ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಂಡಾಯಕ್ಕೆ ಬಿಸಿ ಮುಟ್ಟಿಸಲು ಮುಂದಾದ ಬಿಜೆಪಿ…

Share Below Link

ಬೆಂಗಳೂರು : ಪದೇಪದೇ ಪಕ್ಷದ ನಾಯಕತ್ವದ ಕುರಿತು ಮುಜುಗರ ತರುವ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೇಂದ್ರ ಬಿಜೆಪಿ ಶಿಸ್ತುಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಶೋಕಾಸ್ ನೋಟಿಸ್ ಜರಿ ಮಾಡಿzರೆ.
ಈ ಮೂಲಕ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆ ಯತ್ನಾಳ್ ವಿರುದ್ಧ ಬಿಜೆಪಿ ಹೈಕಮಾಂಡ್ ಕ್ರಮಕ್ಕೆ ಮುಂದಾಗಿದೆ. ಹತ್ತು ದಿನಗಳೊಳಗೆ ಸ್ಪಷ್ಟೀಕರಣ ಕೊಡದಿದ್ದಲ್ಲಿ ನಿಮ್ಮ ತಪ್ಪು ನೀವೇ ಒಪ್ಪಿಕೊಂಡಂತೆ. ನಾವು ಕ್ರಮಕ್ಕೆ ಮುಂದಾಗಲು ನಿಮ್ಮ ಒಪ್ಪಿಗೆ ಇದೆಯೆಂದು ಭಾವಿಸುತ್ತೇವೆ. ಈ ಹಿಂದೆಯೂ ಹಲವು ಬಾರಿ ನೋಟಿಸ್ ಜರಿ ಮಾಡಲಾಗಿತ್ತು. ತಪ್ಪು ಸರಿಪಡಿಸಿಕೊಳ್ಳೋದಾಗಿ ಭರವಸೆ ಕೊಟ್ಟಿದ್ದಿರಿ. ಆದರೆ ಯಾವುದೂ ಬದಲಾವಣೆ ಆಗಿಲ್ಲ ಎಂದು ಪತ್ರದಲ್ಲಿ ಉಖಿಸಲಾಗಿದೆ.
ಹೈಕಮಾಂಡ್ ನಮ್ಮ ಪರ ಇದೆ ಎನ್ನುತ್ತಿದ್ದ ಯತ್ನಾಳ್ ತಂಡಕ್ಕೆ ಭಾರೀ ಹಿನ್ನಡೆಯಾಗಿದ್ದು, ಸದ್ಯಕ್ಕೆ ವಿಜಯೇಂದ್ರ ಮೇಲುಗೈ ಸಾಧಿಸಿ zರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ನೀಡಿದ್ದ ಬಹಿರಂಗ ಹೇಳಿಕೆಗಳ ಕುರಿತು ಹೈಕಮಾಂಡ್ ಗರಂ ಆಗಿದೆ. ಇದೀಗ ಶೋಕಾಸ್ ನೊಟೀಸ್ ಜರಿಯಾದ ಹಿನ್ನೆಲೆ ಯತ್ನಾಳ್ ಶೋಕಾಸ್ ನೊಟೀಸ್‌ಗೆ ಉತ್ತರ ಕೊಡುವುದಾಗಿ ಸ್ಪಷ್ಟನೆ ನೀಡಿzರೆ. ಉತ್ತರ ಕೊಡುತ್ತೇನೆ. ಹಾಗೆಯೇ ರಾಜ್ಯ ಬಿಜೆಪಿಯ ವಸ್ತುಸ್ಥಿತಿಯನ್ನೂ ವರಿಷ್ಠರಿಗೆ ತಿಳಿಸೋದಾಗಿ ಯತ್ನಾಳ್ ಎಕ್ಸ್‌ನಲ್ಲಿ ಮಾಹಿತಿ ನೀಡಿzರೆ.
ಇನ್ನು ಇಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕ ಪಾಲ್ ಅವರಿಗೆ ವಕ್ಫ್ ವಿರೋಧಿ ಜನಜಗೃತಿ ವರದಿ ಸಲ್ಲಿಸುವ ಸಲುವಾಗಿ ಯತ್ನಾಳ್ ಅವರು ನಿನ್ನೆಯೇ ದೆಹಲಿಗೆ ತೆರಳಿzರೆ. ಇಂದು ಉಳಿದ ರೆಬೆಲ್ ನಾಯಕರು ಯತ್ನಾಳ್‌ರನ್ನು ಕೂಡಿಕೊಳ್ಳಲಿzರೆ.

Leave a Reply

Your email address will not be published. Required fields are marked *