ಏ.19: ವಿದ್ವಾನ್ ಗಣೇಶ್ ಪಿ. ಸ್ಮರಣಾರ್ಥ ಸಂಗೀತ…
ಕೀರ್ತಿಶೇಷ ವಿದ್ವಾನ್ ಗಣೇಶ್ ಪಿ. ಅವರು ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತೆ ವಿದೂಷಿ ಪುಷ್ಪ ಕೃಷ್ಣಮೂರ್ತಿ ಅವರ ಏಕಮೇವ ಪುತ್ರ. ಪ್ರತಿಭಾನ್ವಿತ ನೃತ್ಯ ಕಲಾವಿದರಾಗಿದ್ದ ಇವರು ಕೇವಲ ೨೫ರ ಹರೆಯದಲ್ಲಿ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದರು. ಇವರ ಸ್ಮರಣಾರ್ಥ ಪುಷ್ಪ ಪರ್ಫಾಮಿಂಗ್ ಆಟ್ಸ್ ಸೆಂಟರ್ ವತಿಯಿಂದ ನೂಪುರ ಉತ್ಸವ, ಸಂಗೀತ- ನೃತ್ಯೋಸದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಏ.೧೯ರ ನಾಳೆ (ಬುಧವಾರ) ಭದ್ರಾವತಿಯಲ್ಲಿ ಸಂಗೀತ- ನೃತ್ಯೋಸವನ್ನು ಹಮ್ಮಿಕೊಳ್ಳಲಾಗಿದ್ದು, ತನ್ನಿಮಿತ್ತ ಎಸ್.ವಿನೋದ್ ಕುಮಾರ್ (ಮೊ:೮೨೭೭೭೬೮೮೮೮) ಅವರು ಬರೆದ ಈ ಲೇಖನ ಹೊಸನಾವಿಕ ಓದುಗರಿಗಾಗಿ…
ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತೆ ವಿದೂಷಿ ಪುಷ್ಪ ಕೃಷ್ಣಮೂರ್ತಿ ಅವರ ಏಕಮೇವ ಪುತ್ರರಾಗಿದ್ದ ಕೀರ್ತಿಶೇಷ ವಿದ್ವಾನ್ ಗಣೇಶ್ ಪಿ. ಅವರು ಪ್ರತಿಭಾನ್ವಿತ ನೃತ್ಯ ಕಲಾವಿದರಾಗಿದ್ದರು. ತಮ್ಮ ಮಾತೋಶ್ರೀ ಅವರು ಸ್ಥಾಪಿಸಿದ್ದ ಪುಷ್ಪ ಪರ್ಫಾಮಿಂಗ್ ಆಟ್ಸ್ ಸೆಂಟರ್‌ನಲ್ಲಿ ನಾಲ್ಕರ ಹರೆಯದಿಂದಲೇ ಭರತನಾಟ್ಯಾಭ್ಯಾಸ ಪ್ರಾರಂಭಿಸಿದು. ಇವರಿಗೆ ತಾಯಿಯೇ ಇವರ ಮೊದಲ ಗುರು.
ಬಹಳ ಬೇಗನೆ ಪ್ರವರ್ಧಮಾನಕ್ಕೆ ಬಂದ ಶ್ರೀಯುತರು, ಕರ್ನಾಟಕ ಫ್ರೌq ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರಲ್ಲದೇ, ಮೈಸೂರು ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಸಹ ಪಡೆದರು.
ನಂತರ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಬೆಂಗಳೂರಿನ ವಿದ್ವಾನ್ ಪಿ. ಪ್ರವೀಣ್ ಕುಮಾರ್ ಅವರಲ್ಲಿ ನೃತ್ಯ ತರಬೇತಿ ಪಡೆದರು. ೨೦೧೫ರಲ್ಲಿ ರಂಗಪ್ರವೇಶ ಮಾಡಿ, ಎರಡು ಬಾರಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನ ಪಡೆದಿದ್ದ ಇವರು ಕೇಂದ್ರ ಸರ್ಕಾರದ ಮಿನಿಷ್ಟ್ರೀ ಆಫ್ ಕಲ್ಚರ್ ಅಕಾಡೆಮಿಯ ಶಿಷ್ಯವೇತನ ಸಹ ಪಡೆದಿದ್ದರು.
ತನ್ನ ೧೪ನೇ ವಯಸ್ಸಿನಲ್ಲಿಯೇ ತಾಯಿಯ ಮಾರ್ಗದರ್ಶನದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ದಾವಣಗೆರೆ ಜಿಯ ವಿವಿಧ ಭಾಗಗಳು ಹಾಗೂ ಬೆಂಗಳೂರು ನಗರದಲ್ಲಿಯೂ ಸಹ ನೃತ್ಯ ಶಾಲೆಯನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯಾಭ್ಯಾಸ ಮಾಡಿಸುತ್ತಿದ್ದರು. ಹಳ್ಳಿಯ ಬಡ ಮಕ್ಕಳು, ಎಸ್ಸಿ-ಎಸ್ಟಿ, ಬುಡಕಟ್ಟು ಜನಾಂಗದ ನೃತ್ಯಾಸಕ್ತ ಮಕ್ಕಳಿಗೆ ಉಚಿತವಾಗಿ ನೃತ್ಯ ಕಲಿಸುತ್ತಿದ್ದರು.
ಜರ್ಖಂಡ್‌ನಲ್ಲಿ ನಡೆದ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ವಿದ್ವಾನ್ ಗಣೇಶ್ ಅವರು, ಹಂಪಿ ವಿಶ್ವವಿದ್ಯಾಲಯದಲ್ಲಿ ನಾಟಕದಲ್ಲಿ ಸ್ನಾತಕೋತ್ತರ ಪದವಿ ಸಹ ಪಡೆದಿದ್ದರು.
ಕರ್ನಾಟಕದ ಅನೇಕ ಶಾಲೆಗಳಲ್ಲಿ ಹಾಗೂ ಸಂಘ-ಸಂಸ್ಥೆಗಳಲ್ಲಿ ನೃತ್ಯ ಸಂಯೋಜನೆ ಮಾಡಿ ನಿರ್ದೇಶಿಸಿ, ನೃತ್ಯ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದರು.
ಇವರ ಸಾಧನೆಯನ್ನು ಪರಿಗಣಿಸಿ ಹಲವಾರು ಸಂಘ-ಸಂಸ್ಥೆಗಳಿಂದ ನಾಟ್ಯ ಮಯೂರ, ಅನುಪಮ ಕಲಾಶ್ರೀ, ವಿಶ್ವ ಚೇತನ ಮತ್ತಿತರೆ ಬಿರುದು, ಪ್ರಶಸ್ತಿಗಳನ್ನು ಪಡೆದು ಸನ್ಮಾನಕ್ಕೊಳಗಾಗಿದ್ದರು.
ಇಂತಹ ಪ್ರತಿಭಾನ್ವಿತ ಸಾಧಕ ವಿದ್ವಾನ್ ಗಣೇಶ್ ಪಿ. ಇವರು ಕಳೆದ ೬ ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದರು.
ಮಗನ ನಿಧನದ ನಂತರವೂ ನೃತ್ಯ ಕಾರ್ಯಕ್ರಮಗಳ ಮೂಲಕ ಆತನ ಹೆಸರನ್ನು ಚಿರಸ್ಥಾಯಿಯನ್ನಾಗಿಸಲು ಪುಷ್ಪ ಕೃಷ್ಣಮೂರ್ತಿ ಅವರು ಪುಷ್ಪ ಪರ್ಫಾಮಿಂಗ್ ಆಟ್ಸ್ ಸೆಂಟರ್ ವತಿಯಿಂದ ನೂಪುರ ಉತ್ಸವ, ಸಂಗೀತ- ನೃತ್ಯೋಸದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿzರೆ.
ಕೀರ್ತಿಶೇಷ ವಿದ್ವಾನ್ ಗಣೇಶ್ ಪಿ. ಸ್ಮರಣಾರ್ಥ ಏ.೧೯ರ ನಾಳೆ (ಬುಧವಾರ) ಸಂಜೆ ೪ ಗಂಟೆಗೆ ಭದ್ರಾವತಿಯ ಜಯಶ್ರೀ ಸರ್ಕಲ್ ಸಮೀಪದ ಶ್ರೀ ರಾಮ ಮಂದಿರ ಕಲ್ಯಾಣ ಮಂಟಪದಲ್ಲಿ ಸಂಗೀತ ನೃತ್ಯೋಸ- ೨೦೨೩ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ದೇವರನಾಮ, ದೇಶಭಕ್ತಿ ಗೀತೆ, ಜನಪದ ಗೀತೆಗಳ ಸಂಗಮ, ಶಾಸ್ತ್ರೀಯ ಭರತನಾಟ್ಯ, ಜನಪದ ನೃತ್ಯ ಹಾಗೂ ಗೋವು ಸಂರಕ್ಷಣೆ ನೃತ್ಯ ರೂಪಕ ನಡೆಯಲಿದೆ. ವಿದೂಷಿ ಯಶಸ್ವಿನಿ ಕೆ.ಜೆ. ನತ್ಯ ಪ್ರದರ್ಶಿಸಲಿ zರೆ. ಮುಖ್ಯ ಅತಿಥಿಗಳಾಗಿ ಸೂಡಾ ಸದಸ್ಯೆ ಹೇಮಾವತಿ ವಿಶ್ವನಾಥ್ ರಾವ್, ಬೆಂಗಳೂರಿನ ದೇವರಾಜ್ ಅರಸ್ ಸಂಶೋಧನಾ ಸಂಸ್ಥೆಯ ಡಾ| ಅನುರಾಧಾ ಪಾಟೀಲ್ ಆಗಮಿಸುವರು. ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ, ಕರ್ನಾಟಕ ಕಲಾಶ್ರೀ, ವಿದೂಷಿ ಪುಷ್ಪ ಕೃಷ್ಣಮೂರ್ತಿ ಉಪಸ್ಥಿತರಿರುವರು.