ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳುಶಿಕ್ಷಣ

ಆತ್ಮಹತ್ಯೆ ತಡೆ ಕುರಿತು ಆಪ್ತಸಮಾಲೋಚಕ ಗಣೇಶ್‌ರಾವ್ ನಾಗಿಗಾರ್‌ರೊಂದಿಗೆ ಸಂದರ್ಶನ…

Share Below Link

ಗಣೇಶ್ ರಾವ್ ನಾಡಿಗಾರ್, ಕಳೆದ ೩೦ ವರ್ಷದಿಂದ ಆಪ್ತ ಸಮಾಲೋಚನೆ ನಡೆಸುತ್ತಿzರೆ. ಮನೋಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿಧರರು, ಸಮಾಜ ಸೇವೆಯಲ್ಲಿ ಆಸಕ್ತಿ, ‘ಮನಸಾಧಾರ’ ಪುನಶ್ಚೇತನ ಕೇಂದ್ರದಲ್ಲಿ ಆಪ್ತ ಸಮಾಲೋಚಕರಾಗಿ ಹಲವು ವರ್ಷ ಸೇವೆ ಸಲ್ಲಿಸಿದ ಅನುಭವ.
ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಭಾಷಣ, ಸಂದರ್ಶನಗಳು ಪ್ರಸಾರವಾಗಿವೆ, ಸದ್ಯದಲ್ಲಿ ೨೦೧೦ರಿಂದ ಶಿವಮೊಗ್ಗ ಮಾನಸ- ಮಾನಸಿಕ ಆರೋಗ್ಯ ಮತ್ತು ನರವಿeನ, ಸಂಸ್ಥೆಯಲ್ಲಿ ಹಿರಿಯ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿzರೆ.
ವಿದ್ಯಾರ್ಥಿಗಳ ಆತ್ಮಹತ್ಯೆ ವಿಷಯದ ಕಿರು ಪರಿಚಯ:
ಬಾಲ್ಯದಲ್ಲಿ ಮಕ್ಕಳ ಮಾನಸಿಕ ಆರೋಗ್ಯದ ವ್ಯತ್ಯಾಸ ವನ್ನು ಪೋಷಕರು ಗಮನಿಸದಿರುವುದು ಮತ್ತು ಅದಕ್ಕೆ ಪೂರಕವಾಗಿ ಸೂಕ್ತ ಚಿಕಿತ್ಸೆ ನೀಡದಿರುವುದು. ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ. ಶೈಕ್ಷಣಿಕ ಚಟುವಟಿಕೆಯಲ್ಲಿ ಮಕ್ಕಳ ಮೇಲೆ ಪೋಷಕರು, ವಸತಿ ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜು ಗಳಿಂದ ಒತ್ತಡ ಹೆಚ್ಚುತ್ತಿದೆ, ಬಾಲ್ಯ, ತರುಣಾವಸ್ಥೆಯಲ್ಲಿ ಮಕ್ಕಳು ಪೋಷಕರಿಂದ ದೂರ ಇರುವಂತಾಗಿದೆ. ತಂದೆ-ತಾಯಿ, ಪೋಷಕರು ಸದಾ ಕೆಲಸ ಇನ್ನಿತರ ಚಟುವಟಿಕೆಯಲ್ಲಿ ಮಗ್ನರಾಗಿ ಮಕ್ಕಳನ್ನು ದೂರವೆರಿಸುತ್ತಿzರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗಳನ್ಯವಾಗಿ ಹೆಚ್ಚುತ್ತಿದೆ ಹಾಗೂ ವಿಶ್ವದಾದ್ಯಂತ ಸುದ್ದಿ ಮಲ್ಯ ಪಡೆದುಕೊಳ್ಳುತ್ತಿದೆ.
೧) ನಿಮ್ಮ ಪ್ರಕಾರ ವಿದ್ಯಾರ್ಥಿಗಳು ಇವತ್ತಿನ ದಿನ ಆತ್ಮಹತ್ಯೆಯನ್ನು ಹೇಗೆ ಕೊನೆಯ ಆಯ್ಕೆಯಾಗಿ ನಿರ್ಧರಿಸುತ್ತಿzರೆ.

  • ಇತ್ತೀಚಿನ ದಿನಗಳಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಕೂಡ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿzರೆ. ಕೊನೆಯ ಆಯ್ಕೆಯಾಗಿ ತೆಗೆದು ಕೊಳ್ಳುತ್ತಿರುವ ಕಾರಣವೆಂದರೆ, ತಾಳ್ಮೆ, ಸಮಾಧಾನದ ಕೊರತೆ, ಭರವಸೆ ಕಳೆದುಕೊಳ್ಳುವುದು, ಒತ್ತಡ ನಿರ್ವಹಣೆಯಲ್ಲಿ ಸೋಲುತ್ತಿzರೆ. ಅಂಕ ಗಳಿಕೆಯಲ್ಲಿ ಹಿಂದುಳಿದ ಸಂದರ್ಭದಲ್ಲಿ, ಕಡಿಮೆ ಅವಧಿಯಲ್ಲಿ ಯಶಸ್ಸನ್ನು ತಲುಪುವ ಓಟ, ಬದಲಾವಣೆ ಸಾಧ್ಯತೆ ಮಾಡಿಕೊಳ್ಳದೆ ಇರುವುದು. ದುಃಖ ಸಂಕಟಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳದೆ ಇರುವುದಾಗಿದೆ.
    ೨) ಆತ್ಮಹತ್ಯೆಯಲ್ಲಿ ಪೋಷಕರು ಶಿಕ್ಷಕರು ಹಾಗೂ ಸ್ನೇಹಿತರ ಪಾತ್ರವು ಎಷ್ಟು ಮುಖ್ಯವಾಗಬಹುದು.
  • ತಡೆಗಟ್ಟುವ ಎರಡು ಕಾರ್ಯಗಳಲ್ಲಿ ಕಾಣಬಹುದಾಗಿದೆ. ಪ್ರೋತ್ಸಾಹಿಸಲು ಕಾರಣವೆಂದರೆ ಪೋಷಕರ ತೀವ್ರತರವಾದ ಒತ್ತಡ, ಮತ್ತೊಬ್ಬರೊಂದಿಗೆ ಅನಗತ್ಯವಾಗಿ ಹೋಲಿಕೆ ಮಾಡುವುದು, ಶಿಕ್ಷಕರು ಮಕ್ಕಳಲ್ಲಿ ತಾರತಮ್ಯ ಮೂಡಿಸುವುದು, ಟೀಕಿಸುವುದು, ಸ್ನೇಹಿತರ ನಡುವಿನ ಭಿನ್ನಾಭಿಪ್ರಾಯಗಳು, ಜಗಳಗಳು, ಒತ್ತಡ, ನಿಂದನೆಗಳು, ಸ್ನೇಹದಿಂದ ಪ್ರೀತಿಗೆ ಬದಲಾವಣೆ ಹೊಂದುವ ಕಾರಣದಿಂದಾಗಿ ಆತ್ಮಹತ್ಯೆಗೆ ಪ್ರಚೋದನೆ ಆಗುತ್ತದೆ.
    ಇದನ್ನು ತೊಡೆಯಲು ಪ್ರೇರಣೆಗಳೆಂದರೆ, ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸುವುದು, ಎಲ್ಲ ಕ್ಷೇತ್ರಗಳಲ್ಲಿ ಪ್ರೋತ್ಸಾಹ ನೀಡುವುದು, ಅವರ ಸಾಮರ್ಥ್ಯಕ್ಕೆ ಬೆಂಬಲ ನೀಡುವುದು, ಪ್ರಯತ್ನ ಮಾಡುವಂತೆ ಸಹಾಯವನ್ನು ನೀಡುವುದು.
    ೩) ವಿದ್ಯಾರ್ಥಿಗಳಿಗೆ ಒತ್ತಡ ನಿರ್ವಹಣೆಗೆ ಇರುವ ಕೆಲವು ಮಾರ್ಗಗಳ ಬಗ್ಗೆ ಹೇಳುವುದಾದರೆ.
  • ಸನ್ನಿವೇಶಕ್ಕೆ ಸರಿಯಾದ ನಿರ್ವಹಣೆ ಮಾಡಿಕೊಂಡಾಗ, ಬುದ್ಧಿ ಮತ್ತು ಭಾವನೆಗಳಿಗೆ ಪ್ರಾಮುಖ್ಯತೆ ನೀಡಿದಾಗ, ನಾನುಡಿಯಂತೆ ಅತಿಯಾದ ದುಃಖದಲ್ಲಿzಗ ನಿರ್ಧಾರ ತೆಗೆದುಕೊಳ್ಳಬಾರದು.
    ಅತಿಯಾದ ಸಂತೋಷದಲ್ಲಿ zಗ ಯಾರಿಗೂ ಪ್ರಮಾಣ ನೀಡಬಾರದು ಎಂಬಂತಾಗಿರುತ್ತದೆ. ನಿರೀಕ್ಷೆಗಳನ್ನು ವಾಸ್ತವಕ್ಕೆ ತೆಗೆದುಕೊಂಡಾಗ, ನಿರ್ಧಾರದಲ್ಲಿ ಸ್ವಯಂ ಸ್ಪಷ್ಟನೆ ತೆಗೆದು ಕೊಳ್ಳುವುದು, ಪೂರ್ವ ಸಿದ್ಧತೆಯನ್ನು ಪ್ರತಿ ಜವಾಬ್ದಾರಿ ಯಲ್ಲಿ ನಿರ್ವಹಿಸುವುದರಿಂದ ಒತ್ತಡ ನಿರ್ವಹಣೆ ಸಾಧ್ಯತೆ ಇರುತ್ತದೆ. ಭಾವದ್ವೇಕದ ನಿಯಂತ್ರಣಗಳು ಮಾರ್ಗವಾಗಿರುತ್ತದೆ.
    ೪) ಆತ್ಮಹತೆ ಗುರುತಿಸುವುದಾದರೂ ಹೇಗೆ.
  • ಒಂಟಿತನವನ್ನು ಇಷ್ಟಪಡುವುದು, ಅಸಹಾಯಕತೆ ಯನ್ನು ತೋರುವುದು, ಚಟುವಟಿಕೆಗಳಲ್ಲಿ ತೊಡಗಲು ಇಷ್ಟವಾಗದೇ ಇರುವುದು, ಸಾರ್ವಜನಿಕವಾದ ಒಡನಾಟ ಕಡಿಮೆ ಮಾಡುವುದು, ಇವುಗಳು ಆತ್ಮಹತ್ಯೆ ಮಾಡಿಕೊಳ್ಳುವವರನ್ನು ಗುರುತಿಸುವುದಾಗಿದೆ.
    ೫) ಇಂಥವರ ಸಹಾಯಕ್ಕೆ ಇರುವ ಮಾರ್ಗೋಪಾಯಗಳೇನು.
  • ಒಬ್ಬಂಟಿಯಾಗಿರಲು ಬಿಡದೆ ಇರುವುದು, ದುಃಖಕ್ಕೆ ಒಳಗಾದ ವಿಷಯದಿಂದ ದೂರ ಇರಲು ಸಹಾಯ ಮಾಡಿ ಸಾಂತ್ವನ ನೀಡುವುದು, ಟೀಕೆಗಳನ್ನು ಮಾಡಬಾರದು. ಚಟುವಟಿಕೆಯಲ್ಲಿ ತೊಡಗಿಸುವುದು, ದೇಹಕ್ಕೆ ಚಟುವಟಿಕೆ ನೀಡಿದಾಗ ಮನಸ್ಸು ಹಗುರವಾಗುತ್ತದೆ, ಆತ ಸಮಾಲೋಚಕರನ್ನು ಸಂಪರ್ಕಿಸಿದಾಗ ಮಾರ್ಗೋಪಾಯ ಮಾಡಬಹುದಾಗಿದೆ.
    ಭಾರ್ಗವಿ. ಜಿ. ಆರ್.
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ. ಕುವೆಂಪು ವಿಶ್ವವಿದ್ಯಾಲಯ. ಅರದೋಟ್ಲು ಗ್ರಾಮ. ಭದ್ರಾವತಿ ತಾಲೂಕು.

Leave a Reply

Your email address will not be published. Required fields are marked *