ಅ.೨೨: ಯೋಗ ದಸರಾ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ …
ಶಿವಮೊಗ್ಗ: ಶಿವಮೊಗ್ಗ ದಸರಾ ೨೦೨೩ರ ಯೋಗ ದಸರಾ ಅಂಗ ವಾಗಿ, ಅ.೨೨ರಂದು ಕುವೆಂಪು ರಂಗಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಯೋಗಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ ಎಂದು ಸಮಿತಿಯ ಅಧ್ಯಕ್ಷೆ ಕಲ್ಪನಾ ರಮೇಶ್ ಹೇಳಿದರು.
ಅವರು ಇಂದು ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ೨೨ರ ಬೆಳಿಗ್ಗೆ ಕುವೆಂಪು ರಂಗಮಂದಿರದಲ್ಲಿ ಯೋಗಾ ಭ್ಯಾಸ ಮತ್ತು ಪ್ರಾಣಾಯಾಮ ಹಾಗೂ ಧ್ಯಾನಕ್ಕೆ ಸಂಬಂಧಿಸಿದಂತೆ ಬೆಳಗಿನ ಜವ ೫-೩೦ಕ್ಕೆ ಯೋಗಾ ಭ್ಯಾಸ ಮತ್ತು ಪ್ರಾಣಾಯಾವ ಆರಂಭವಾಗುತ್ತದೆ. ೬-೪೫ರಿಂದ ೭ ಗಂಟೆಯವರೆಗೆ ದ ಆರ್ಟ್ ಆಫ್ ಲಿವಿಂಗ್ ನೇತೃತ್ವದಲ್ಲಿ ಧ್ಯಾನ ನಡೆ ಯುತ್ತದೆ. ನಂತರ ಸಭಾ ಕಾರ್ಯ ಕ್ರಮ ನಡೆಯುತ್ತದೆ ಎಂದರು.
ಸಭಾ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಎಸ್.ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರ ನಾಂiiಕ್, ಜಿಧಿಕಾರಿ ಆರ್. ಸೆಲ್ವಮಣಿ, ಆಯುಕ್ತ ಕೆ. ಮಾಯಣ್ಣ ಗೌಡ, ಹಿರಿಯ ವೈದ್ಯರಾದ ಡಾ. ಎಲ್.ಎನ್. ನಾಯಕ್, ಯೋಗ ಶಿಕ್ಷಕ ಡಾ.ಭ. ಮ.ಶ್ರೀಕಂಠ, ಯೋಗಾಚಾರ್ಯ ಸಿ.ವಿ ರುದ್ರಾರಾಧ್ಯ, ನಗರಸಭೆ ಮಾಜಿ ಅಧ್ಯಕ್ಷ ಎನ್.ಜೆ.ರಾಜ ಶೇಖರ್, ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ರೋಹಿಣಿ ಎಂ. ಪಾಟೀಲ್ ಉಪಸ್ಥಿತರಿರುವರು ಎಂದರು.
ಸಾವಯವ ಕೃಷಿಕ ಆಹಾರ ತಜ್ಞ ಆ.ಶ್ರೀ ಆನಂದ್ ಅವರಿಂದ ಆರೋಗ್ಯ, ಆಹಾರ, ಆನಂದ ಕುರಿತು ಉಪನ್ಯಾಸ, ವಿಶೇಷ ಯೋಗ ನೃತ್ಯ, ಯೋಗ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆ ಯಲಿವೆ. ಇಂಡಿಯನ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಅಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಕೂಡ ಆಯೋಜಿಸಲಾಗಿದೆ. ಬೆಳಿಗ್ಗೆ ೫-೩೦ರಿಂದ ೯ರವರೆಗೆ ಉಪಾಹಾರದ ಮೊದಲು ಹಾಗೂ ನಂತರದ ತಪಾಸಣೆ, ನಂಜಪ್ಪ ಆಸ್ಪತ್ರೆಗಳ ಸಮೂಹದಿಂದ ಕ್ಯಾನ್ಸರ್ ತಪಾಸಣಾ ಶಿಬಿರ ಮತ್ತು ರಿಯಾಹಿತಿ ದರದಲ್ಲಿ ವಿವಿಧ ಚಿಕಿತ್ಸೆ ಮತ್ತು ತಪಾಸಣೆ, ವೈದ್ಯರೊಂದಿಗೆ ಸಮಾಲೋಚನೆ ಇರುತ್ತದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಎಸ್. ಶಿವ ಕುಮಾರ್,ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಸದಸ್ಯರಾದ ಸುರೇಖಾ ಮುರುಳೀಧರ್, ಸುವರ್ಣಾ ಶಂಕರ್ ಇದ್ದರು.