ಬೀದಿಬದಿ ವ್ಯಾಪಾರಸ್ಥರಿಂದ ಡಿಸಿಗೆ ಮನವಿ…
ಶಿವಮೊಗ್ಗ: ಬೀದಿಬದಿ ವ್ಯಾಪಾರಿ ಗಳೆಗೆಂದೇ ಗುರುತಿಸಿದ ವ್ಯಾಪಾರದ ಜಗ, ಟಿವಿಸಿ ಕಮಿಟಿಯಲ್ಲಿ ಅನುಮೋದನೆಗೊಂಡ ವ್ಯಾಪಾರ ವಲಯಗಳನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ಪ್ರಮುಖರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರವು ನಿರುದ್ಯೋಗ ನಿವಾರಣೆ ಗಾಗಿ ಹಲವು ಯೋಜನೆಗಳನ್ನು ಜರಿಗೆ ತಂದಹಾಗೆ ಬೀದಿ ಬದಿ ವ್ಯಾಪಾರಿ ಗಳಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜರಿಗೆ ತಂದಿದೆ. ಅಂಗಾಂಗ ನ್ಯೂನ್ಯತೆ ಹೊಂದಿದವರು, ವಿಧವೆಯರು, ಆರ್ಥಿಕ ದುರ್ಬಲ ವರ್ಗದವರು, ಪಾಲಿಕೆಗೆ ಬೀದಿ ಬದಿ ವ್ಯಾಪಾರದ ಗುರುತಿನ ಚೀಟಿಗೆ ಹಾಗೂ ಪಿಎಂ ಸ್ವ-ನಿಧಿ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಟಿವಿಸಿ ಕಮಿಟಿಯ ಸದಸ್ಯರು ಪರಿಶೀಲನೆ ಮಾಡಿ ಒಂದು ಕುಟುಂಬಕ್ಕೆ ಒಂದು ಬೀದಿ ಬದಿ ಗುರುತಿನ ಕಾರ್ಡ್ ಮತ್ತು ಪ್ರಮಾಣ ಪತ್ರ ಮೇರೆಗೆ ಸಾಲ ನೀಡಲಾಗುತ್ತದೆ. ಬಹಳಷ್ಟು ಜನರಿಗೆ ಒಂದೇ ಕುಟುಂಬದ ಹಲವು ಸದಸ್ಯರಿಗೆ ಕಾರ್ಡ್ ಲಭ್ಯವಾಗಿದೆ ಎಂದರು. ಅಂತಹವರ ಕಾರ್ಡ್‌ಗಳನ್ನು ರದ್ದುಪಡಿಸಲು ಆಗ್ರಹಿಸಿದರು.
ಟಿವಿಸಿ ಕಮಿಟಿಯಲ್ಲಿ ಅನುಮೋದನೆಗೊಂಡ ವ್ಯಾಪಾರ ವಲಯಕ್ಕೆ ಬೀದಿ ಬದಿ ವ್ಯಾಪಾರಸ್ಥರನ್ನು ಸ್ಥಳಾಂತರಿಸಿ ಪುಟ್‌ಪಾತ್ ಅತಿಕ್ರಮಣ ಮುಕ್ತಗೊಳಿಸಿ ಸಾರ್ವಜನಿಕರ ಹೋರಾಟಕ್ಕೆ ಅವಕಾಶ ಕಲ್ಪಿಸಲು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ವಿವಿಧ ಇಲಾಖೆಗಳಿಂದ ಬೀದಿ ಬದಿ ವ್ಯಾಪಾರಿಗಳ ಸೌಲಭ್ಯಕ್ಕೆಂದು ಬಂದ ಅನುದಾನಗಳು ಟಿವಿಸಿ ಸದಸ್ಯರ ಗಮನಕ್ಕೆ ಬಂದಿರುವುದಿಲ್ಲ. ಅವುಗಳನ್ನು ಸಂಪೂರ್ಣ ತನಿಖೆಗೆ ಒಳಪಡಿಸಿ ಬೀದಿಬದಿ ವ್ಯಾಪಾರಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಳೆದ ಒಂದು ವರ್ಷದ ಹಿಂದೆಯೇ ಆಗ್ರಹಿಸಿದರೂ, ಇಂದಿನವರೆಗೂ ಏನು ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಮುಖರಾದ ಚನ್ನವೀರಪ್ಪ ಗಾಮನಗಟ್ಟಿ, ನಾಗಪ್ಪ ಹೆಚ್.ಎಸ್., ಅನ್ವರ್‌ಪಾಷಾ, ಸತೀಶ, ಕುಸುಮಾ ಸೇರಿದಂತೆ ಮೊದಲಾದವರಿದ್ದರು.