ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಅವ್ಯವಸ್ಥೆಗಳ ಮ್ಯೂಸಿಯಂನಂತಾದ ಶಿವಮೊಗ್ಗ ಸ್ಮಾರ್ಟ್ ಸಿಟಿ…!

Share Below Link

ವಿಶೇಷ ವರದಿ : ಮುರುಳೀಧರ್ ಹೆಚ್.ಸಿ. ಶಿವಮೊಗ್ಗ.
ಇದು ಶಿವಮೊಗ್ಗ ಜನತೆಯ ದೌರ್ಭಾಗ್ಯವೋ ಅಥವಾ ಈ ಸ್ಥಳೀಯ ಸಂಸ್ಥೆಗಳ ಹಣೆಬರಹವೋ ತಿಳಿಯದು. ಶಿವಮೊಗ್ಗದ ಮಹಾನಗರ ಪಾಲಿಕೆ ಯವರು ಜನರಿಗೆ ಕುಡಿಯುವ ನೀರಿನ ಜೊತೆಗೆ ಚರಂಡಿ ನೀರು ಸೇರಿಸಿ ಪೂರೈಕೆ ಮಾಡಿ ಜನತೆಯ ಎದುರು ಬೆತ್ತಲೆಯಾಗಿದ್ದು ಈಗ ಇತಿಹಾಸ.
ಇನ್ನು ಶಿವಮೊಗ್ಗ ಸ್ಮಾರ್ಟ್ ಸಿಟಿ ಕೆಲಸವನ್ನಂತೂ ಹೇಳುವ ಹಾಗಿಲ್ಲ. ಚೆನ್ನಾಗಿರುವ ರಸ್ತೆಯನ್ನು ಅಗೆದು, ತೆಗೆದು ಜನರಿಗೆ ಓಡಾಡಲು ಸಾಧ್ಯವಿಲ್ಲದಿರುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಚರಂಡಿ ಕಾಮಗಾರಿ ವಿಷಯಕ್ಕೆ ಬಂದರೆ, ಮನೆಗಳ ಚರಂಡಿ ನೀರು ಎಲ್ಲಿ ಹೋಗುತ್ತದೆಯೋ ಗೊತ್ತಿಲ್ಲ. ಅಷ್ಟೊಂದು ಸುಂದರ ಹಾಗೂ ಸಮರ್ಪಕವಾಗಿ ಕಾಮಗಾರಿ ಮಾಡಿzರೆ..! ಈ ಸ್ಮಾರ್ಟ್ ಸಿಟಿ ಕೆಲಸದಲ್ಲಿ ರಸ್ತೆಗಳೆ ಮೇಲೆ.. ಮನೆ, ಅಂಗಡಿಗಳೆ ಕೆಳಗೆ ಎನ್ನುವಂತಹ ರೀತಿ ಇದೆ.
ಇದೆ ಜನಪ್ರಿಯ ಜನಪ್ರತಿನಿಧಿಗಳಿಗೆ ಗೊತ್ತಿದ್ದೂ ಸಹ ಸುಮ್ಮನಿzರೆಂದರೆ, ಏನೋ (ಅ)ವ್ಯವಹಾರ ನಡೆದಿದೆ ಎಂದು ಸಾಮಾನ್ಯ ನಾಗರೀಕನಿಗೂ ಗೊತ್ತಿರುವ ವಿಷಯ ಅಥವಾ ನಮ್ಮ ಕೆಲವು ಸೂಪರ್ ರಾಜಕೀಯ ನಾಯಕರುಗಳಿಗೆ ಇದರಿಂದಲೂ ಸಹ ಅವರಿಗೆ ಆತ್ಮತೃಪ್ತಿ ಸಿಕ್ಕಿರಬಹುದು..!
ಅಂದಿನ ಡಿ.ಸಿ. ಪೊನ್ನುರಾಜ್ ಕಂಡ ಕನ್ಸರ್‌ವೆನ್ಸಿಗಳ ಅಭಿವೃದ್ಧಿ ಕನಸು :
ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪಾಳು ಬಿದ್ದಿದ್ದ ಕನ್ಸರ್‌ವೆನ್ಸಿಗಳಿಗೆ ಪುನರುಜ್ಜೀವ ಗೊಳಿಸಲು ಅಂದಿನ ಜಿಧಿಕಾರಿ ಗಳಾಗಿದ್ದ ಪೊನ್ನುರಾಜ್ ಅವರು ಒಂದು ದಿಟ್ಟ ತೀರ್ಮಾನಕ್ಕೆ ಬಂದು, ಅಧಿಕಾರಿಗಳ ಸಭೆಯನ್ನು ಕರೆದು ಈ ಯೋಜನೆಯ ಅನುಷ್ಟಾನಕ್ಕೆ ಕಾಯಕಲ್ಪ ನೀಡಿದ್ದರು. ಇದಕ್ಕೊಂದು ಹಿನ್ನೆಲೆಯೂ ಇದೆ.
ನಗರದ ಕಸ್ತೂರಬಾ ರಸ್ತೆ (ಕಮಲಾ ನೆಹರು ಕಾಲೇಜು ಬಳಿ) ಸಣ್ಣ ವ್ಯಾಪಾರಸ್ಥರು ಸಸ್ಯಹಾರಿ ಮತ್ತು ಮಾಂಸಹಾರಿ ತಳ್ಳುವ ಗಾಡಿಗಳಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಈ ಪೈಕಿ ಮಾಂಸಹಾರಿ ತಳ್ಳುವ ಗಾಡಿಗಳ ಗ್ರಾಹಕರು ದಾರಿಯಲ್ಲಿ ಹೋಗುವ ನಾಗರೀಕರಿಗೆ ವಿಪರೀತ ತೊಂದರೆಯನ್ನು ಕೊಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಈ ವಿಷಯ ಕುರಿತು ಖುದ್ದು ಜಿಧಿಕಾರಿಗಳ ಕಛೇರಿಯ ತನಕ ದೂರು ಹೋಗಿತ್ತು. ಇದನ್ನು ಮನಗಂಡ ಜಿಧಿಕಾರಿಗಳು ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಯೋಚಿಸುತ್ತಿರುವಾಗಲೇ ಒಂದು ದಿನ ಡಿಸಿ ಪೊನ್ನುರಾಜ್‌ರವರು ಕಾರ್ಯನಿಮಿತ್ತ ನಗರದ ಕಸ್ತೂರಬಾ ರಸ್ತೆ ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿzಗ ಕಮಲಾ ನೆಹರು ಕಾಲೇಜು ಬಳಿ ಮಾಂಸಹಾರಿ ಗ್ರಾಹಕನೊಬ್ಬ ನಾಗರೀಕರೊಬ್ಬರನ್ನು ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ಕಣ್ಣಾರೆ ನೋಡಿದರು. ಮಾರನೇ ದಿನವೇ ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂಘದ ಪ್ರಮುಖರ ಸಭೆ ಕರೆದ ಡಿಸಿಯವರು ನಾಳೆಯಿಂದಲೇ ತಳ್ಳುವ ಗಾಡಿಯವರನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆದೇಶ ನೀಡಿದರು.
ಹಾಗೆಯೇ ನಗರದ ಪಾಳು ಬಿದ್ದಿರುವ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿ ಪಡಿಸಿ, ಸಸ್ಯಹಾರಿಗಳಿಗೆ ಹಾಗೂ ಮಾಂಸಹಾರಿಗಳಿಗೆ ಬೇರೆ ಬೇರೆ ಫುಡ್ ಕೋರ್ಟ್‌ಗಳನ್ನು ನಿರ್ಮಾಣ ಮಾಡಿ ಎರಡೂ ಗ್ರಾಹಕರಿಗೆ ಹೊರೆಯಾಗದಂತೆ ಬೆಲೆ ನಿಗದಿಗೊಳಿಸುವಂತೆ ಆದೇಶ ನೀಡಿದರು.
ಜಿಧಿಕಾರಿಗಳ ಆದೇಶದಂತೆ, ಮಲ್ಲಿಕಾರ್ಜುನ ಚಿತ್ರಮಂದಿರದ ಬಳಿಯಿರುವ ಕನ್ಸರ್‌ವೆನ್ಸಿಯನ್ನು ಅಭಿವೃದ್ಧಿ ಪಡಿಸಿ ಅಲ್ಲಿ ಸಸ್ಯಹಾರಿ ಫುಡ್‌ಕೋರ್ಟ್ ಹಾಗೂ ಸವಾರ್‌ಲೈನ್ ರಸ್ತೆ ಬಳಿಯ ಕನ್ಸರ್‌ವೆನ್ಸಿ ಜಗವನ್ನು ಅಭಿವೃದ್ಧಿ ಪಡಿಸಿ ಅಲ್ಲಿ ಮಾಂಸಹಾರಿ ಫುಡ್ ಕೋರ್ಟ್ ಗಳನ್ನು ನಿರ್ಮಿಸಿ ಬೀದಿಬದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಕಡಿಮೆ ದರದಲ್ಲಿ ಬಾಡಿಗೆ ನೀಡಿ ಲೋಕಾರ್ಪಣೆ ಮಾಡಲಾಯಿತು. ನಂತರ, ಇನ್ನುಳಿದ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಿ ಅಲ್ಲಿ ದ್ವಿಚಕ್ರ ಹಾಗೂ ಕಾರುಗಳ ನಿಲುಗಡೆ ಗೊಳಿಸಲು ಡಿಸಿಯವರು ಆದೇಶ ನೀಡಿದರು.
ಕೆಲವು ಕನ್ಸರ್‌ವೆನ್ಸಿ ಜಗವನ್ನು ಅಭಿವೃದ್ಧಿಗೊಳಿಸಿ ಈ-ಟಾಯ್ಲೆಟ್ ವ್ಯವಸ್ಥೆಯನ್ನು ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯಡಿ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸವನ್ನು ಮಾಡಲಾಗಿತ್ತು. ಇದರಿಂದ ಸಾರ್ವಜನಿಕ ಸ್ಥಳ ಹಾಗೂ ರಸ್ತೆಗಳಲ್ಲಿ ಮೂತ್ರ ವಿಸರ್ಜನೆಯನ್ನು ನಿರ್ಮೂಲನೆ ಮಾಡುವುದು ಯೋಜನೆಯ ಗುರಿಯಾಗಿತ್ತು.
ನಮ್ಮ ನಗರದ ದುರಂತವೆಂದರೆ, ಡಿಸಿಯವರ ಕನಸಿನ ಕೂಸಾಗಿದ್ದ ಕನ್ಸರ್‌ವೆನ್ಸಿ ಜಗವನ್ನು ಸಾರ್ವಜನಿಕ ಬಳಕೆಯ ಯೋಜನೆಯನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಲಾಯಿತು. ಡಿಸಿಯವರು ವರ್ಗಾವಣೆಗೊಳ್ಳಲು ಶಿವಮೊಗ್ಗದ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಾಣದ ಕೈಗಳು ಶ್ರಮಪಟ್ಟು ಕೆಲಸ ಮಾಡಿದವು. ಶಿವಮೊಗ್ಗದ ಅನೇಕ ಕನ್ಸರ್‌ವೆನ್ಸಿಗಳು ಇಂದಿಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿಲ್ಲ. ಇನ್ನೂ ಕೆಲವು ಕನ್ಸರ್‌ವೆನ್ಸಿಗಳಲ್ಲಿ ರಾತ್ರಿ ಹೊತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿಯೂ ಇದೆ. ಮತ್ತೆ ಕೆಲವು ಕಡೆ ಈ-ಟಾಯ್ಲೆಟ್ ವ್ಯವಸ್ಥೆಯಿದ್ದರೂ, ಅದರ ಬಾಗಿಲಿಗೆ ಅಸ್ಮಾರ್ಟ್ ಸಿಟಿ ಅಧಿಕಾರಿಗಳು ಬೀಗ ಜಡಿದಿದು ಬೆಚ್ಚಗೆ ಕುಳಿತಿದ್ದಾರೆ.
ಇದಕ್ಕೊಂದು ತಾಜಾ ಉದಾಹರಣೆಯೆಂದರೆ, ಶಿವಮೊಗ್ಗದ ವೆಂಕಟೇಶನಗರದಲ್ಲಿರುವ ಕನ್ಸರ್‌ವೆನ್ಸಿಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಶಿವಮೊಗ್ಗ ಸ್ಮಾಟ್‌ಸಿಟಿ ಯೋಜನೆಯಡಿ ಈ-ಟಾಯ್ಲೆಟ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಈ-ಟಾಯ್ಲೆಟ್‌ನಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಅದರ ಹಿಂಭಾಗದಲ್ಲಿ ಸುಮಾರು ಏಳು ಅಡಿ ಸುತ್ತಳತೆ ಹಾಗೂ ಗುಂಡಿಯನ್ನು ನಿರ್ಮಿಸಿ ಅದರಲ್ಲಿ ಶೇಖರಣೆ ಮಾಡುವ ಒಂದು ಸಂಪನ್ನು ನಿರ್ಮಾಣ ಮಾಡಲಾಗಿದೆ. ದುರ್ದೈವವೆಂದರೆ, ಈ ಸಂಪ್‌ಗೆ ಅಳವಡಿಸಿದ್ದ ಮೇಲ್ಛಾವಣಿಯನ್ನು ಕಳ್ಳರು ಕzಯ್ದಿzರೆ. ಇತ್ತೀಚೆಗೆ ಸುರಿದ ಭಾರೀ ಮಳೆಗೆ ಈ ಸಂಪ್‌ನಲ್ಲಿ ಅರ್ಧಕ್ಕಿತ ಹೆಚ್ಚಿನ ಕೊಳಚೆ ನೀರು ಶೇಖರಣೆಯಾಗಿ ಸುತ್ತಮುತ್ತಲ ನಾಗರೀಕರಿಗೆ ದುರ್ವಾಸನೆ ಬರುತ್ತಿದೆ. ವೆಂಕಟೇಶ ನಗರದಲ್ಲಿರುವ ಎಣ್ಣೆಅಂಗಡಿಯೊಂದರಿಂದ ತಂದ ಎಣ್ಣೆಯನ್ನು ಈ-ಟಾಯ್ಲೆಟ್ ಬಳಿಯಲ್ಲಿಯೇ ಕುಳಿತು ಕುಡಿದು ತೂರಾಡುವ ಪ್ರಸಂಗವನ್ನು ದಿನನಿತ್ಯ ಕಾಣಬಹುದು. ಅಲ್ಲದೇ ಈ-ಟಾಯ್ಲೆಟ್ ಹಿಂದಿನ ಸಂಪ್ ಬಳಿಯೂ ಮದ್ಯಪಾನಿಗಳು ಕುಳಿತು ಕುಡಿಯುತ್ತಿzರೆ. ಇದೆಲ್ಲವನ್ನೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸ್ಮಾಟ್‌ಸಿಟಿ ಹಾಗೂ ಮಹಾ ನಗರಪಾಲಿಕೆ ಅಧಿಕಾರಿಗಳು ಕಂಡೂ ಕಾಣದಂತೆ ಇzರೆ.
ಸಾಲದೆಂಬಂತೆ, ಈ-ಟಾಯ್ಲೆಟ್ ಬಳಿ ಮೆಸ್ಕಾಂನವರು ಒಂದು ಎಲೆಕ್ಟ್ರಿಕಲ್ ಬಾಕ್ಸ್ ಅಳವಡಿಸಿzರೆ. ಅದರಿಂದ ಸುಮಾರು ೪ ಕರೆಂಟ್ ವೈರ್‌ಗಳನ್ನು ಬಾಕ್ಸ್ ನಿಂದ ಹೊರಗೆ ಬಿಡಲಾಗಿದೆ. ಅದರಲ್ಲಿ ಒಂದು ವೈರ್ ಸ್ಕಿನ್ ಆಗಿ ಹೊರಗಡೆ ಬಂದಿದೆ. ಇದನ್ನೇನಾದರೂ ಮದ್ಯಪಾನಿಗಳು ಫುಲ್‌ಟೈಟ್ ಆದಾಗ ಮುಟ್ಟಿದರೆ ಹರೋಹರ….! ಅಥವಾ ಕುಡಿದ ಮತ್ತಿನಲ್ಲಿ ಅದನ್ನು ತಪ್ಪಿಸಿಕೊಂಡು ಸಂಪ್ ಬಳಿ ಬಂದು ಸಂಪ್‌ಗೆ ಬಿದ್ದರೆ ಅವನ ಹೆಣವೂ ಸಿಗುವುದಿಲ್ಲ. ಅಂತಹ ಪರಿಸ್ಥಿತಿ ಇಲ್ಲಿದೆ.
ಈ ಅವ್ಯವಸ್ಥೆಗಳಿಗೆ ಕಾರಣೀಭೂತರಾದ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಹೇಳಿದರೆ, ಇಲ್ಲ, ನಾವು ಶಿವಮೊಗ್ಗ ಮಹಾನಗರ ಪಾಲಿಕೆಗೆ ಎ ಕೆಲಸಗಳನ್ನು ವರ್ಗಾಯಿಸಿದ್ದೇವೆ ಎನ್ನುತ್ತಾರೆ. ಮಹಾನಗರಪಾಲಿಕೆಯವರನ್ನು ವಿಚಾರಿಸಿದರೆ, ಸ್ಮಾರ್ಟ್ ಸಿಟಿಯವರು ನಮಗೆ ಯಾವುದೇ ಕೆಲಸಗಳನ್ನು ವರ್ಗಾಯಿಸಿಲ್ಲ ಎನ್ನುತ್ತಾರೆ. ಒಟ್ಟಿನಲ್ಲಿ ಶಿವಮೆಗ್ಗ ಸ್ಮಾರ್ಟ್ ಸಿಟಿ ಹಾಗೂ ಮಹಾನಗರಪಾಲಿಕೆಯ ಜುಗಲ್ ಬಂಧಿಯಿಂದ ಶಿವಮೊಗ್ಗದ ಜನತೆ ಹೈರಾಣಾಗಿರುವುದು ಸತ್ಯ.
ಈ ಎ ಪ್ರಶ್ನೆಗಳಿಗೆ ಉತ್ತರಿಸುವವರು ಶಿವಮೊಗ್ಗದ ನಾಗರೀಕರಿಗೆ ಈ-ಸ್ವತ್ತು ಮಾಡಿಸಿಕೊಡುವುದರಲ್ಲಿ ಬಿಜಿಯಾಗಿzರೆ. ಇನ್ನು ನಮ್ಮ ಶಿವಮೊಗ್ಗವನ್ನು ಸಾಕ್ಷಾತ್ ಕೋಟೆ ಶ್ರೀ ಹನುಮನೇ ಕಾಪಾಡಬೇಕು…!!!

Leave a Reply

Your email address will not be published. Required fields are marked *