ಯುವನಿಧಿ ಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನ…
ಶಿವಮೊಗ್ಗ : ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ನೋಂದಣೆ ಚಾಲ್ತಿಯ ಲ್ಲಿದ್ದು, ಅರ್ಹರು ಸೇವಾ ಸಿಂಧು ಪೋರ್ಟಲ್ ಅಥವಾ ಹತ್ತಿರದ ಗ್ರಾಮ ಒನ್, ಶಿವಮೊಗ್ಗ ಒನ್ ಕೇಂದ್ರಗಳ ಮೂಲಕ ಆನ್‌ಲೈನ್ ನೋಂದಣಿ ಆಹ್ವಾನಿಸಿದೆ.
೨೦೨೨-೨೩ನೇ ಹಾಗೂ ನಂತರದ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ (ವತ್ತಿಪರ ಸೇರಿದಂತೆ) ಹಾಗೂ ಯಾವುದೇ ಡಿಪ್ಲೊಮಾ ಪಡೆದು ನಿರುದ್ಯೋಗಿ ಯಾಗಿರುವ ಅರ್ಹರು ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು ರೂ. ೩೦೦೦ (ಪದವೀಧರ ನಿರುದ್ಯೋಗಿಗಳು) ಹಾಗೂ ರೂ. ೧೫೦೦ (ಡಿಪ್ಲೊಮಾ ಪಡೆದ ನಿರುದ್ಯೋಗಿಗಳು) ನೇರ ನಗದು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
೨೦೨೨-೨೩ರಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣಾರಾದವರು, ಪದವಿ/ಡಿಪ್ಲೊಮಾ ನಂತರ ಕನಿಷ್ಟ ೬ ತಿಂಗಳ ಅವಧಿಯವರೆಗೆ ಸರ್ಕಾರಿ /ಖಾಸಗಿ ಉದ್ಯೋಗ ಹೊಂದಿಲ್ಲದ ವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವ್ಯಾಸಂಗ ಮುಂದುವರಿಸದೇ ಇರುವವರು, ಕರ್ನಾಟಕದಲ್ಲಿ ವಾಸವಿರುವವರು ಯುವನಿಧಿ ಯೋಜನೆಗೆ ನೊಂದಣಿ ಮಾಡಿ ಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಜಿ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿ ಉದ್ಯೋಗ ವಿನಿಮಯ ಕಚೇರಿ, ಸಾಗರ ರಸ್ತೆ, ೨ನೇ ತಿರುವು, ಗುತ್ಯಪ್ಪ ಕಾಲೋನಿ ಶಿವಮೊಗ್ಗ. ಫೋ:೦೮೧೮೨-೨೫೫೨೯೩ ಅಥವಾ ಸಹಾಯವಾಣಿ ೧೮೦೦೫೯೯೯೯೧೮ ನ್ನು ಸಂಪರ್ಕಿಸುವುದು.