ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ಅ.1 : ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ

Share Below Link

ಶಿಕಾರಿಪುರ : ಇದೇ ಅ.೧ ರ ಭಾನುವಾರ ಪಟ್ಟಣದ ಸುರಭಿ ಭವನದಲ್ಲಿ ರಾಜ್ಯ ಪ. ಪಂಗಡಗಳ ನೌಕರರ ಸಂಘ ತಾ.ಘಟಕ ಹಾಗೂ ತಾ.ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಸಹಯೋಗ ದೊಂದಿಗೆ ೫ ನೇ ವರ್ಷದ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ ಹಾಗೂ ನಿವೃತ್ತ ನೌಕರರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘದ ತಾ.ಘಟಕದ ಅದ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದರು.
ಗುರುವಾರ ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ಪ.ಪಂ.ಗಳ ನೌಕರರ ಸಂಘ ತಾ.ಘಟಕ ಮತ್ತು ತಾ.ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮವನ್ನು ಸತತವಾಗಿ ಆಯೋಜಿಸಲಾಗಿದ್ದು, ಐದನೇ ವರ್ಷದ ಅಂಗವಾಗಿ ಎಸ್ ಎಸ್ ಎಲ್ ಸಿಯಲ್ಲಿ ಕನ್ನಡ ಹಾಗೂ ಆಂಗ್ಲಮಾಧ್ಯಮ ಮತ್ತು ಪಿಯುಸಿ ಯಲ್ಲಿ ಕಲಾ,ವಾಣಿಜ್ಯ,ವಿeನ ವಿಭಾಗಗಳಲ್ಲಿ ಶೇಕಡ ೮೫% ಕ್ಕೂ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಶ್ರೇಣಿಯಡಿ ನಗದು ಹಣ,ಪ್ರಶಸ್ತಿ ಪತ್ರ,ಸ್ಮರಣಿಕೆ,ಪುಸ್ತಕ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ ಅವರು ಸಮಾಜ ಸಧಡ ವಾಗಲು ಶಿಕ್ಷಣ ಬಹು ಮುಖ್ಯ ವಾಗಿದ್ದು ಈ ದಿಸೆಯಲ್ಲಿ ಪ್ರತಿಭಾನ್ವಿ ತರನ್ನು ಸನ್ಮಾನಿಸುವ ಮೂಲಕ ಪ್ರತಿಭಾನ್ವಿತರನ್ನು ಉತ್ತೇಜಿಸಿ ಸಂಖ್ಯೆಯನ್ನು ಹೆಚ್ಚಿಸುವುದು ಉದ್ದೇಶವಾಗಿದೆ ಈ ದಿಸೆಯಲ್ಲಿ ಕಳೆದ ಮೂರು ನಾಲ್ಕು ವರ್ಷದಿಂದ ಪ್ರತಿಭಾನ್ವಿತರ ಸಂಖ್ಯೆ ಹೆಚ್ಚಳ ವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ಅ.೧ ರ ಭಾನುವಾರ ಪಟ್ಟಣದ ಆರೇರಕೇರಿ ಬಳಿಯ ಲ್ಲಿನ ಸುರಭಿ ಭವನದಲ್ಲಿ ಬೆಳಿಗ್ಗೆ ೧೦ ಕ್ಕೆ ನಡೆಯಲಿರುವ ಕಾರ್ಯಕ್ರಮ ವನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ನೌಕರರ ಸಂಘದ ಉಪಾಧ್ಯಕ್ಷ ಜಗದೀಶ್ವರಮೂರ್ತಿ ವೈ ಪಿ ಉದ್ಘಾಟಿಸಲಿzರೆ ಎಂದು ತಿಳಿಸಿದ ಅವರು ವಿಶೇಷ ಆಹ್ವಾನಿತ ರಾಗಿ ಬಿಆರ್‌ಪಿ ಮೆಸ್ಕಾಂ ಎಇಇ ಗುರುರಾಜ್,ಸಂಘದ ರಾಜ್ಯ ಸಂ. ಕಾರ್‍ಯದರ್ಶಿ ಶಂಕರ್ ಜಲಿಹಾಳ್, ರಾಜ್ಯ ಸಮಿತಿ ನಿರ್ದೇಶಕ ಪ್ರಭು ಮದಕರಿ,ಹಿರಿಯ ಉಪನೋಂದ ಣಾಧಿಕಾರಿ ಜಿ.ಪ್ರಸನ್ನ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿzರೆ ಎಂದು ತಿಳಿಸಿದರು.
ಶಿಕ್ಷಣ,ಸಾಹಿತ್ಯ,ಕ್ರೀಡೆ ಸಾಮಾಜಿಕ ಸೇವೆ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸಾಧಕರಿಗೆ ಹಾಗೂ ಪ್ರಸಕ್ತ ಸಾಲಿನಲ್ಲಿ ನಿವೃತ್ತರಾದ ಸರ್ಕಾರಿ ನೌಕರರಿಗೆ,ಹಿರಿಯರಿಗೆ ಗೌರ ವಿಸಲಾಗುವುದು.ವಿಶೇಷವಾಗಿ ಪಿ ಹೆಚ್‌ಡಿ ಪದವಿಗಳಿಸಿದ ನಾಲ್ವರ ನ್ನು,ರಾಜ್ಯಹಾಗೂ ರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿದ ಸಮಾ ಜದ ಇಬ್ಬರು ಕ್ರೀಡಾ ಪಟುಗಳ ನ್ನು,ಸ್ನಾತಕೋತ್ತರ ಎಂ.ಎ ಪದವಿ ಯಲ್ಲಿ ಪ್ರಥಮ ರ್‍ಯಾಂಕ್, ೧೨ ಬಂಗಾರದ ಪದಕ,ಪದವಿ ಯಲ್ಲಿ ೩ ನೇ ರ್‍ಯಾಂಕ್ ಗಳಿಸಿದ ಸ್ಥಳೀಯ ಪ್ರತಿ ಭೆಯನ್ನು ಗೌರವಿಸಿ ಸನ್ಮಾನಿಸಲಾ ಗುವುದು ಎಂದು ತಿಳಿಸಿದರು.
ಕಾರ್‍ಯಕ್ರಮದಲ್ಲಿ ಶಿವಮೊಗ್ಗದ ಉಪನಿರ್ದೇಶಕರ ಕಚೇರಿಯ ಕನ್ನಡ ವಿಷಯ ಪರಿವೀಕ್ಷಕ ಸತೀಶ್. ಎಂ ರವರಿಂದ ಮೀಸಲಾತಿ ಸದ್ಬಳಕೆ ಮತ್ತು ವಾಲ್ಮೀಕಿ ಸಮಾಜ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾ ಗಿದೆ ಎಂದು ತಿಳಿಸಿದ ಅವರು ಸಮಾಜಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸುವಂತೆ ಮನವಿ ಮಾಡಿ ದರು.
ಗೋಷ್ಟಿಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಹನು ಮಂತಪ್ಪ,ಪ.ಪಂ.ನೌಕರರ ಸಂಘ ದ ಗೌರವಾದ್ಯಕ್ಷ ಪಿ.ಸಿದ್ದಪ್ಪ, ರಾಜಪ್ಪ, ಲೋಕಪ್ಪ,ಸಂಜೀವ್ ತಹಶೀಲ್ದಾರ್, ಕೊಟ್ರೇಶಪ್ಪ, ಲೋಕೇಶ್ ಮಕರಿ,ತಿಪ್ಪೇಶ್, ಉಮಾಕಾಂತ್, ಕರಿಬಸಪ್ಪ, ಪ್ರಕಾಶ್ ಉಪಸ್ಥಿತರಿದ್ದರು.