ಅ.೨೦: ಬ್ರಿಗೇಡ್ ಸ್ಥಾಪನೆ ಕುರಿತು ಸಾಧು ಸಂತರ ನೇತೃತ್ವದಲ್ಲಿ ಚಿಂತನ ಮಂಥನ …
ಶಿವಮೊಗ್ಗ: ಅ.೨೦ರಂದು ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಉತ್ತರ ಕರ್ನಾಟಕದ ಸುಮಾರು ಎರಡೂ ವರೆ ಸಾವಿರ ಕಾರ್ಯಕರ್ತರ ಚಿಂತನ ಮಂಥನ ಸಮಾವೇಶ ನಡೆಸಲು ಆ ಭಾಗದ ಸಾಧು ಸಂತರು ತೀರ್ಮಾನ ಮಾಡಿzರೆ ಎಂದು ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಟಿಯಲ್ಲಿ ಹೇಳಿzರೆ.
ಇದು ಪಕ್ಷಾತೀತ, ಜತ್ಯತೀತ ವಾಗಿರುತ್ತದೆ. ನಾಯಕತ್ವವನ್ನು ಆ ಭಾಗದ ಸಾಧು ಸಂತರೇ ವಹಿಸಲಿ zರೆ. ಇಲ್ಲಿ ಈ ಬ್ರಿಗೇಡ್‌ಗೆ ಯಾವ ಹೆಸರು ಘೋಷಣೆ ಮಾಡಬೇಕು. ಹಾಗೂ ಇದರ ಮುಂದಿನ ಕಾರ್ಯಕ್ರಮಗಳೇನು ಎಂದು ಆ ಸಮಾವೇಶದಲ್ಲಿ ಘೋಷಣೆ ಮಾಡಲಾಗುವುದು ಎಂದರು.
ಈಗಾಗಲೇ, ರಾಜ್ಯದ ಎ ಭಾಗಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿಂದುಳಿದ ವರ್ಗದ ಸಂಘಟನೆ ಅಗತ್ಯ ಎಂಬುದನ್ನು ಜನ ಮನ ಗಂಡಿzರೆ. ಅನೇಕರು ಈಗಾಗಲೇ ನಾವು ಬರುತ್ತೇವೆ ಎಂದು ಸಂಪರ್ಕಿ ಸುತ್ತಿzರೆ. ಆದರೆ, ಅಲ್ಲಿ ಕೇವಲ ಎರಡೂವರೆ ಸಾವಿರ ಜನರಿಗೆ ಮಾತ್ರ ಅವಕಾಶವಿದ್ದು, ಪ್ರಮುಖರು ಮಾತ್ರ ಬರಲು ಅವಕಾಶವಿದ್ದು, ಹಿಂದುಳಿದ ವರ್ಗದ ನಾಯಕರು ಬರುವ ಮುನ್ನ ವ್ಯವಸ್ಥೆಯ ದೃಷ್ಟಿಯಿಂದ ಪೋನ್ ಮೂಲಕ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು.
ಆಗಮಿಸಿದವರ ಸಲಹೆಯನ್ನೂ ಕೂಡ ತೆಗೆದುಕೊಳ್ಳುತ್ತೇವೆ. ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ಹಿಂದೆ ನಾನು ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದಾಗ ಕೂಡ ಅದೇ ರೀತಿ ಬೆಂಬಲ ವ್ಯಕ್ತವಾಗಿತ್ತು. ಪಕ್ಷದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಅದನ್ನು ನಿಲ್ಲಿಸಿz. ಆದರೆ, ನಾನು ತಪ್ಪು ಮಾಡಿದೆ ಎಂದು ಈಗ ಅನಿಸುತ್ತಿದೆ ಎಂದರು.
ಕೇಂದ್ರದಲ್ಲಿ ಜಂಟಿ ಸಮಿತಿ ಅಡಿಯಲ್ಲಿ ವಕ್ಪ್ ಆಸ್ತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಹಿಂದೆ ಬಿಜೆಪಿ ಸರ್ಕಾರ ಇzಗ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ವಕ್ಪ್ ಆಸ್ತಿಯ ಬಗ್ಗೆ ಅವರು ಮಾಹಿತಿ ಸಂಗ್ರಹಿಸಿ ಬಡ ಮುಸ್ಲಿಂ ವ್ಯಕ್ತಿಗಳಿಗೆ ಸೇರಬೇಕಾದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ಕೆಲವೇ ಕೆಲವು ಮುಸ್ಲಿಂ ಮುಖಂಡರ ಪಾಲಾಗಿದೆ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದರು. ಆಗ ಕಾಂಗ್ರೆಸ್ ಮುಖಂಡರು ಮತ್ತು ಆಸ್ತಿ ಲೂಟಿ ಮಾಡಿದ ಪ್ರಬಲ ನಾಯಕರು ಬಲವಾಗಿ ವಿರೋಧಿಸಿದ್ದರು. ಮತ್ತು ಅನ್ವರ್ ಮಾಣಿಪ್ಪಾಡಿ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ನಾನು ವಿಪಕ್ಷದ ನಾಯಕನಾಗಿzಗ ಪರಿಷತ್‌ನಲ್ಲಿ ಹಲವು ಬಾರಿ ಈ ವರದಿ ಬಹಿರಂಗಪಡಿಸಲು ಒತ್ತಾಯಿಸಿz. ಆಗಿನ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ತಮಗೂ ಜೀವ ಬೆದರಿಕೆ ಇದ್ದರೂ ಲೆಕ್ಕಿಸದೇ ಆ ವರದಿಯನ್ನು ಟೇಬಲ್‌ಗೆ ತಂದಿದ್ದರು. ಈಗ ಅದರು ಕೇಂದ್ರದ ಸಂಸದೀಯ ಮಂಡಳಿಯಲ್ಲಿ ಕೂಡ ಚರ್ಚೆಗೆ ಬಂದಿದೆ. ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್ ಖಾನ್ ಮೊದಲಾದ ನಾಯಕರ ಹೆಸರೂ ಇದೆ. ಕಾಂಗ್ರೆಸ್ ಪಕ್ಷ ಬಡ ಮುಸ್ಲಿಮರ ಆಸ್ತಿ ರಕ್ಷಣೆಗಾಗಿ ಈ ವರದಿಗೆ ಅಡ್ಡಿಪಡಿಸಬಾರದು. ಹಾಗೂ ಡಿ.ಹೆಚ್. ಶಂಕರ ಮೂರ್ತಿ ಮತ್ತು ಅನ್ವರ್ ಮಾಣಿ ಪ್ಪಾಡಿ ಅವರಿಗೆ ಭದ್ರತೆ ಒದಗಿಸ ಬೇಕು ಎಂದು ಆಗ್ರಹಿಸಿದರು.
ಸಾವಿರಾರು ಕೋಟಿ ಆಸ್ತಿ ಕೆಲವೇ ವ್ಯಕ್ತಿಗಳ ಪಾಲಾಗಲು ಬಿಡಬಾರದು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಈ ವರದಿ ಬಗ್ಗೆ ಗಮನಹರಿಸಲಿ ಎಂದು ಸಲಹೆ ನೀಡಿದರು.
ದಲಿತರ ಚಾಂಪಿಯನ್ ಎಂದು ಹೇಳುವ ಅವರು ೯ ವರ್ಷದ ಕೆಳಗೆ ಕಾಂತರಾಜ್ ವರದಿ ಜರಿಗೆ ತರಲು ನಾನು ಹಲವು ಬಾರಿ ಒತ್ತಾಯಿಸಿದ್ದರೂ ಇದುವರೆಗೂ ಜರಿಗೆ ತಂದಿಲ್ಲ. ಈಗ ಮುಡಾ ಹಗರಣ ಬಯಲಿಗೆ ಬಂದ ಮೇಲೆ ವರದಿ ಬಗ್ಗೆ ಮಾತನಾಡುತ್ತಿzರೆ. ಅ. ೧೮ರಂದು ಜರಿ ಮಾಡಿಯೇ ಸಿದ್ದ ಎಂದವರು ಈಗ ೨೫ಕ್ಕೆ ಮುಂದೂಡಿzರೆ. ಇದರನೋ ಕುತಂತ್ರವಿದೆ ಎಂದರು.
ರಾಷ್ಟ್ರ ಭಕ್ತರ ಬಳಗದ ಪ್ರಮುಖರಾದ ಇ. ವಿಶ್ವಾಸ್, ರಮೇಶ್ ಸರ್ಜಿಗಾರ, ಕುಬೇರಪ್ಪ, ಜಗದೀಶ್, ಮೋಹನ್ ಜಧವ್, ಶಂಕರ್ ನಾಯಕ್, ಬಾಲು, ಸುನಿಲ್ ಇತರರು ಇದ್ದರು.