ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜೆಡಿಎಸ್ ಅನ್ನು ಬೂತ್ ಮಟ್ಟದಿಂದ ಸಂಘಟಿಸಲು ಕಾರ್ಯಕರ್ತರಿಗೆ ಕರೆ…

Share Below Link

ರಾಮನಗರ : ಕರುನಾಡಿನ ನೆಲ- ಜಲ ಸಂರಕ್ಷಣೆ, ರೈತರ ಸಮಸ್ಯೆಗಳಿಗೆ ಪರಿಹಾರ ಹಾಗೂ ನಾಡಿನ ಸಮಸ್ತ ಜನರು ನೆಮ್ಮದಿಯಿಂದ ಜೀವನ ನಡೆಸಬೇಕೆಂದರೆ ಅದು ಪ್ರಾದೇಶಿಕ ಪಕ್ಷ ದಿಂದ ಮಾತ್ರ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತಷ್ಟು ಸದೃಢಗೊಳಿಸುವ ಅನಿವಾರ್ಯತೆ ನಿಮ್ಮ ಮುಂದಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಸಂಸದರು, ಶಾಸಕರು ಹಾಗೂ ಮುಖಂಡರಿಗೆ ಕರೆನೀಡಿದರು.


ಬಿಡದಿ ಬಳಿಯ ತಮ್ಮ ತೋಟದ ನಿವಾಸದಲ್ಲಿ ಜೆಡಿಎಸ್ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಶಾಸಕರು, ಜೆಡಿಎಸ್ ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರುಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಮುಂ ದಿನ ದಿನಗಳಲ್ಲಿ ಯುವಕರು ಪಕ್ಷ ಮುನ್ನಡೆ ಸುವ ಜವಾಬ್ದಾರಿ ಹೊರಬೇಕಿದೆ ಎಂದರು.
ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಜವಾಬ್ದಾರಿಯನ್ನು ಜೆಡಿಎಸ್ ಯುವ ಘಟಕದ ರಾಜಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಅವರಿಗೆ ನೀಡಿರುವುದಾಗಿ ತಿಳಿಸಿದ ಅವರು, ನಿಖಿಲ್ ನನ್ನ ಮಗನಾಗಿರು ವುದರಿಂದ ನಾನು ಮಾತನಾಡುತ್ತಿಲ್ಲ. ಅವರಿಗಿರುವ ಗುಣದ ಬಗ್ಗೆ ಮಾತಾಡು ತ್ತೇನೆ. ನಾನು ಅವರನ್ನು ಪಕ್ಷಕ್ಕೆ ಒಪ್ಪಿಸು ತ್ತಿzನೆ. ಅವರಿಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿzರೆ.
ಪಕ್ಷ ಬಲವರ್ಧನೆ ಮತ್ತು ಸಂಘಟನೆ ದೃಷ್ಟಿಯಿಂದ ರಾಜ್ಯದಾದ್ಯಂತ ಮತ್ತೆ ಸದಸ್ಯತ್ವ ನೋಂದಣಿ ಪುನಾರಂಭವಾಗಬೇಕು ಎಂದು ಪಕ್ಷದ ಮುಖಂಡರುಗಳಿಗೆ ಸೂಚನೆ ನೀಡಿದ ಅವರು, ಪ್ರತಿ ಬೂತ್‌ಗಳಲ್ಲಿ ಸದಸ್ಯತ್ವ ನೋಂದಣಿ ಚಾಲನೆ ಆಗಬೇಕು. ಕೆಲವು ಜಿಗಳಲ್ಲಿ ಸದಸ್ಯತ್ವ ಚಾಲನೆ ನಿಂತಿದೆ. ಅದನ್ನು ಮತ್ತೆ ಆರಂಭಿಸಬೇಕು ಎಂದು ಅವರು ನಿರ್ದೇಶನ ನೀಡಿzರೆ.
ಚನ್ನಪಟ್ಟಣ ಉಪಚುನಾವಣೆ ಯಲ್ಲಿ ತ್ಯಾಗಮಯವಾಗಿ ಶ್ರಮಿಸಿದ ಎ ಕಾರ್ಯಕರ್ತರನ್ನು ಶ್ಲಾಘಿಸಿದ ಅವರು, ರಾಜ್ಯದ ಎಲ್ಲಾ ಜಿಲ್ಲೆ-ತಾಲೂಕುಗಳಿಂದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ತಮ್ಮ ತಮ್ಮ ಸ್ವಂತ ಖರ್ಚಿನಲ್ಲಿ ಸ್ವಇಚ್ಚೆಯಿಂದ ಬಂದು ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿದ್ದೀರಿ. ನೀವು ಪಟ್ಟ ಶ್ರಮದಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಇದು ಮುಂದಿನ ಸವಾಲುಗಳಿಗೆ ತಯಾರಾಗಲು ಸೂಚನೆಯಾಗಿದೆ. ಉಪಚುನಾವಣೆ ಫಲಿತಾಂಶಗಳು ಪಕ್ಷದ ಭವಿಷ್ಯವನ್ನು ತೀರ್ಮಾನಿಸುವುದಿಲ್ಲ ಎಂದು ಹೇಳಿzರೆ.
ಉಪಚುನಾವಣೆಗಳ ಸೋಲು- ಗೆಲುವುಗಳು ಪಕ್ಷದ ಮೇಲೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರದು ಎಂದರಲ್ಲದೆ, ಯಾವುದಕ್ಕೂ ಎದೆಗುಂದದೆ ಮುಂಬರುವ ಜಿಲ್ಲಾ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ ಶಕ್ತಿ ಮೀರಿ ಶ್ರಮಿಸುವ ಮೂಲಕ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಂತೆ ಮನವಿ ಮಾಡಿದರು.
ಪ್ರಾಮಾಣಿಕ ಕಾರ್ಯಕರ್ತರೇ ಪಕ್ಷದ ಬೆನ್ನೆಲುವು ಎಂದ ಕುಮಾರಸ್ವಾಮಿ ಅವರು, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷಕ್ಕೆ ಶಕ್ತಿ ತಂದುಕೊಟ್ಟಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಮೈತ್ರಿ ಪಕ್ಷವಾದ ಬಿಜೆಪಿಯೊಂದಿಗೆ ಸ್ಥಾನ ಹಂಚಿಕೆಯಲ್ಲಿ ಕನಿಷ್ಠ ಪಕ್ಷ ೮೦ರಿಂದ ೧೦೦ ಸ್ಥಾನಗಳಿಗೆ ಬೇಡಿಕೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂರಲ್ಲದೇ, ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಚಿಸುವ ಆಕಾಂಕ್ಷಿಗಳು ಈ ಕ್ಷಣದಿಂದಲೇ ಪಕ್ಷವನ್ನು ಸದೃಢಗೊಳಿಸುವ ಮೂಲಕ ಪ್ರತಿ ಮತದಾರರನ್ನು ತಲುಪುವ ಕೆಲಸಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
೨೦೧೮ರಲ್ಲಿ ೨೦೧೩ರಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ೭೫ ಸ್ಥಾನಗಳಿಗೆ ಕುಸಿಯಿತು. ಸಾಮಾನ್ಯ ಚುನಾವಣೆಯ ಚಿತ್ರವೇ ಬೇರೆ, ಸ್ವತಃ ಅವರ ಪಕ್ಷದ ಶಾಸಕರೇ ಅಭಿವೃದ್ಧಿಗೆ ಹಣವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿ zರೆ. ಈ ಸರ್ಕಾರವನ್ನು ಕೆಡವಲು ನಾವು ಬಿಜೆಪಿಯೊಂದಿಗೆ ಸಹಕಾರ ಮಾಡಬೇಕಾಗಿದೆ ಎಂದಿzರೆ.
ಮುಂದಿನ ದಿನಗಳಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮತ್ತಷ್ಟು ಗಟ್ಟಿ ಮಾಡುವ ಮೂಲಕ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ಸನ್ನು ಶಾಶ್ವತವಾಗಿ ವಿಪಕ್ಷದಲ್ಲಿ ಕೂರಿಸಿ ನಾಡಿನ ಜನತೆಗೆ ಉತ್ತಮ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಸಂಕಲ್ಪ ಮಾಡಬೇಕಿದೆ ಎಂದರು.
ಸಭೆಯಲ್ಲಿ ಪ್ರಮುಖರಾದ ಶಾರದಾ ಪೂರ್‍ಯಾನಾಯಕ್, ಕೆ.ಬಿ. ಪ್ರಸನ್ನಕುಮಾರ್, ರಾಕೇಶ್ ಡಿಸೋಜ, ಎಸ್.ಎಲ್. ನಿಖಿಲ್, ಬಂಡೆಪ್ಪ ಖಾಶೆಂಪುರ್, ಹೆಚ್.ಕೆ ಕುಮಾರ ಸ್ವಾಮಿ, ಸಾ. ರಾ ಮಹೇಶ್, ಸುರೇಶ ಬಾಬು, ಸಿಎಸ್ ಪುಟ್ಟರಾಜು, ನಿಖಿಲ್ ಕುಮಾರಸ್ವಾಮಿ, ಜಿ.ಟಿ. ಹರೀಶ್ ಗೌಡ, ಸಮೃದ್ಧಿ ಮಂಜುನಾಥ, ಬಾಲಕೃಷ್ಣ, ಲೀಲಾದೇವಿ ಪ್ರಸಾದ್, ಎಂ.ಟಿ. ಕೃಷ್ಣಪ್ಪ, ಮಂಜೇಗೌಡ, ರಮೇಶ್ ಗೌಡ, ತಿಪ್ಪೇಸ್ವಾಮಿ ಮತ್ತು ನಾಗರಾಜಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *