ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಏ.23: ಕೌಶಲ್ಯ ಅಭಿವದ್ಧಿ ತರಬೇತಿಗೆ ಪರೀಕ್ಷೆ …

Share Below Link

ಶಿವಮೊಗ್ಗ: ಕೌಶಲ್ಯ ಅಭಿವೃದ್ಧಿ ಹಾಗೂ ವೃತ್ತಿ ಸೇವಾ ಅವಕಾಶಗಳ ಬಗ್ಗೆ ತರಬೇತಿ ಹಾಗೂ ಮಾರ್ಗ ದರ್ಶನ ನೀಡಲು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಸಂಸ್ಥೆ ಹಾಗೂ ಕ್ಯಾಲೈಟೆಕ್ಸ್ ಇಂಡಿಯಾ ಮುಂದಾಗಿದೆ.
ರೋಟರಿ ಸಂಸ್ಥೆಯ ಮಾರ್ಗ ದರ್ಶನ ಹಾಗೂ ಅಂತರಾಷ್ಟ್ರೀಯ ರೋಟರಿ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಅವಕಾಶಗಳಲ್ಲಿ ವಂಚಿತರಾದ ಹಾಗೂ ಆರ್ಥಿಕ ವಾಗಿ ಹಿಂದುಳಿದ ಪಿಯು ನಂತರ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದೇ ತಮ್ಮ ಆಶೋತ್ತರ ಗಳನ್ನು ಪೂರೈಸಲಾಗದೇ ಉಳಿ ದಂತಹ ಯುವಕ, ಯುವತಿಯರ ಪಾಲಿಗೆ ಬೆಳಕಾಗುವ ನೂತನ ಪರಿಕಲ್ಪನೆ ಸಿದ್ಧಪಡಿಸಲಾಗಿದೆ.


ಕ್ಯಾಲೈಟೆಕ್ಸ್ ಇಂಡಿಯಾ ಸಂಸ್ಥೆ ಕೌಶಲ್ಯ ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಹಲವು ಹಂತ ಗಳಲ್ಲಿ ಪರಿಚಯಿಸುತ್ತಿದೆ. ಮೊದಲನೆಯ ಹಂತದಲ್ಲಿ ಕಾರ್ಪೋರೇಟ್ ಕಂಪನಿಗಳಲ್ಲಿ ವ್ಯವಹರಿಸಲು ಆತ್ಯವಶ್ಯಕವಾದ ಆಂಗ್ಲಭಾಷೆ ಮಾತನಾಡುವ ಹಾಗೂ ಬರವಣಿಗೆಯನ್ನು ಯಶಸ್ವಿ ಯಾಗಿ ಕೈಗತ ಮಾಡುವುದು.
ಎರಡನೆಯ ಹಂತದಲ್ಲಿ ಶಿಭಿರಾರ್ಥಿಗಳು ಕಂಪ್ಯೂಟರ್ ವಿಜನದ ಮೂಲೋದ್ಧೇಶ ಪ್ರಾಥಮಿಕ ಮಾಹಿತಿ, ಸಾಪ್ಟವೇರ್ ಗಳ ಪರಿಚಯ. ಮೂರನೆಯ ಹಂತದಲ್ಲಿ ಕಾರ್ಯಕ್ರಮ ನಿರೂಪಣೆ, ಪರೀಕ್ಷೆ ಹಾಗೂ ಕಂಪ್ಯೂಟರ್ ಹಾರ್ಡ್‌ವೇರ್ ಗಳ ಮಾಹಿತಿ ಕಮ್ಯೂನಿಕೇಷನ್ ತರಬೇತಿ. ಕೊನೆಯ ಹಂತದಲ್ಲಿ ಶಿಬಿರಾರ್ಥಿಗಳ ಅಮೂಲಾಗ್ರ ತರಬೇತಿಯ ನಿರ್ವಹಣೆ ಹಾಗೂ ಮಾನದಂಡದ ಬಗ್ಗೆ ಸರ್ಟಿಫಿಕೇಷನ್ ನೀಡುವುದು.
ಅತ್ಯುತ್ತಮ ಮಾನದಂಡದ ಅರ್ಹತೆ ಪಡೆದ ಶಿಬಿರಾರ್ಥಿಗಳಿಗೆ ಕ್ಯಾಲೆಟಕ್ಸ್ ಕಂಪನಿಯಲ್ಲಿ ವಾರ್ಷಿಕ ೩,೦೦,೦೦೦ ರೂ. ಸಂಬಳದ ಆಧಾರದಲ್ಲಿ ನೇಮಿಸಿಕೊಳ್ಳ ಲಾಗುತ್ತದೆ. ತರಬೇತಿ ಅವಧಿಯಲ್ಲಿ (೩ ಮತ್ತು ೪ನೇ ಹಂತ) ಶಿಬಿರಾ ರ್ಥಿಗಳಿಗೆ ೫,೦೦೦ ರೂ. ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿಯ ಅನುಭವದ ಆಧಾರ ದಲ್ಲಿ ಬೇರೆ ಬೇರೆ ಸಾಫ್ಟ್ವೇರ್ ಕಂಪನಿಗಳಲ್ಲಿ ವಿಪುಲ ಅವಕಾಶಗಳಿವೆ.


ಶಿಬಿರಕ್ಕೆ ಅರ್ಹರಾದ ವಿದ್ಯಾರ್ಥಿಗಳನ್ನ ಪರಿಚಯಿಸಿ ಪ್ರತಿಯೊಂದು ಬ್ಯಾಚ್‌ಗೆ ೩೦ ಅರ್ಹರಿಗೆ ಅವಕಾಶ ನೀಡಲಾಗು ತ್ತದೆ. ಪ್ರವೇಶ ಪರೀಕ್ಷೆಗಳನ್ನು ಏ.೨೩ರ ಭಾನುವಾರ ೧೦೦ ಅಡಿ ರಸ್ತೆಯಲ್ಲಿರುವ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಬೆಳಗ್ಗೆ ೧೦.೩೦ಕ್ಕೆ ನಡೆಸಲಾಗುತ್ತದೆ.
ಪರೀಕ್ಷೆಯಲ್ಲಿ ಶಿಬಿರಾರ್ಥಿಗಳ ಬುದ್ಧಿಶಕ್ತಿ, ಗ್ರಹಣಶಕ್ತಿ, ಐಕ್ಯೂ ಮತ್ತು ಇಕ್ಯೂ ಪರೀಕ್ಷೆ ನಡೆಸಲಾ ಗುತ್ತದೆ. ಆಸಕ್ತ ಶಿಬಿರಾರ್ಥಿಗಳು ಪಿ.ಯು ಅಂಕಪಟ್ಟಿ, , ಬಿ.ಪಿ.ಎಲ್. ಕಾರ್ಡ್, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಹಿತಿ ತರಬೇತಕು ಎಂದು ರೋಟರಿ ಶಿವಮೊಗ್ಗ ಮಿಡ್ ಟೌನ್ ಅಧ್ಯಕ್ಷೆ ವೀಣಾ ಸುರೇಶ್ ತಿಳಿಸಿzರೆ. ಮಾಹಿತಿಗೆ ಮೊ.ಸಂಖ್ಯೆ ೭೮೨೯ ೭ ೩೮೪೧೨ ಸಂಪರ್ಕಿಸಬಹುದಾಗಿದೆ.