ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮಾನಸ ಸ್ಕೂಲ್‌ನಿಂದ ಚಿತ್ರಕಲಾ ಸ್ಪರ್ಧೆ…

Share Below Link

ಶಿವಮೊಗ್ಗ: ಕೋಟೆಗಂಗೂರಿನ ಮಾನಸ ಇಂಟರ್‌ನ್ಯಾಷನಲ್ ಐಸಿಎಸ್‌ಇ ಶಾಲೆ ವತಿಯಿಂದ ಡಿ.೧ರ ಬೆಳಿಗ್ಗೆ ೧೦ಕ್ಕೆ ಶಾಲಾ ಆವರಣದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲೆ ಕೆ.ವಿ.ಸೌಮ್ಯ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತರುವ ಉದ್ದೇಶದಿಂದ ಪ್ರತಿವರ್ಷವೂ ಈ ಸ್ಪರ್ಧೆ ಆಯೋಜಿಸುತ್ತಿದ್ದು, ಈ ಸ್ಪರ್ಧೆಗೆ ಎಲ್‌ಕೆಜಿಯಿಂದ ೧೦ನೇ ತರಗತಿವರೆಗೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ೭ ವಿಭಾಗದಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, ಎಲ್‌ಕೆಜಿ, ಯುಕೆಜಿ, ೧ ಮತ್ತು ೨ನೇ ತರಗತಿ ಮಕ್ಕಳಿಗೆ ನೀಡಲಾಗಿರುವ ಚಿತ್ರಕ್ಕೆ ಬಣ್ಣ ತುಂಬುವುದು, ೩ರಿಂದ ೪ನೇ ತರಗತಿವರೆಗೆ ಪರಿಸರ ಮಾಲಿನ್ಯ, ೫ ಮತ್ತು ೬ನೇ ತರಗತಿವರೆಗೆ ಸ್ವಚ್ಛಭಾರತ್, ೭ ಮತ್ತು ೮ನೇ ತರಗತಿಗೆ ವನ್ಯಜೀವಿಗಳ ರಕ್ಷಣೆ, ೯ ಮತ್ತು ೧೦ನೇ ತರಗತಿ ಮಕ್ಕಳಿಗೆ ಪ್ರಕೃತಿ ವಿಕೋಪಗಳು ವಿಷಯ ಕುರಿತು ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ೧ಕ್ಕೆ ಬಹುಮಾನ ವಿತರಿಸಲಾಗುವುದು ಎಂದರು.
ಪ್ರತಿ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಆಕರ್ಷಕ ಬಹುಮಾನವಿದ್ದು, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಶಿವಮೊಗ್ಗದ ವಿನೋಬನಗರದಿಂದ, ಆಲ್ಕೊಳದಿಂದ ಹಾಗೂ ಶಿವಮೊಗ್ಗ ಬಸ್ ನಿಲ್ದಾಣದಿಂದ ಶಾಲಾ ವಾಹನದ ಸೌಲಭ್ಯವಿದೆ ಎಂದರು.
ಪ್ರವೇಶ ಶುಲ್ಕ ೫೦ ರೂ. ಇದ್ದು, ಹೆಸರು ನೊಂದಾಯಿಸಲು ಹಾಗೂ ಮಾಹಿತಿಗಾಗಿ ೯೩೫೩೧೪೩೦೩೩, ೯೪೮೧೨೬೫೪೦೫ ಅಥವಾ ೯೪೪೮೯೭ ೬೮೮೭ರಲ್ಲಿ ಸಂಪರ್ಕಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾರಾ, ಸಂದೀಪ್, ಅರುಣಾ ಕೆ.ವಿ., ಅಂಥೋನಿ ಜಿಪ್ಸನ್‌ದೀಪ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *