ಎಸ್‌ಪಿ ಕಛೇರಿ ಬಳಿ ಹೊಸ ಜಿಲ್ಲಾಡಳಿತ ಭವನ…
ಶಿವಮೊಗ್ಗ: ಎಸ್‌ಪಿ ಕಚೇರಿ ಹಿಂಭಾಗದಲ್ಲಿ ಹೊಸ ಜಿಲ್ಲಾಡಳಿತ ಭವನ ಆರಂಭಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೂಚನೆ ನೀಡಿದರು. ಹೊಸ ಜಿಲ್ಲಾಡಳಿತ ಭವನದಲ್ಲಿ ಎಲ್ಲಾ ಇಲಾಖೆ ಅಲ್ಲೇ ಬರಲಿದೆ. ಅದಕ್ಕೆ ತಗಲುವ ವೆಚ್ಚ ತಿಳಿಸಲು ಡಿಸಿಗೆ ಸೂಚಿಸಿದರು. ಪಿಡಬ್ಲೂಡಿಯಿಂದ ಅರ್ಕಿಟೆಕ್ಟ್ ಮುಂದಿನ ವಾರ ಬರಲಿದ್ದಾರೆ. ೧೦ ದಿನಗಳಲ್ಲಿ ಅನುದಾನ ಎಷ್ಟು ಬೇಕು ಎಂಬುದು ತಿಳಿಯಲಿದೆ ಎಂದರು.
ಸೋಗಾನೆಯಲ್ಲಿ ಫುಡ್ ಪಾರ್ಕ್ ನಿರ್ಮಾಣ ವಿಚಾರದಲ್ಲಿ ಅಧಿಕಾರಿಗಳು ಮಾತನಾಡಿ, ೪೭ ಲಕ್ಷ ರೂ ಅನುದಾನ ದೊರೆತಿದೆ. ನಬಾರ್ಡ್‌ನಿಂದ ಡಿಪಿಆರ್ ಮಾಡಲಿದ್ದಾರೆ. ಅಗ್ರಿಕಲ್ಚರ್ ಇಲಾಖೆಯಲ್ಲಿ ನಿರ್ಮಾಣವಾಗಲಿದೆ. ಫುಡ್‌ಪಾರ್ಕ್‌ಗೆ ಸಿಎಂ ಅನೌನ್ಸ್ ಮಾಡಿದ ಮೇಲೆ ಯಾಕೆ ತಡವೆಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ನೈಟ್ ಲ್ಯಾಂಡಿಂಗ್ ಆರಂಭ:
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಇಲ್ಲವಾದ ಕಾರಣ ವಿಮಾನಗಳ ಹಾರಾಟಕ್ಕೆ ತೊಂದರೆ ಉಂಟಾಗಿತ್ತು. ಇದಕ್ಕೆ ಇಂದು ನಡೆದ ಸಭೆಯಲ್ಲಿ ಜನವರಿಯಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಆರಂಭ ವಾಗಲಿದೆ. ಇದಕ್ಕೆ ಹಣ ಇಡಲಾಗುತ್ತಿದೆ. ೬೬೦ ಕೋಟಿ ರೂ. ಹಣ ಕುಡಿಯುವ ನೀರು ಯೋಜನೆಯನ್ನ ಶಿರಾಳಕೊಪ್ಪ, ಆನವಟ್ಟಿ ಮತ್ತು ಸೊರಬಕ್ಕೆ ಹಣ ಮೀಸಲಿಡಲಾಗುತ್ತಿದೆ. ಚಂದ್ರಗುತ್ತಿ ದೇಗುಲದ ಅಭಿವೃದ್ಧಿಗೆ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸಿಕ್ತಾ ಇದೆ. ಶೀಘ್ರದಲ್ಲಿಯೇ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಶಿವಮೊಗ್ಗದ ಅಲ್ಲಮ ಪ್ರಭು ಪ್ರೀಡಂ ಪಾರ್ಕ್ ಅಭಿವೃದ್ಧಿಗೆ ಮತ್ತು ಬಳ್ಳಿಗಾವಿಯಲ್ಲಿ ಅಲ್ಲಮಪ್ರಭು ಹುಟ್ಟಿದ ಸ್ಥಳದ ಅಭಿವೃದ್ಧಿಗೆ ಹಣದ ಅನುದಾನಕ್ಕೆ ಜನವರಿ ಒಳಗೆ ಪ್ರಸ್ತಾವನೆ ಕಳುಹಿಸಲು ಸೂಚಿಸಲಾಗಿದೆ. ಫ್ರೀಡಂಪಾರ್ಕ್ ಗೆ ೫ ಕೋಟಿ ಹಣ ಬಿಡುಗಡೆಯಾಗಿದೆ ಎಂದರು.