರ,ರೇಷ್ಮೆಕೃಷಿಯಲ್ಲಿ ಆಧುನಿಕ ಸಂರಕ್ಷಣೆ,ತರಕಾರಿ ಸಸಿಗಳ ಸಂರಕ್ಷಣೆ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತು ಉಪನ್ಯಾಸ ನಡೆಯಲಿದೆ ಎಂದು ವಿವರಿಸಿದರು.
ಅ.೨೬ ಗುರುವಾರ ಆರುಂಡಿ ಕೆ.ಮಂಜಪ್ಪ ಅವರಿಂದ ಸುಗಮ ಸಂಗೀತಾ ನಡೆಯಲಿದೆ,ಬೆಳಗ್ಗೆ ೧೦.೩೦ಕ್ಕೆ ಗೋಷ್ಠಿಗಳು ನಡೆಯ ಲಿದೆ. ಈ ಘೋಷ್ಟಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಅರಸಿಕೆರೆ ಶಾಸಕ ಶಿವಲಿಂಗೆಗೌಡ, ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ, ಶಿವಮೊಗ್ಗ ಗ್ರಾಮಾಂ ತರ ಶಾಸಕಿ ಶಾರದ ಪೂರ್ಯಾ ನಾಯ್ಕ್,ಹರಿಹರ ಶಾಸಕ ಬಿ.ಪಿ. ಹರೀಶ್,ಪಿಐ ಸಿದ್ದೇಗೌಡ ಹಗೂ ಇತರರು ಉಪಸ್ಥಿತರಿರುತ್ತಾರೆ. ಅಡಿಕೆ ,ತೆಂಗುಬೆಳೆಗಳ ಅಂತರ ಬೆಳೆ ಪದ್ದತಿ,ಕಳೆನಾಶಕ ಬೂಮಿಯ ಫಲವತ್ತತೆ,ಪುಷ್ಪ ಕೃಷಿ ಹಾಗೂ ಹಣ್ಣು ಕೃಷಿ ಬೇಸಾಯ,ತುಂತುರು ನೀರಾವರಿ ಹಾಗೂ ನೀರಿನ ಸಂರ ಕ್ಷಣೆ ಬಗ್ಗೆ ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.
ಅ.೨೭ ರಂದು ಬೆಳಗ್ಗೆ ೧೦ಕ್ಕೆ ವೀರಭದ್ರೇಶ್ವರ ಭಜನಾ ಸಂಘ ಮಾದನಬಾವಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ, ಅಂದು ಜನುವಾರುಗಳ ರೋಗ ಬಾದೆ ಮತ್ತು ನಿವಾರಣೆ,ಆಧುನಿಕ ಹಸುಗಳ ಸಾಕಾಣಿಕೆಯಲ್ಲಿ ಪೋಷ ಕಾಂಶಗಳು ಮತ್ತು ಮೇವುನ ಸಂಸ್ಕರಣೆ ಬಗ್ಗೆ ಉಪನ್ಯಾಸ ನಡೆಯಲಿದೆ.ಮತ್ತು ಮದ್ಯಾಹ್ನ ೧ ಗಂಟೆಗೆ ಜನಪದ ಗಾಯಕ ಎಚ್,ಕಡದಕಟ್ಟೆ ತಿಮ್ಮಪ್ಪ ಮತ್ತು ಎನ್‌ಎಸ್‌ಎಸ್ ಶಿಬಿರಾರ್ಥಿಗ ಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಧ್ಯಾಹ್ನ ೨ ಕ್ಕೆ ಗೋಷ್ಠಿ ಹಮ್ಮಿಕೊಳ್ಳಲಾಗಿದೆ, ಈ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಶಾಸಕ ಡಿ.ಜಿ.ಶಾಂತನಗೌಡ ವಹಿಸಲಿ ದ್ದಾರೆ. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಮಧುಬಂಗಾರಪ್ಪ, ಕಡೂರು ಶಾಸಕ ಆನಂದ್, ಜಗಳೂರು ಶಾಸಕ ದೇವೆಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಷಣ್ಮುಖಪ್ಪ, ಬಿಇಒ ಎಸ್.ಸಿ. ನಂಜ ರಾಜ ಸೇರಿದಂತೆ ಹಲವಾರು ಇರಲಿದ್ದಾರೆ ಎಂದರು.
ಅಧ್ಯಕ್ಷ ರುದ್ರಪ್ಪ,ಗೌರವಾಧ್ಯಕ್ಷ ದಿಳ್ಳಿ ಭರ್ಮಪ್ಪ,ದ್ಯಾಮಪ್ಪ, ಬಸವ ರಾಜಪ್ಪ,ಶೇಖರಪ್ಪ, ಅರ ಬಗಟ್ಟೆ ಸತೀಶ್, ಗೌರಪ್ಪ, ಬಸವ ರಾಜು, ಎನ್. ಸಿ.ದೇವರಾಜ್, ಗ್ರಾ.ಪಂ. ಸದಸ್ಯರಾದ ಕೆಂಚಪ್ಪ, ರುದ್ರಪ್ಪ, ನಾಗರಾಜ್.ಕುಮಾರ ಗ್ರಾಮಸ್ಥರು ಇದ್ದರು.